ಸಿರುಗುಪ್ಪ : ನಗರದ ಶಿವ ಆಪ್ಟಿಕಲ್ ಹತ್ತಿರದಲ್ಲಿ ರೆಡ್ಡಿ ಜನ ಸಂಘದ ವತಿಯಿಂದ ಆರಂಭಿಸಲಾದ ಕುಡಿಯುವ ನೀರಿನ ಅರವಟಿಗೆಯನ್ನು ಪದಾಧಿಕಾರಿಗಳಾದ ಗೋವಿಂದರೆಡ್ಡಿ, ರಾಮಕೃಷ್ಣ ರೆಡ್ಡಿ ಅವರು ಉದ್ಘಾಟಿಸಿದರು.
ಪ್ರಭಾಕರರೆಡ್ಡಿ ಅವರು ಮಾತನಾಡಿ ಬೇಸಿಗೆಯಲ್ಲಿ ಬೀದಿಬದಿ ವ್ಯಾಪಾರಿಗಳು, ಬೇರೆ ಗ್ರಾಮಗಳಿಂದ ನಗರಕ್ಕೆ ಬರುವ ಗ್ರಾಮಸ್ಥರಿಗೆ ಶುದ್ದ ಕುಡಿಯುವ ನೀರಿನ ವ್ಯವಸ್ಥೆಗಾಗಿ ಸತತ ಹತ್ತು ವರ್ಷಗಳಿಂದ ಅರವಟಿಗೆಯನ್ನು ಹಮ್ಮಿಕೊಳ್ಳುತ್ತಾ ಬರಲಾಗಿದೆ.

ಇದರಲ್ಲಿ ನಮ್ಮ ರೆಡ್ಡಿ ಸಮಾಜದ ಹಲವಾರು ಮುಖಂಡರ ನೆರವು ಹಾಗೂ ಸಹಭಾಗಿತ್ವದಲ್ಲಿ ಇಲ್ಲಿಯವರೆಗೂ ಯಶಸ್ವಿಯಾಗಿ ನಡೆದುಕೊಂಡು ಬಂದಿದ್ದು, ಬೇಸಿಗೆ ಮುಗಿಯುವವರೆಗೂ ಅರವಟಿಗೆಯನ್ನು ನಡೆಸಲಾಗುತ್ತಿದೆ.
ಸಾರ್ವಜನಿಕರು, ವಿದ್ಯಾರ್ಥಿಗಳು, ಮಹಿಳೆಯರು, ವೃದ್ದರು ಇದರ ಪ್ರಯೋಜನವನ್ನು ಪಡೆಯಲೆಂಬುದು ನಮ್ಮೆಲ್ಲರ ಆಶಯವಾಗಿದೆಂದು ತಿಳಿಸಿದರು.
ಇದೇ ವೇಳೆ ರೆಡ್ಡಿ ಸಂಘದ ಇನ್ನಿತರ ಪದಾಧಿಕಾರಿಗಳಾದ ಮಾರುತಿರೆಡ್ಡಿ, ರವೀಂದ್ರರೆಡ್ಡಿ, ಸತ್ಯನಾರಾಯಣರೆಡ್ಡಿ, ನಾರಾಯಣರೆಡ್ಡಿ, ಜಯರಾಮರೆಡ್ಡಿ, ಪ್ರಕಾಶರೆಡ್ಡಿ, ವೆಂಕಟರಾಮರೆಡ್ಡಿ ಇನ್ನಿತರ ಮುಖಂಡರು ಇದ್ದರು.
ವರದಿ : ಶ್ರೀನಿವಾಸ ನಾಯ್ಕ




