Ad imageAd image

ರಂಜಾನ್ ಹಬ್ಬವನ್ನು ಶಾಂತ ರೀತಿಯಲ್ಲಿ ಆಚರಿಸಬೇಕು : ಇನ್‌ಸ್ಪೆಕ್ಟರ್ ಜನಾರ್ದನ್

Bharath Vaibhav
ರಂಜಾನ್ ಹಬ್ಬವನ್ನು ಶಾಂತ ರೀತಿಯಲ್ಲಿ ಆಚರಿಸಬೇಕು : ಇನ್‌ಸ್ಪೆಕ್ಟರ್ ಜನಾರ್ದನ್
WhatsApp Group Join Now
Telegram Group Join Now

ಚೇಳೂರು: ಮುಸ್ಲಿಂ ಬಾಂದವರು ಸೌಹರ್ದತೆಯಿಂದ ಮುಂಬರುವ ರಂಜಾನ್ ಹಬ್ಬವನ್ನು ಶಾಂತ ರೀತಿಯಲ್ಲಿ ಆಚರಿಸಬೇಕು,ಎಲ್ಲರೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಾರದಂತೆ ನಡೆದುಕೋಳ್ಳಬೇಕೆಂದು ಪೊಲೀಸ್ ಇನ್‌ಸ್ಪೆಕ್ಟರ್ ಜನಾರ್ದನ್ ಹೇಳಿದರು.

ತಾಲೂಕಿನ ಚೇಳೂರು ಪೋಲಿಸ್ ಠಾಣೆಯ ಆವರಣದಲ್ಲಿ ಮಂಗಳವಾರ ರಂಜಾನ್ ಹಬ್ಬದ ಪ್ರಯುಕ್ತ ಶಾಂತಿ ಸಬೆಯನ್ನು ಉದ್ದೆಶಿಸಿ ಮಾತನಾಡಿದ ಅವರು ಯಾವುದೇ ಹಬ್ಬ- ಹರಿದಿನಗಳು ಸಮಾಜದಲ್ಲಿ ಶಾಂತಿ ನೆಲೆಸಲು ಆಚರಿಸಲಾಗುತ್ತದೆ. ರಾಗದ್ವೇಷ ಹರಡಲಿಕ್ಕೆ ಅಲ್ಲ. ಆದ್ದರಿಂದ ಹಬ್ಬಗಳನ್ನು ಎಲ್ಲರೂ ಸೇರಿ ಸಂತೋಷದಿಂದ ಆಚರಿಸಬೇಕು ಎಂದು ಮನವಿ ಮಾಡಿದರು.

ಹಬ್ಬದ ಸಮಯದಲ್ಲ ವಿಲಿಂಗ್ ಮಾಡುವರ ವಿರುದ್ಧ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳುತ್ತದೆ. ರಂಜಾನ್ ಹಬ್ಬದ ಪ್ರಯುಕ್ತ ಎಲ್ಲ ಸಮುದಾಯದ ಜನರು ಸೌಹಾರ್ದಯುತವಾಗಿ ಹಬ್ಬ ಆಚರಿಸಬೇಕು . ಯಾವುದೇ ರೀತಿಯ ಗಲಾಟೆ, ಜನರಿಗೆ ತೊಂದರೆಯಾಗದ ರೀತಿಯಲ್ಲಿ ಮುಖಂಡರು ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಚೇಳೂರು ಠಾಣೆಯ ಸಬ್ ಇನ್ಸ್ಪೆಕ್ಟರ್ ಹರೀಶ್ ಹಾಗೂ ಸಿಬ್ಬಂದಿ ವರ್ಗದವರು ಸೇರಿದಂತೆ ಮದೀನಾ ಮಸೀದಿಯ ಅಧ್ಯಕ್ಷರಾದ ಅಲೀಂ ಭಾಷಾ, ಸ್ಟುಡಿಯೋ ಮುನ್ನ, ಕಲೀಂವುಲ್ಲಾ,ನಯಾಜ್ ಮೆಕ್ಯಾನಿಕ್,ಸಾದಿಕ್ ಭಾಷಾ, ಖಾದರ್ ವಲಿ, ರೋಬ್ ಸಾಬ್, ಮುಜಾಹಿದ್, ಅಮಾನುಲ್ಲಾ,ಹಾಜರಿದ್ದರು.

ವರದಿ :ಯಾರಬ್. ಎಂ.

WhatsApp Group Join Now
Telegram Group Join Now
Share This Article
error: Content is protected !!