ಬೆಂಗಳೂರು : ಜೀವಕ್ಕೆ ಲೆಕ್ಕಿಸದೆ ಬೆಳಗಿನ ಜಾವದಿಂದಲೇ ಸ್ವಚ್ಚತೆ ಕಾಪಾಡಿಕೊಂಡು ಹೋಗುತ್ತಿರುವ ನಮ್ಮ ಪೌರಕಾರ್ಮಿಕರ ಕಷ್ಟ ಸುಖಕ್ಕೆ ಕಾಳಜಿ ವಹಿಸಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಉಪಮುಖ್ಯ ಮಂತ್ರಿ ಡಿಕೆ ಶಿವಕುಮಾರ್ ಹಾಗೂ ಸಚಿವರಿಗೂ ಪೌರಕಾರ್ಮಿಕರಿಗೆ ಖಾಯಂ ಗೊಳಿಸಿದ್ದಕ್ಕೆ ಕೃತಜ್ಞತೆಗಳು ಎಂದು ಮಾಜಿ ಸಚಿವ ಹಾಗೂ ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್ ಟಿ ಸೋಮಶೇಖರ್ ಹೇಳಿದರು.

ಹೆರೋಹಳ್ಳಿಯಲ್ಲಿರುವ ಅವರ ಕಚೇರಿ ಆವರಣದಲ್ಲಿ ದೊಡ್ಡಬಿದರಕಲ್ಲ್ ಹೇರೋಹಳ್ಳಿ, ಉಲ್ಲಾಳ, ಕೆಂಗೇರಿ ಮತ್ತು ಹೆಮ್ಮಿಗೆಪುರ ವಾರ್ಡ್ಗಳ ಪೌರಕಾರ್ಮಿಕರಿಗೆ ನೇಮಕಾತಿ ಆದೇಶ ಪ್ರಮಾಣ ಪತ್ರ ಶಾಸಕ ಎಸ್ ಟಿ ಸೋಮಶೇಖರ್ ವಿಚಾರಿಸಿ ಸುಮಾರು ವರ್ಷಗಳಿಂದ ದಿನಗೂಲಿ ನೌಕರರಾಗಿ ಕೆಲಸ ಮಾಡಿದ ಪೌರಕಾರ್ಮಿಕರಿಗೆ ನೇರ ನೇಮಕಾತಿ ಮಾಡಿ ಪ್ರಸ್ತುತ ವೇತನ ಶ್ರೇಣಿ ರೂ 27,000 ರಿಂದ 46,675ರೂ. ಅನುಗುಣವಾಗಿ ನೇಮಕಾತಿ ಆದೇಶ ಹೊರಡಿಸಲಾಗಿದೆ ಎಂದು ಪೌರಕಾರ್ಮಿಕರನ್ನು ಶಾಸಕ ಎಸ್ ಟಿ ಸೋಮಶೇಖರ್ ಉದ್ದೇಶಿಸಿ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಬಿಬಿಎಂಪಿ ಅಧಿಕಾರಿಗಳು, ಪೌರಕಾರ್ಮಿಕರು, ಬ್ಲಾಕ್ ಅಧ್ಯಕ್ಷರು ವಾರ್ಡ್ ಅಧ್ಯಕ್ಷರು, ಪದಾಧಿಕಾರಿಗಳು, ಮುಖಂಡರುಗಳು, ಕಾರ್ಯಕರ್ತರು ಸಮಸ್ತ ಸಾರ್ವಜನಿಕರು ಇದ್ದರು.
ವರದಿ: ಅಯ್ಯಣ್ಣ ಮಾಸ್ಟರ್




