ಬೆಂಗಳೂರು : ರಾಜ್ಯದಲ್ಲಿ ಉಳುಮೆ ಮಾಡಿಕೊಂಡು ಬಂದಿರುವ ಜಮೀನನ್ನು ಸರಕಾರ ಬಗರ್ ಹುಕುಂ ಸಾಗುವಳಿದಾರರ ಸೇವಾ ಸಮಿತಿಯವರಿಗೆ ಜಮೀನನ್ನು ಬಿಟ್ಟು ಕೊಡಬೇಕು ಎಂದು ಇಂದು ರಾಜ್ಯ ಬಗರ್ ಹುಕುಂ ಸಾಗುವಳಿದಾರರ ಸೇವಾ ಸಮಿತಿಯಿಂದ ವಿಧಾನಸೌಧ ಚಲೋ ಎನ್ನುವ ಶೀರ್ಷಿಕೆಯಡಿ ಬೆಂಗಳೂರಿನ ಫ್ರಿಡಂ ಪಾರ್ಕ್ ನಲ್ಲಿ ಬೃಹತ್ ಸಭೆ ಆಯೋಜನೆ ಮಾಡಿ ಸರಕಾರದ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು.

ಈ ಪ್ರತಿಭಟನೆಗೆ ರಾಜ್ಯದ ರೈತ ಸಂಘಗಳು ಹಾಗೂ ವಿವಿಧ ಸಂಘಟನೆಗಳು ಕೂಡ ಬೆಂಬಲ ವ್ಯಕ್ತಪಡಿಸಿದವು. ಇದೇ ಸಂದರ್ಭದಲ್ಲಿ ಬಗರ್ ಹುಕುಮ್ ಸಾಗುವಳಿದಾರರ ಸೇವಾ ಸಮಿತಿಯ ರಾಜ್ಯಾಧ್ಯಕ್ಷರಾದ ಸುರೇಶ. ಪಾಟ್ರೋಟಿ ಹಾಗೂ ರಾಜ್ಯ ಉಪಾಧ್ಯಕ್ಷರಾದ ಎಂ. ಕೆ. ಗಾಣಿಗೇರ ಸೇರಿದಂತೆ ರಾಜ್ಯದ ಬೇರೆ ಜಿಲ್ಲೆಗಳಿಂದ ಬಂದಂತಹ ಬಗರ್ ಹುಕುಮ್ ಸಾಗುವಳಿದಾರರ ಸೇವಾ ಸಮಿತಿಯವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ವರದಿ: ರಾಜೇಶ್. ಎಸ್. ದೇಸಾಯಿ




