ಬೆಂಗಳೂರು : ಚಿಕ್ಕಮಕ್ಕಳಿಗೆ ಪೌಷ್ಟಿಕಾಂಶ, ಆರೋಗ್ಯ ಸ್ಥಿತಿಯನ್ನು ಸುಧಾರಿಸುವುದು ಮತ್ತು ಅವರ ಮಾನಸಿಕ, ದೈಹಿಕ, ಸಾಮಾಜಿಕ ಬೆಳೆವಣಿಗೆಗೆ ಅಡಿಪಾಯ ಹಾಕುವುದೇ ಅಂಗನವಾಡಿ ಕೇಂದ್ರದ ಶಿಕ್ಷಕಿಯರು ಎಂದು ಮಾಜಿ ಸಚಿವ ಹಾಗೂ ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಟಿ ಸೋಮಶೇಖರ್ ಹೇಳಿದರು.

ಅವರು ಕ್ಷೇತ್ರದ ದೊಡ್ಡ ಬಿದರಿಕಲ್ಲು ವಾರ್ಡಿನ ವ್ಯಾಪ್ತಿಗೆ ಬರುವ ರಾಜೀವ್ ಗಾಂಧಿ ನಗರದಲ್ಲಿ ಅಂಗನವಾಡಿ ಕೇಂದ್ರವನ್ನು ರಿಬ್ಬನ್ ಕತ್ತರಿಸಿ ಉದ್ಘಾಟಿಸಿ ಸಾರ್ವಜನಿಕರನ್ನು ಉದ್ದೇಶಿಸಿ ಶಾಸಕ ಎಸ್ ಟಿ ಸೋಮಶೇಖರ್ ಮಾತನಾಡಿದರು.
ಈ ಸಂದರ್ಭದಲ್ಲಿ ರಾಜೀವ್ ಗಾಂಧಿ ನಗರದ ಕಾಂಗ್ರೆಸ್ ಮುಖಂಡ ಕೇಶವಮೂರ್ತಿ, ಬೆಂಗಳೂರು ಪಶ್ಚಿಮ ಜಿಲ್ಲಾ ಕಾಂಗ್ರೆಸ್ ಕಮಿಟಿ ಉಪಾಧ್ಯಕ್ಷ ಮಂಜುನಾಥ್ ಟ್ರಾವೆಲ್ಸ್, ವಾರ್ಡ ಅಧ್ಯಕ್ಷ ಲಿಖಿತ್ ಗೌಡ್ರು, ಮಾಜಿ ಅಧ್ಯಕ್ಷ ವಿ. ನಾಗರಾಜ್, ಟಿ. ಪ್ರಕಾಶ್, ಶ್ರೀನಿವಾಸ್, ಲಕ್ಷ್ಮಿಪತಿ,ಸುರೇಶ್ ಗೌಡ, ಕುಮಾರ್ ತಿಗಳರಪಾಳ್ಯ, ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯಲಕ್ಷ್ಮೀ, ಪ್ರದಾನ ಕಾರ್ಯದರ್ಶಿ ಮಹಾಲಕ್ಷ್ಮಿ, ರಾಜೀವ್ ಗಾಂಧಿ ನಗರದ ಮುಖಂಡರು ಮಹಿಳೆಯರು ಕಾರ್ಯಕರ್ತರು ಗುತ್ತಿಗೆದಾರ ಸೇರಿದಂತೆ ಮುಂತಾದವರು ಇದ್ದರು.
ವರದಿ: ಅಯ್ಯಣ ಮಾಸ್ಟರ್




