Ad imageAd image

ಅಂದ್ರಹಳ್ಳಿಯಲ್ಲಿ ಒಳಚರಂಡಿ ಕಾಮಗಾರಿಗೆ ಚಾಲನೆ : ಶಾಸಕ ಎಸ್ ಟಿ ಸೋಮಶೇಖರ್

Bharath Vaibhav
ಅಂದ್ರಹಳ್ಳಿಯಲ್ಲಿ ಒಳಚರಂಡಿ ಕಾಮಗಾರಿಗೆ ಚಾಲನೆ : ಶಾಸಕ ಎಸ್ ಟಿ ಸೋಮಶೇಖರ್
WhatsApp Group Join Now
Telegram Group Join Now

ಬೆಂಗಳೂರು : ಯಶವಂತಪುರ ವಿಧಾನಸಭಾ ಕ್ಷೇತ್ರದ ದೊಡ್ಡ ಬಿದರಿಕಲ್ಲು ವಾರ್ಡಿನ ವ್ಯಾಪ್ತಿಗೆ ಬರುವ ಅಂದ್ರಹಳ್ಳಿ ಮಾರಮ್ಮ ದೇವಿ ದೇವಸ್ಥಾನ ಹತ್ತಿರ ಒಳಚರಂಡಿ ಕಾಮಗಾರಿಗೆ ಮಾಜಿ ಸಚಿವ ಹಾಲಿ ಶಾಸಕ ಎಸ್ ಟಿ ಸೋಮಶೇಖರ್ ಗುದ್ದಲಿಪೂಜೆ ನೇರವೇರಿಸಿ ಚಾಲನೆ ನೀಡಿದರು.

ನಂತರ ಅವರು ನಮ್ಮ ಕ್ಷೇತ್ರದಲ್ಲಿ ಬಹುತೇಕ ಕಡೆಗೆ ಕಾವೇರಿ ನೀರು, ಹೈಮಾಸ್ಟ್ ದೀಪ, ರಸ್ತೆ ಡಾಂಬರೀಕರಣ, ಮೊರಿ ಒಳಚರಂಡಿ ಕಾಮಗಾರಿಗಳು ಪ್ರಗತಿಯಲ್ಲಿವೆ ಕೆಲವು ಕಾಮಗಾರಿಗಳು ಮುಗಿಯುವ ಹಂತದಲ್ಲಿವೆ ಇಂದು ಒಳಚರಂಡಿ ಕಾಮಗಾರಿಗೆ ಚಾಲನೆ ನೀಡಿದ್ದೇವೆ ಕಾಮಗಾರಿ ಇಂದಿನಿಂದಲೇ ಪ್ರಾರಂಭವಾಗುತ್ತದೆ ಎಂದರು.


ಇದೆ ವೇಳೆ ಸಾರ್ವಜನಿಕ ಅಹವಾಲು ಸ್ವೀಕರಿಸಿ ಮಾತನಾಡಿದ ಶಾಸಕ ಎಸ್ ಟಿ ಸೋಮಶೇಖರ್ ಕಾವೇರಿ ಬರುತ್ತಿಲ್ಲಾ ಎಂದು ಜನರು ಹೇಳಿದರು ಸರ್ಕಾರದ ನಿಯಮ ಪ್ರಕಾರ ಕಾವೇರಿ ನೀರಿನ ಕಲೆಕ್ಷನ್ ತೆಗೆದು ಕೊಳ್ಳಿರಿ ಇಂಜಿನಿಯರ್ ಕಾವೇರಿ ನೀರಿನ ವ್ಯವಸ್ಥೆ ಮಾಡಲಾಗುತ್ತಾರೆ.

ಇನ್ನೂ 2,3ರಸ್ತೆಗಳ ಕಾಮಗಾರಿ ಆಗಿಲ್ಲಾ ಎಕೆಂದರೆ ರಸ್ತೆ ಅಗಲೀಕರಣ ಮಾಡುವ ದೃಷ್ಟಿಯಿಂದ ತಡವಾಗಿದೆ ಇನ್ನೇರಡು ದಿನಗಳಲ್ಲಿ ಅಕ್ಕಪಕ್ಕದ ಮಾಲೀಕರನ್ನು ಭೇಟ್ಟಿ ಮಾಡಿ ಮಾತುಕತೆ ಮಾಡಿ ರಸ್ತೆ ಅಗಲೀಕರಣ ಕಾಮಗಾರಿ ಪ್ರಾರಂಭ ಮಾಡುವುದಾಗಿ ಶಾಸಕ ಎಸ್ ಟಿ ಸೋಮಶೇಖರ್ ತಿಳಿಸಿದರು.

ಈ ಸಂದರ್ಭದಲ್ಲಿ ಹಿರಿಯ ರಾಜಕಾರಣಿ ತೋಪಯ್ಯ ಎಮ್,ದೊಡ್ಡ ಬಿದರಿಕಲ್ಲು ವಾರ್ಡಿನ ಕಾಂಗ್ರೆಸ್ ಅಧ್ಯಕ್ಷ ಲಿಖಿತ್ ಗೌಡ್ರು, ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯಲಕ್ಷ್ಮೀ, ಮಾಜಿ ಅಧ್ಯಕ್ಷ ವಿ.ನಾಗರಾಜ್ ಅಂದ್ರಹಳ್ಳಿ, ಅಂದ್ರಹಳ್ಳಿ ಕಾಂಗ್ರೆಸ್ ಪ್ರಭಾವಿ ಮುಖಂಡ ಪ್ರಕಾಶ್ ಟಿ, ಶಿವಮೂರ್ತಿ, ಯೋಗೇಶ್,ಬಸವಣ್ಣ, ಮೇರಿಯಮ್ಮ, ಶ್ರೀನಿವಾಸ್ ಸೇರಿದಂತೆ ಅಂದ್ರಹಳ್ಳಿ ಮುಖಂಡರು ಮಹಿಳೆಯರು ಮುಂತಾದವರು ಇದ್ದರು.

ವರದಿ : ಅಯ್ಯಣ್ಣ ಮಾಸ್ಟರ್ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!