ಬೆಂಗಳೂರು : ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್ ಟಿ ಸೋಮಶೇಖರ್ ಅವರ ತಮ್ಮ ಕಚೇರಿಯಲ್ಲಿ ತಮ್ಮ ಮುಖಂಡರ ಸಮ್ಮುಖದಲ್ಲಿ ಬಿಬಿಎಂಪಿ ಪೌರ ಕಾರ್ಮಿಕರ ಖಾಯಂ ಪ್ರಮಾಣ ಪತ್ರ ವಿತರಿಸಿದರು.

ಬೆಂಗಳೂರು ಮಹಾನಗರ ಸ್ವಚ್ಛ ವಾಗಿ ಇರಬೇಕಾದರೆ ಪೌರ ಕಾರ್ಮಿಕರ ಶ್ರಮ ಅತ್ಯ ಅಮೂಲ್ಯವಾದದ್ದು ಕಾರ್ಮಿಕರು ಬೆಳಗಿನ ಜಾವದ 5ಗಂಟೆಯಿಂದ ಅವರು ಕಾರ್ಯ ಪ್ರವೃತ್ತರಾಗುತ್ತಾರೆ ಮಳೆ ಚಳಿ ಬಿಸಿಲು ಎನ್ನದೆ ಕೆಲಸ ಮಾಡುತ್ತಾರೆ ಅವರು ಇಲ್ಲಾ ಅಂದ್ರೆ ಬೆಂಗಳೂರು ಗಬ್ಬು ನಾರುತ್ತದೆ ಅವರ ಕಷ್ಟ ಸುಖ ಆಲಿಸಿ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಬೆಂಗಳೂರು ಉಸ್ತುವಾರಿ ಮಂತ್ರಿ ಹಾಗೂ ಕೆಪಿಸಿಸಿ ರಾಜ್ಯಾಧ್ಯಕ್ಷರಾದ ಡಿ ಕೆ ಶಿವಕುಮಾರ್ ಮತ್ತು ಸಚಿವ ಸಂಪುಟದ ಮಂತ್ರಿಗಳು ಪೌರ ಕಾರ್ಮಿಕರ ಮೇಲೆ ಕರುಣೆ ತೋರಿ ಅವರ ಕೆಲಸವನ್ನು ಖಾಯಂ ಮಾಡಿದ್ದಾರೆ ನಮ್ಮ ಕ್ಷೇತ್ರದ ಪೌರ ಕಾರ್ಮಿಕರಿಗೆ ನಾವು ಖಾಯಂ ಪ್ರಮಾಣ ಪತ್ರ ವಿತರಿಸಿದ್ದೇನೆ ಇನ್ನೂ ಹಲವಾರು ಕಾರ್ಮಿಕರಿಗೆ ಖಾಯಂ ಮಾಡಬೇಕಾಗಿದೆ ಬಿಬಿಎಂಪಿ ಆಯುಕ್ತರಿಗೆ ಅಧಿಕಾರಿಗಳಿಗೆ ಖಾಯಂ ಬಗ್ಗೆ ನಿರ್ದೇಶನ ನೀಡಿದ್ದೇನೆ ಎಂದರು.

ಈ ಸಂದರ್ಭದಲ್ಲಿ ಬಿಬಿಎಂಪಿ ಅಧಿಕಾರಿಗಳು, ಇಂಜಿನಿಯರ್ ಗಳು ಸಿಬ್ಬಂದಿ ವರ್ಗದವರು.
ಬೆಂಗಳೂರು ಪಶ್ಚಿಮ ಜಿಲ್ಲಾ ಕಾಂಗ್ರೆಸ್ ಕಮಿಟಿ ಉಪಾಧ್ಯಕ್ಷ ಮಂಜುನಾಥ್ ಟ್ರಾವೆಲ್ಸ್, ಬ್ಲಾಕ್ ಅಧ್ಯಕ್ಷ ಶ್ರೀಧರ್,ದೊಡ್ಡ ಬಿದರಿಕಲ್ಲು ವಾರ್ಡಿನ ಅಧ್ಯಕ್ಷ ಲಿಖಿತ್ ಗೌಡ್ರು, ಹೆರೋಹಳ್ಳಿ ವಾರ್ಡಿನ ಅಧ್ಯಕ್ಷ ರಮೇಶ್ ಆದಿತ್ಯ, ಜಿಲ್ಲಾ ಕಾರ್ಯದರ್ಶಿ ಲೋಕೇಶ್ ಗೌಡ, ಅನಂತ ರಾಮು, ಶಾರದಮ್ಮ,ಜಿಲ್ಲಾ ಮಹಿಳಾ ಕಾರ್ಯದರ್ಶಿ ನಾಗವೇಣಿ, ಹೆರೋಹಳ್ಳಿ ಮಹಿಳಾ ಬ್ಲಾಕ್ ಅಧ್ಯಕ್ಷೆ ಸುಮಾ ಜನಾರ್ಧನ್ ಮತ್ತು ಪೌರ ಕಾರ್ಮಿಕರು ಮುಂತಾದವರು ಇದ್ದರು.
ವರದಿ: ಅಯ್ಯಣ್ಣ ಮಾಸ್ಟರ್




