ಬೆಂಗಳೂರು :-ಯಶವಂತಪುರ ವಿಧಾನಸಭಾ ಕ್ಷೇತ್ರದ ಅಂದ್ರಹಳ್ಳಿ ಮುಖ್ಯರಸ್ತೆಯ ನಾಡ ಪ್ರಭು ಕೆಂಪೇಗೌಡ ವೃತ್ತ (ಚೇತನ್ ಸರ್ಕಲ್) ಸಮೀಪದ ಸ್ವಾತಿ ಬಾರ್ ಹತ್ತಿರ ಸರ್ವೋತ್ತಮ ಶೆಟ್ಟಿ ಅವರ ಮಾಲೀಕತ್ವದ ಶ್ರೀರಾಮ ಬೇಕರಿ ಆಂಡ್ ಸ್ವೀಟ್ಸ್ ಪುನರ್ಪ್ರಾರಂಬೋತ್ಸವವನ್ನು ಬಹು ವಿಜೃಂಭಣೆಯಿಂದ ಹಾಗೂ ಅದ್ದೂರಿಯಾಗಿ ರಾಜಕೀಯ ಮುಖಂಡರ, ವಿವಿಧ ಸಂಘ ಸಂಸ್ಥೆಗಳ ಪ್ರಮುಖರ, ಕೈಗಾರಿಕಾ ಉದ್ಯಮಿಗಳ, ಗಣ್ಯರುಗಳ ಸಮ್ಮುಖದಲ್ಲಿ ಭಾರತೀಯ ಸಂಸ್ಕೃತಿ ಪರಂಪರೆ ಸಂಪ್ರದಾಯದಂತೆ ಜ್ಯೋತಿ ಬೆಳಗಿಸಿ ಉದ್ಘಾಟಿಸಲಾಯಿತು.ಬೇಕರಿ ಪುನರ್ ಪ್ರಾರಂಭೋತ್ಸವದ ಅಂಗವಾಗಿ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ಅಂದ್ರಹಳ್ಳಿ ಮುಖ್ಯರಸ್ತೆಯಲ್ಲಿಯೇ ಹೆಸರುವಾಸಿ ಆಗಿರುವ ಶ್ರೀರಾಮ ಬೇಕರಿ ಆಂಡ್ ಸ್ವೀಟ್ಸ್ ನಲ್ಲಿ ವಿಶೇಷವಾದ ತುಪ್ಪದ ರಸ್ಕ್, ಹಲವು ಬಗೆಯ ಕೇಕ್ ಗಳಾದ ಬಟರ್ ಕೇಕ್, ಫೆಸ್ಟಿಕೇಟ್, ಫ್ರೂಟ್ಸ್ ಕೇಕ್, ಐಸ್ ಕೇಕ್, ಪ್ಲೈನ್ ಕೇಕ್, ಮಾರ್ಬಲ್ ಕೇಕ್ ಸೇರಿದಂತೆ ವಿವಿಧ ರೀತಿಯ ಎಲ್ಲಾ ಬಗೆಯ ಬೇಕರಿಯ ಉತ್ಪನ್ನಗಳು ಹಾಗೂ ಹಲವು ಬಗೆಯ ಸ್ವೀಟ್ಸ್ ಗಳು ದೊರೆಯಲಿವೆ. ಅದಲ್ಲದೆ ಹತ್ತು ದಿನಗಳ ಕಾಲ ವಿಶೇಷ ಆಫರ್ ನೀಡಲಾಗುವುದು ಎಂದು ಮಾಲೀಕ ಸರ್ವೋತ್ತಮ ಶೆಟ್ಟಿ ಉದ್ಘಾಟಿಸಿ ಅವರು ಮಾತನಾಡಿದರು.
ಸಂದರ್ಭದಲ್ಲಿ ಬೃಂದಾವನ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಹಾಗೂ ಯುವ ಮುಖಂಡ ಅರುಣ್ ಬೈಲಪ್ಪ ,ಸೀತಾರಾಮ್ ಶೆಟ್ಟಿ ಪೀಣ್ಯ ಕೈಗಾರಿಕಾ ಸಂಘದ ಖಜಾಂಚಿ, ನಿರ್ಮಾಪಕ, ಉದ್ಯಮಿ ಹಾಗೂ ಆಮ್ ಆದ್ಮಿ ಪಕ್ಷದ ಅಧ್ಯಕ್ಷ ಚನ್ನಕೇಶವ್, ಕಾಂಗ್ರೆಸ್ ಮುಖಂಡರಾದ ಹೊಸಹಳ್ಳಿ ಸತೀಶ್, ವಿಜಯ್ ಕುಮಾರ್, ಗೌತಮಿ ಬೇಕರಿ ಅಂಡ್ ಸ್ವೀಟ್ಸ್ ನ ಮಾಲೀಕ ವಿದ್ಯಾಧರ ಶೆಟ್ಟಿ, ಅರುಣ್ ಕುಮಾರ್, ಮನೋಹರ್ ಶೆಟ್ಟಿ, ವಿನುತಾ ಶೆಟ್ಟಿ, ತನವ್ ಶೆಟ್ಟಿ ಸೇರಿದಂತೆ ಹಲವಾರು ಗಣ್ಯರು, ಮುಖಂಡರು, ಮಹಿಳೆಯರು ಸಾರ್ವಜನಿಕರು ಹಿತೈಷಿಗಳು, ಅಂದ್ರಹಳ್ಳಿಯ ಸಮಸ್ತ ನಾಗರಿಕ ಬಂಧು ಭಗನಿಯರು ಉಪಸ್ಥಿತರಿದ್ದರು.
ವರದಿ: -ಅಯ್ಯಣ್ಣ ಮಾಸ್ಟರ್