ಸಿರುಗುಪ್ಪ : ತಾಲೂಕು ಮಾರ್ಗವಾಗಿ ಬಳ್ಳಾರಿಯಿಂದ ಲಿಂಗಸೂಗೂರು ವರೆಗೆ ನೂತನ ರೈಲು ಮಾರ್ಗದ ಕೆಲಸ ಆರಂಭಿಸುವಂತೆ ರಾಜ್ಯ ರೈಲ್ವೆ ಕ್ರಿಯಾ ಸಮಿತಿ ಸಿರುಗುಪ್ಪ ಘಟಕದಿಂದ ಮಾಜಿ ಶಾಸಕರ ನೇತೃತ್ವದಲ್ಲಿ ರಾಜ್ಯ ರೈಲ್ವೆ ಸಚಿವರಾದ ವಿ.ಸೋಮಣ್ಣ ಅವರ ಬೆಂಗಳೂರಿನ ನಿವಾಸದಲ್ಲಿ ಬೇಟಿಯಾಗಿ ಮನವಿ ಪತ್ರ ಸಲ್ಲಿಸಿರುವುದಾಗಿ ಕರ್ನಾಟಕ ರೈಲು ಕ್ರಿಯಾ ಸಮಿತಿ ಬಳ್ಳಾರಿಯ ಅಧ್ಯಕ್ಷ ಕೆ.ಎಮ್.ಮಹೇಶ್ವರಪ್ಪ ಅವರು ಮಾಹಿತಿ ನೀಡಿದ್ದಾರೆ.

ಮಾಜಿ ಶಾಸಕರಾದ ಎಮ್.ಎಸ್.ಸೋಮಲಿಂಗಪ್ಪ ಅವರು ಮಾತನಾಡಿ ಬಳ್ಳಾರಿ ಸಿರುಗುಪ್ಪ ಸಿಂದನೂರಿನಿಂದ ಲಿಂಗಸುಗೂರುವರೆಗಿನ ಹೊಸ ರೈಲ್ವೆ ಮಾರ್ಗದ ಕೆಲಸವನ್ನು ಪ್ರಾರಂಭಿಸಲು ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿ ಮತ್ತು ಸಿರುಗುಪ್ಪ ತಾಲ್ಲೂಕಿನ ಜನ ಪ್ರತಿನಿಧಿಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ರೈತರು ಮತ್ತು ನಾಗರಿಕರು ಒಂದೇ ಧ್ವನಿಯಲ್ಲಿ ವಿನಂತಿಸಲಾಗುತ್ತಿದೆ.
ಇಷ್ಟರಲ್ಲೇ ತುಮಕೂರು, ರಾಯದುರ್ಗ, ಬಳ್ಳಾರಿ ರೈಲ್ವೆ ಮಾರ್ಗ ಕಾಮಗಾರಿ ಪೂರ್ಣಗೊಳ್ಳಲಿದ್ದು, ಬಳ್ಳಾರಿಯಿಂದ ಸಿರುಗುಪ್ಪ ಸಿಂಧನೂರು ಲಿಂಗಸೂಗೂರು ಮಾರ್ಗವಾಗಿ ಕಾಮಗಾರಿ ಆರಂಭಿಸಿದಲ್ಲಿ ರಾಜಧಾನಿಗೆ ರಾಯಚೂರು,ಕಲ್ಬುರ್ಗಿ ಜಿಲ್ಲೆಗಳಿಗೆ ಅತಿ ಕಡಿಮೆ ದೂರದಲ್ಲಿ ಸಂಪರ್ಕವಾಗುತ್ತದೆ.
ಆದ್ದರಿಂದ ತಾವುಗಳು 2013-14ನೇ ಸಾಲಿನ ರೈಲ್ವೆ ಬಜೆಟ್‌ನಲ್ಲಿ ಪ್ರಸ್ತಾವನೆಗೊಂಡ ಯೋಜನೆ ಪೂರ್ಣಗೊಳಿಸಿದಲ್ಲಿ ಕಲ್ಯಾಣ ಕರ್ನಾಟಕದ ಜನತೆಗೆ ರೈಲು ಸೌಲಭ್ಯ ದೊರೆಯುವುದರೊಂದಿಗೆ ಇಲ್ಲಿನ ಜನರ ಬಹುದಿನಗಳ ಕನಸನ್ನು ನನಸಾಗುತ್ತದೆ.
ಅತಿ ಕಡಿಮೆ ಸಮಯದ ಪ್ರಯಾಣ ಹಾಗೂ ರೈತರ ಭತ್ತ ಸಾಗಾಣಿಕೆಗೆ ಅನುಕೂಲವಾಗಲಿದೆಂದು ಮನವರಿಕೆ ಮಾಡಿದರು. ಇದಕ್ಕೆ ಸಚಿವರು ರೈಲ್ವೆ ಮಂತ್ರಿಗಳು ಪರಿಶೀಲಿಸುವುದಾಗಿ ಭರವಸೆ ನೀಡಿರುತ್ತಾರೆಂದು ತಿಳಿಸಿದ್ದಾರೆ.
ಇದೇ ವೇಳೆ ನಿಯೋಗದಲ್ಲಿ ಅಕ್ಕಿಗಿರಣಿ ಮಾಲಿಕರ ಸಂಘದ ಅಧ್ಯಕ್ಷ ಎನ್.ಜಿ.ಬಸವರಾಜಪ್ಪ, ಎಸ್.ಇ.ಎಸ್ ಸಮೂಹ ವಿದ್ಯಾಸಂಸ್ಥೆಗಳ ಅಧ್ಯಕ್ಷ ಬಿ.ಇ.ದೊಡ್ಡಯ್ಯ, ಉದ್ಯಮಿ ಕಿರಣ್‌ಕುಮಾರ್ ಜೈನ್, ವಕೀಲರಾದ ಶಂಭುಲಿಂಗಯ್ಯ ಗಾಣದಾಳ್, ಮುಖಂಡರಾದ ಜಿ.ಎನ್.ಯೋಗರಾಜ್ ವಿ.ನಟರಾಜ್, ಕುಂಟ್ನಾಳ್ ಮಲ್ಲಿಕಾರ್ಜುನ ಸ್ವಾಮಿ, ಲಿಂಗನಗೌಡ, ಭಾಗವಹಿಸಿದ್ದಾರೆ.
ವರದಿ: ಶ್ರೀನಿವಾಸ ನಾಯ್ಕ




