Ad imageAd image

ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳದಿಂದ ಶ್ರೀರಾಮನವಮಿ ಉತ್ಸವ

Bharath Vaibhav
ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳದಿಂದ ಶ್ರೀರಾಮನವಮಿ ಉತ್ಸವ
WhatsApp Group Join Now
Telegram Group Join Now

ಏ.19 ರಂದು ಮಧ್ಯಾಹ್ನ ಭವ್ಯ ಶೋಭಾ ಯಾತ್ರೆ|

ಸಾಯಂಕಾಲ ಸಾರ್ವಜನಿಕ ಸಭೆ| ಡೆಹರಾಡೋನ್ ನ ಹಿಂದೂಪರ ರಾಷ್ಟಿçÃಯ ಚಿಂತಕಿ ಮೀನಾಕ್ಷಿ ಸೇರಾವತ್ ರಿಂದ ಬಹಿರಂಗ ಸಭೆ||
ಭಾಲ್ಕಿ: ಪಟ್ಟಣದಲ್ಲಿ ಇದೇ ಏ.19 ರಂದು ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳದ ಸಂಯುಕ್ತಾಶ್ರಯದಲ್ಲಿ ಶ್ರೀರಾಮನವಮಿ ಉತ್ಸವ ಏರ್ಪಡಿಸಲಾಗಿದೆ. ಉತ್ಸವದಲ್ಲಿ ಅಪಾರ ಜನಸಂಖೆಯಲ್ಲಿ ಭಾಗವಹಿಸಿ ಉತ್ಸವದ ಲಾಭ ಪಡೆಯಿರಿ ಎಂದು ಶ್ರೀರಾಮ ನವಮಿ ಉತ್ಸವ ಸಮಿತಿಯ ಅಧ್ಯಕ್ಷ ಶಿವು ಲೋಖಂಡೆ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಶ್ರೀರಾಮನವಮಿ ಉತ್ಸವ ಭವ್ಯ ಶೋಭಾ ಯಾತ್ರೆಯ ಕರಪತ್ರ ಬಿಡುಗಡೆ ಮಾಡಿ ಅವರು ಮಾತನಾಡಿದರು. ಪ್ರತಿವರ್ಷದಂತೆ ಈ ವರ್ಷವೂ ಶ್ರೀರಾಮನವಮಿ ಉತ್ಸವ ಸಮಿತಿಯ ವತಿಯಿಂದ ಶ್ರೀರಾಮನವಮಿ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರಸ್ತುತ ಸಾಲಿನಲ್ಲಿ ನಡೆಯುವ ಉತ್ಸವದಲ್ಲಿ ಮುಖ್ಯ ವಕ್ತಾರರಾಗಿ ಹಿಂದೂಪರ ಚಿಂತಕಿ ಡೆಹರಾಡೋನ್‌ನ ಮೀನಾಕ್ಷಿ ಸೇರಾವತ್ ಭಾಗವಹಿಸಿ ಮಾತನಾಡಲಿದ್ದಾರೆ.

ಭಾಲ್ಕಿಯ ಎಲ್ಲಾ ನಾಗರಿಕರು ಇದರ ಲಾಭ ಪಡೆಯಬೇಕು ಎಂದರು. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಹಿಂದೂ ಜನರು ಸಂಘಟೆಯಾಗುತ್ತಿದ್ದಾರೆ. ಯು.ಪಿಯ ಪ್ರಯಾಗ್ ರಾಜ್ ನಲ್ಲಿ ನಡೆದ ಕುಂಭಮೇಳದಲ್ಲಿ ಸುಮಾರು 70 ಕೋಟಿ ಜನರು ಭಾಗಿಯಾಗಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಸನಾತನ ಧರ್ಮದ ಜಾಗೃತಿ ಕಾರ್ಯ ನಡೆಸುವುದು ಇಂದಿನ ಅಗತ್ಯವಾಗಿದೆ ಎಂದು ಹೇಳಿದರು.

ರಾಮನವಿ ಉತ್ಸವ ಸಮಿತಿಯ ಕಾರ್ಯದರ್ಶಿ ಚನ್ನಬಸವಣ್ಣ ಬಳತೆ ಮಾತನಾಡಿ, ತಂದೆಯ ಮಾತಿಗೆ ಕಾಡಿಗೆ ಹೋಗಿ ಜೀವನ ಕಳೆದ ರಾಮ ನಮ್ಮೆಲ್ಲರ ಆದರ್ಶಪುರುಷ, ಶೋಭಾ ಯಾತ್ರೆಯು ಹಳೆ ಪಟ್ಟಣದ ವಿಠಲ ಮಂದಿರದಿAದ ಮದ್ಯಾನ್ಹ 1.30 ಗಂಟೆಗೆ ಪ್ರಾರಂಭವಾಗಿ, ಹಳೆ ಪಟ್ಟಣದ ಚೌಡಿ, ತೀನ್ ದುಕಾನ ಗಲ್ಲಿ, ವೀರಭದ್ರೇಶ್ವರ ಮಂದಿರ, ಗಡಿ, ಬಸ್ ನಿಲ್ದಾಣ, ಅಂಬೇಡ್ಕರ್ ವೃತ್ತದ ಮೂಲಕ ಹಾದು ಗಾಂಧಿವೃತ್ತದಲ್ಲಿ ಸಮಾವೇಶ ಗೊಳ್ಳುವುದು. ಶೋಭಾ ಯಾತ್ರೆಯಲ್ಲಿ ಕೇರಳ ಮತ್ತು ಮಂಗಳೂರಿನ ಕಲಾತಂಡ ಕರೆತರಿಸಲಾಗಿದೆ. ಭಾಲ್ಕಿಯ ಮಕ್ಕಳಿಂದ ರಾಮ ಸೀತೆಯರ ವೇಶ ಧರಿಸಿ ಮೆರವಣ ಗೆಗೆ ಕಳೆ ನೀಡಲಾಗುವುದು ಎಂದು ಹೇಳಿದರು.

ಉತ್ಸವ ಸಮಿತಿಯ ಖಜಾಂಚಿ ಸಂತೋಷ ಶ್ರೀಮಾಳೆ, ಸದಸ್ಯರಾದ ಜಗದೀಶ ಖಂಡ್ರೆ, ವಿಲಾಸ ಬಕ್ಕಾ, ಸಾಗರ ಮಾಲಾನಿ, ಪ್ರಿಯಾ ದಶಮುಖೆ, ಮೀನಾಕ್ಷಿ ಬಿರಾದಾರ, ಸುನಿತಾ ಬಿರಾದಾರ, ಲಕ್ಷಿö್ಮÃತಾಯಿ ಸಿಂದೆ, ಶುಭಾಂಗಿ ಬಳತೆ, ಅನುಸುಯಾ ರೆಡ್ಡಿ, ಕವಿತಾ ನಿತೀನ ಪಾಟೀಲ, ಸುನಿತಾ ಮೀನಕೆರೆ, ಸುರೇಖಾ ರೆವಣೇಶ ವಿರಶೆಟ್ಟೆ, ವಿಜಯಲಕ್ಷಿö್ಮ ಶಿಂದೆ, ಜ್ಯೋತಿ ಬಿರಾದಾರ ಇದ್ದರು.

*ಮಾತೃ ಶಕ್ತಿಯ ಸುಮಾರು 100 ಜನ ಮಹಿಳೆಯರು ಕುಂಭ ಮೇಳ ಹೊತ್ತು, ವಿಠಲ ಮಂದಿರದಿAದ ಗಾಂಧಿ ವೃತ್ತದ ವರೆಗೆ ಮೆರವಣಿಗೆಯಲ್ಲಿ ಭಾಗವಹಿಸುವರು.
ಮೀನಾಕ್ಷಿ ಬಿರಾದಾರ, ಅಧ್ಯಕ್ಷರು, ಮಾತೃಶಕ್ತಿ ತಿಳಿಸಿದರು.

ವರದಿ: ಸಂತೋಷ ಬಿಜಿ ಪಾಟೀಲ, ಭಾಲ್ಕಿ

WhatsApp Group Join Now
Telegram Group Join Now
Share This Article
error: Content is protected !!