Ad imageAd image

ಪಾಸ್ ಆಗಿದ್ದರೂ, ಫೇಲ್ ಆಗಿದ್ದೇನೆ ಎಂದು ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿ ಆತ್ಮಹತ್ಯೆ

Bharath Vaibhav
ಪಾಸ್ ಆಗಿದ್ದರೂ, ಫೇಲ್ ಆಗಿದ್ದೇನೆ ಎಂದು ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿ ಆತ್ಮಹತ್ಯೆ
WhatsApp Group Join Now
Telegram Group Join Now

ಮಂಡ್ಯ: ಇಂದು ಪ್ರಕಟವಾದಂತ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪಾಸ್ ಆಗಿದ್ದರೂ, ತಾನು ಫೇಲ್ ಆಗಿದ್ದೇನೆ ಎಂಬುದಾಗಿ ಭಾವಿಸಿದಂತ ವಿದ್ಯಾರ್ಥಿನಿಯೊಬ್ಬಳು, ಆತ್ಮಹತ್ಯೆ ಮಾಡಿಕೊಂಡಿರುವಂತ ಘಟನೆ ಮಂಡ್ಯದ ಹುಲಿಗೆಪುರ ಗ್ರಾಮದಲ್ಲಿ ನಡೆದಿದೆ.

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹುಲಿಗೆಪುರ ಗ್ರಾಮದ ಹೆಚ್.ಎಂ ಅಮೃತ(15) ಇಂದು ಪ್ರಕಟವಾದಂತ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625ಕ್ಕೆ 353 ಅಂಕವನ್ನು ಪಡೆದಿದ್ದರು.

ಶೇ.57ರಷ್ಟು ಫಲಿತಾಂಶ ಆಕೆಗೆ ಬಂದಿತ್ತು. ಆದ್ರೇ ಪಾಸ್ ಆಗಿದ್ದರೂ, ಫೇಲ್ ಆಗಿದ್ದೇನೆ ಎಂಬುದಾಗಿ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಅಂದಹಾಗೆ ನಗರಕೆರೆ ಗ್ರಾಮದ ಪೂರ್ಣಿಮಾ ಪ್ರೌಢಶಾಲೆಯಲ್ಲಿ ಓದುತ್ತಿದ್ದಂತ ಅಮೃತ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದಾಗಿಯೂ ಹೇಳಲಾಗುತ್ತಿದೆ.

ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!