ಲಿಂಗಸಗೂರು: ತಾಲೂಕಿನ ಹಟ್ಟಿ ಚಿನ್ನದ ಗಣಿ ಪಟ್ಟಣದ ಕರ್ನಾಟಕ ಕಾರ್ಯ ನಿರತ ಪತ್ರಕರ್ತನ ಧ್ವನಿ ಸಂಘಟನೆಯ ನೂತನ ಅಧ್ಯಕ್ಷರಾಗಿ ಶ್ರೀನಿವಾಸ್ ಮಧುಶ್ರೀ ಇವರನ್ನು ಮುಂದಿನ ಎರಡು ವರ್ಷಗಳವರೆಗೆ ಆಯ್ಕೆ ಮಾಡಿ ಕ ನಿ ಪ ಧ್ವನಿ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ಇವರು ಆದೇಶ ಹೊರಡಿಸಿದ್ದಾರೆ.
ಹಟ್ಟಿ ಚಿನ್ನದ ಗಣಿ ಪಟ್ಟಣದ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀನಿವಾಸ್ ಮಧುಶ್ರೀ ಇವರು ಮಾತನಾಡಿ ಮುಂದಿನ ದಿನಗಳಲ್ಲಿ ಕ ನಿ ಪ ಧ್ವನಿ ಸಂಘಟನೆಯ ಎಲ್ಲಾ ಸದಸ್ಯರನ್ನು ಒಗ್ಗೂಡಿಸಿ ಈ ಧ್ವನಿ ಸಂಘಟನೆಯ ಹೆಸರು ಜೊತೆಗೆ ರಾಜ್ಯಾಧ್ಯಕ್ಷರ ಹೆಸರಿಗೆ ಚ್ಯುತಿ ಬರದಂತೆ ನಡೆಸುವ ಜವಾಬ್ದಾರಿ ನನ್ನ ಮೇಲಿದೆ ಹಾಗೂ ಇನ್ನು ಕೆಲವೇ ದಿನಗಳಲ್ಲಿ ಹಟ್ಟಿ ಪಟ್ಟಣದಲ್ಲಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತನ ಧ್ವನಿ ಸಂಘಟನೆಯ ಹೆಸರಿನ ಪತ್ರಿಕಾ ಭವನವನ್ನು ಉದ್ಘಾಟನೆ ಮಾಡಲಾಗುವುದು , ಕೆಲವೇ ಕೆಲವು ದಿನಗಳಲ್ಲಿ ಸುದ್ದಿ ಗೋಷ್ಠಿ ನಡೆಸಲು ಪತ್ರಿಕಾ ಭವನ ಉದ್ಘಾಟನೆ ಮಾಡುತ್ತೇವೇ ಎಂದು ಹೇಳಿದರು. ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷ ಸಾಧಿಕ್ ಶಾಲಿ, ರಶೀದ್, ಮಲ್ಲಿಕಾರ್ಜುನ ಅಲಬನೂರ್ ವಿಘ್ನೇಶ್ ನಗ್ನೂರ್ ಸೇರಿದಂತೆ ಶ್ರೀನಿವಾಸ ಮಧುಶ್ರೀ ಇವರಿಗೆ ಅಭಿನಂದನೆ ಸಲ್ಲಿಸಿದರು.