ಇದು ಅವೈಜ್ಞಾನಿಕ ಜಾತಿ ಜನಗಣತಿ ಎಂದು ಸ್ವಾಮೀಜಿ ಅಭಿಪ್ರಾಯ
ಚಿಕ್ಕೋಡಿ : ಶ್ರೀಶೈಲ ಪೀಠದ ಜಗದ್ಗುರು ಚನ್ನಸಿದ್ಧರಾಮ ಪಂಡಿತಾರಾಧ್ಯ ಸ್ವಾಮೀಜಿ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರು ಕಾಡಸಿದ್ದೇಶ್ವರ ಮಠದಲ್ಲಿ ಹೇಳಿಕೆ.
ಪ್ರಾಮಾಣಿಕತೆಯಿಂದ ಕೂಡಿಲ್ಲ ಮತ್ತು ಅವೈಜ್ಞಾನಿಕ ವರದಿಯಾಗಿದೆ
ಮನೆ ಮನೆಗೆ ಹೋಗಿ ಸಂಪರ್ಕ ಮಾಡದೇ ಯಾವ ಆಧಾರ ಮೇಲೆ ಮಾಡಿದ್ದಾರೋ ಗೊತ್ತಿಲ್ಲ.
ಯಾವುದೇ ಕಾರಣಕ್ಕೂ ವರದಿಗೆ ಬೆಂಬಲ ನೀಡುವುದಿಲ್ಲ ಆಕ್ರೋಶ.
ಕೋಟಿಗಿಂತಲು ಮೇಲೇರಬೇಕಾದ ವೀರಶೈವರ ಸಂಖ್ಯೆ 60 ಲಕ್ಷಕ್ಕೆ ಸೀಮಿತಗೊಳಿಸಿದ ವರದಿ.
ಈ ವರದಿ ಜಾರಿ ಮಾಡುವುದನ್ನು ಕೈ ಬಿಟ್ಟು ಮರು ಗಣತಿ ಆದೇಶ ಮಾಡಿ.
ಅಖೀಲ ಭಾರತ ವೀರಶೈವ ಮಹಾಸಭೆ, ವೀರಶೈವ ಲಿಂಗಾಯತ ಸಮಾಜದ ಪ್ರಾಥಮಿಕ ಸಂಸ್ಥೆ.
ಇದೆ ನಿಲುವನ್ನು ಪ್ರತಿಪಾದನೆ ಮಾಡಿವೆ. ಅದನ್ನು ನಾವು ಬೆಂಬಲಿಸುತ್ತಿವೆ.
ವೀರಶೈವ ಲಿಂಗಾಯತ ಬೇರೆ ಬೇರೆ ಎಂದು ಹಿಂದೆ ಸರ್ಕಾರ ಕೈ ಸುಟ್ಟುಕೊಂಡಂತೆ
ಮತ್ತೆ ಈ ಬಾರಿ ಕೈ ಸುಟ್ಟುಕೊಳ್ಳುವ ಪರಿಸ್ಥಿತಿ ತಂದುಕೂಳ್ಳಬಾರದು.
ವೀರಶೈವ ಲಿಂಗಾಯತ ಶಾಸಕರು, ಸಚಿವರು ಈ ವಿಷಯ ಗಂಭೀರವಾಗಿ ಚಿಂತನೆ ಮಾಡಬೇಕು.
ಸಮಾಜದ ಮೇಲೆ ಅನ್ಯಾಯ ಆಗದಂತೆ ಸರ್ಕಾರದ ಮೇಲೆ ಒತ್ತಡ ತರಬೇಕು.
ವರದಿ : ಅಜಯ್ ಕಾಂಬಳೆ