ಮೊಳಕಾಲ್ಮುರು: ಜಿಲ್ಲೆಯಾದ್ಯಂತ ತಾಲೂಕಿನಾದ್ಯಂತ ಎಲ್ಲಾ ಗ್ರಾಮಗಳಲ್ಲಿಯೂ ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಪಿಡಿಒಗುಳ ದಿವ್ಯ ನಿರ್ಲಕ್ಷದಿಂದ ಹಗಲು ಸಮಯದಲ್ಲಿ ವಿದ್ಯುತ್ ಬೀದ ದೀಪಗಳು ಬೆಳಗುತ್ತಿದ್ದು’ ಪ್ರತಿ ವರ್ಷವೂ ಬೆಸ್ಕಾಂ ಕಂಪನಿಗೆ ಕೋಟ್ಯಾಂತರರು ನಷ್ಟವಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ ಎಸ್ ಆಕಾಶ್ ಗೆ ಸಂಘದ ರಾಜ್ಯ ಉಪಾಧ್ಯಕ್ಷ ಬೇಡರೆಡ್ಡಿ ಹಳ್ಳಿ ಬಸವರೆಡ್ಡಿ ಮನವಿ ಪತ್ರ ನೀಡಿದರು.

ಮನವಿ ಪತ್ರ ಸ್ವೀಕರಿಸಿದ ಜಿಲ್ಲಾ ಪಂಚಾಯತಿ ಸಿಇಒ ಆಕಾಶ್ ಮಾತನಾಡಿ ಈ ಸಂಬಂಧ ಕೂಡಲೇ ಕ್ರಮ ಕೈಗೊಳ್ಳುತ್ತೇನೆ, ಹಗಲುದೀಪ ಬೆಳಗುವದರಿಂದ ಯಾರಿಗೂ ಅನುಕೂಲವಿಲ್ಲ ಜಿಲ್ಲೆಯ ಎಲ್ಲಾ ತಾಲೂಕು ಪಂಚಾಯಿತಿ ಇ ಓ ಮತ್ತು ಪಿಡಿಒಗಳಿಗೆ ತುರ್ತಾಗಿ ಸೂಚನೆ ನೀಡುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಇವು ಹನುಮಂತಪ್ಪ, ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಡಿಆರ್ ಮಧು, ಯೋಜನಾಧಿಕಾರಿ ಗಾಯಿತ್ರಿ ಸಂಘದ ಜಿಲ್ಲಾಧ್ಯಕ್ಷ ಮಲ್ಲಳ್ಳಿ ರವಿಕುಮಾರ್ ಪ್ರಧಾನ ಕಾರ್ಯದರ್ಶಿ ಬಾಗೇನಹಳ್ಳಿ ಎಸ್ಆರ್ ತಿಪ್ಪೇಸ್ವಾಮಿ ಕೋಡಿಹಳ್ಳಿ ಹನುಮಂತಪ್ಪ ಚಂದ್ರಣ್ಣ ಪ್ರಶಾಂತ್ ರೆಡ್ಡಿ ಹಿರೇಹಳ್ಳಿ ತಿಪ್ಪೇಸ್ವಾಮಿ ಮಂಜಣ್ಣ ನಿಂಗಣ್ಣ ಮುತ್ತಯ್ಯ ಇನ್ನೂ ಹಲವರು ಉಪಸ್ಥಿತರಿದ್ದರು.
ವರದಿ: ಪಿಎಂ ಗಂಗಾಧರ




