ಚಿಟಗುಪ್ಪ: ಪಟ್ಟಣದ ಪುರಸಭೆ ಪ್ರಾಂಗಣದಲ್ಲಿ ಅತೀ ಮೀರಿ ಮಂಗಗಳ ಹಾವಳಿ ಶುರುವಾಗಿದೆ.ಈ ಪ್ರಾಂಗಣದಲ್ಲಿ ನಿತ್ಯ ನೂರಾರು ಸಿಬ್ಬಂದಿಗಳು ಮತ್ತು ಸಾರ್ವಜನಿರು ಬರುವ ಪ್ರಾಮುಖ ಕಛೇರಿಗಳಾದ ಪುರಸಭೆ ಮತ್ತು ತಹಶೀಲ್ ಕಾರ್ಯಾಲಯಗಳು ಇರುವ ಸ್ಥಳವಾಗಿದೆ.
ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕರ್ತವ್ಯ ಸಮಯದಲ್ಲಿ ಹೆದರುಕೊಳ್ಳುವ ಪರಿಸ್ಥಿತಿ ನಿರ್ಮಾಣಗೊಂಡಿದೆ.ಎಷ್ಟೇ ಎಚ್ಚರಿಕೆ ವಹಿಸಿದರು ಕೂಡ ಶುಕ್ರವಾರ ಸಾರ್ವಜನಿಕರೋಬ್ಬರಿಗೆ ಮಂಗ ದಾಳಿ ಮಾಡಿ ಕಾಲಿಗೆ ಕಚ್ಚಿ ಗಾಯಗೋಳಿಸಿದೆ.
ಮಂಗಗಳಿಗೆ ಹೀಗೆ ಬಿಟ್ಟರೆ ಕಛೇರಿಗೆ ಯಾರನ್ನು ಬರಲು ಬಿಡುವುದಿಲ್ಲ.ಬಂದರೂ ಮಂಗಗಳ ದಾಳಿ ತಪ್ಪಿದಲ್ಲ ಎನ್ನುತ್ತಾರೆ ಅಲ್ಲಿಯ ಸಿಬ್ಬಂದಿಗಳು.
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚತ್ತುಕೊಂಡು ಹೆಚ್ಚಿನ ಅನಾಹುತವಾಗುವುದನ್ನು ತಪ್ಪಿಸಬೇಕು ಎಂದು ಸಾರ್ವಜನಿಕರು ಮನವಿ ಮಾಡಿಕೊಂಡಿದ್ದಾರೆ.
ಸಜೀಶ ಲಂಬುನೋರ್