Ad imageAd image

ಮೇಟಿ ಅವರು ಮಾಡಿದ ಅಭಿವೃದ್ಧಿ ಕೆಲಸಗಳು ಗೆಲುವಿಗೆ ಶ್ರೀರಕ್ಷೆ :ಆರ್. ಬಿ ತಿಮ್ಮಾಪುರ

Bharath Vaibhav
ಮೇಟಿ ಅವರು ಮಾಡಿದ ಅಭಿವೃದ್ಧಿ ಕೆಲಸಗಳು ಗೆಲುವಿಗೆ ಶ್ರೀರಕ್ಷೆ :ಆರ್. ಬಿ ತಿಮ್ಮಾಪುರ
WhatsApp Group Join Now
Telegram Group Join Now

ಬಾಗಲಕೋಟೆ: ದಿ. ಎಚ್.ವೈ. ಮೇಟಿ ಅವರು ಮಾಡಿದ ಅಭಿವೃದ್ಧಿ ಕೆಲಸಗಳು ಗೆಲುವಿಗೆ ಶ್ರೀರಕ್ಷೆಯಾಗಲಿವೆ. ಅವರು ನಡೆದು ಬಂದ ದಾರಿ, ಕಾರ್ಯಕರ್ತರಿಗೆ ಕೊಡುತ್ತಿದ್ದ ಗೌರವದಿಂದಾಗಿ ಕಾಂಗ್ರೆಸ್ ಗೆಲುವು ಖಚಿತ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿ ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೃಷ್ಣಾ ಮೇಲ್ದಂಡೆ ಯೋಜನೆಗೆ ಮುಳುಗಡೆಯಾಗುವ ಭೂಮಿಗೆ ಪರಿಹಾರದ ಮೊತ್ತ ಹೆಚ್ಚಿಸಿರುವುದು ಕಾಂಗ್ರೆಸ್ ಸರ್ಕಾರ ತೆಗೆದುಕೊಂಡ ಐತಿಹಾಸಿಕ ನಿರ್ಧಾರವಾಗಿದೆ. ಈಗ ಪರಿಹಾರ ಮೊತ್ತ ವಿತರಣೆಯನ್ನೂ ಆರಂಭಿಸಲಾಗಿದೆ ಎಂದರು.

ಟಿಕೆಟ್ ಗೆ ಸಂಬಂಸಿದಂತೆ ನಮ್ಮ ಪಕ್ಷದಲ್ಲಿ ಯಾವುದೇ ಕಗ್ಗಂಟು ಇಲ್ಲ. ಮೇಟಿ ಅವರ ಕುಟುಂಬದ ಸದಸ್ಯರೆಲ್ಲ ಒಗ್ಗಟ್ಟಾಗಿದ್ದಾರೆ.

ದಾವಣಗೆರೆ ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಳಂಬದಿಂದಾಗಿ ಬಾಗಲಕೋಟೆ ಕ್ಷೇತ್ರದ್ದಕ್ಕೂ ವಿಳಂಬವಾಗಿದೆ. ಯಾವುದೇ ಕ್ಷಣದಲ್ಲಿ ಹೆಸರು ಘೋಷಣೆಯಾಗಲಿದೆ. ಈ ಕುರಿತು ಪಕ್ಷದ ಮುಖಂಡರೊಂದಿಗೆ ಮಾತನಾಡಿದ್ದೇನೆ ಎಂದು ಹೇಳಿದರು.

ಚುನಾವಣೆಯಲ್ಲಿ ಅವರು (ಬಿಜೆಪಿ) ಮುಂದಿದ್ದಾರೆ. ನಾವು (ಕಾಂಗ್ರೆಸ್) ಹಿಂದಿದ್ದೇವೆ ಎಂಬುದಿಲ್ಲ. ಅವರ ಅಭ್ಯರ್ಥಿ ಘೋಷಣೆಯಾಗಿರುವುದರಿಂದ ಪ್ರಚಾರ ಮಾಡುತ್ತಿದ್ದಾರೆ. ನಾವೂ ಇಂದು ಸಭೆ ಕರೆದಿದ್ದೇವೆ. ಪ್ರಚಾರವನ್ನೂ ಆರಂಭಿಸುತ್ತೇವೆ ಎಂದರು.

ಬಿಜೆಪಿಯವರಿಗೆ ಒಳಮೀಸಲಾತಿ ನೆನಪಾಗಿದೆ. ಅಧಿಕಾರದಲ್ಲಿದ್ದಾಗ ಏನು ಮಾಡಿದರು? ಸೆಡ್ಯೂಲ್ 9 ರಲ್ಲಿ ಸೇರಿಸಿದರಾ? ಜನರಲ್ಲಿ ಸುಮ್ಮನೆ ಗೊಂದಲ ಹುಟ್ಟುಹಾಕುತ್ತಾರೆ. ಸುಳ್ಳು ಹೇಳಿಕೊಂಡೇ ತಿರುಗಾಡುತ್ತಾರೆ ಎಂದು ಟೀಕಿಸಿದರು.

ಗ್ಯಾರಂಟಿ ಕೊಟ್ಟಿದ್ದು ತಪ್ಪು ಎಂದು ಅವರು ಘಂಟಾಘೋಷವಾಗಿ ಹೇಳಲಿ. ಒಳಗೊಳಗೆ ಹೇಳುವುದಲ್ಲ. ಬಡವರ ಹೊಟ್ಟೆಗೆ ಅನ್ನ, ಬೆಳಕು ಕೊಟ್ಟಿದ್ದು ತಪ್ಪು ಎಂದು ಹೇಳಿ ಜನತೆ ಮುಂದೆ ಬಿಜೆಪಿಯವರು ಹೋಗಲಿ. ಆಗ ಜನತೆ ಏನು ಹೇಳುತ್ತಾರೆ ಎಂದು ಗೊತ್ತಾಗುತ್ತದೆ ಎಂದು ಸವಾಲು ಹಾಕಿದರು.

ಸಿದ್ದರಾಮಯ್ಯ ಸುಳ್ಳು ಹೇಳುತ್ತಾರೆ ಎಂದು ಚಿತ್ರುದುರ್ಗದ ಸಂಸದರು ಟೀಕಿಸಿದ್ದಾರೆ. 2013ರ ಪಾದಯಾತ್ರೆ ಬಗ್ಗೆ ಹೇಳುತ್ತಾರೆ. ಆನಂತರ ಇವರು ಅಧಿಕಾರಕ್ಕೆ ಬಂದಿದ್ದರಲ್ಲ ಏನು ಮಾಡಿದರು.

ನೀರಾವರಿ ಸಚಿವರಾಗಿದ್ದಾಗ ಯುಕೆಪಿ ಯೋಜನೆ ನೆನಪಾಗಲಿಲ್ಲವೇ? ಮುಖ್ಯಮಂತ್ರಿ ಬಗ್ಗೆ ಮಾತನಾಡಲು ಇವರಿಗೇನು ನೈತಿಕತೆ ಇದೆ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಅಭ್ಯರ್ಥಿ ಮಾ.23ರಂದು ಮಧ್ಯಾಹ್ನ 12.30 ರಿಂದ 2.30ರೊಳಗೆ ನಾಮಪತ್ರ ಸಲ್ಲಿಸಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಸಂಪುಟದ ಸಚಿವರು ಭಾಗವಹಿಸಲಿದ್ದಾರೆ. ಪಕ್ಷದ ಗೆಲುವಿಗೆ ಯಾವುದೇ ತೊಂದರೆ ಇಲ್ಲ. ಮುಖಂಡರು, ಕಾರ್ಯಕರ್ತರು ಒಟ್ಟಾಗಿ ಚುನಾವಣೆ ಎದುರಿಸಲಿದ್ದೇವೆ ಎಂದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!