Ad imageAd image

ರೈತರ ಆತ್ಮಹತ್ಯೆ ಪ್ರಕರಣದಲ್ಲಿ ಗಣನೀಯ ಇಳಿಕೆ : ರಾಜ್ಯ ಸರ್ಕಾರ ಖುಷ್

Bharath Vaibhav
ರೈತರ ಆತ್ಮಹತ್ಯೆ ಪ್ರಕರಣದಲ್ಲಿ ಗಣನೀಯ ಇಳಿಕೆ : ರಾಜ್ಯ ಸರ್ಕಾರ ಖುಷ್
WhatsApp Group Join Now
Telegram Group Join Now

ಬೆಂಗಳೂರು: ಅನ್ನದಾತರ ಬದುಕಲ್ಲಿ ಭರವಸೆಯ ಬೆಳಕು ಚೆಲ್ಲಿದೆ. ಈ ಪರಿಣಾಮ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣದಲ್ಲಿ ಗಣನೀಯ ಇಳಿಕೆ ಆಗಿರುವುದಾಗಿ ಸರ್ಕಾರ ಮಾಹಿತಿ ನೀಡಿದೆ.

ನಮ್ಮ ಸರ್ಕಾರವು ರೈತರ ಪರವಾಗಿದ್ದು, ಅವರ ಕಾಳಜಿಯನ್ನು ವಹಿಸುತ್ತಿದೆ. ಇದನ್ನು ಭಾಷಣಕ್ಕೆ ಸೀಮಿತವಾಗಿಸದೆ, ಕಾರ್ಯರೂಪಕ್ಕೆ ತಂದು ಅವರಿಗಾಗಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿ ನೆಮ್ಮದಿಯ ಬದುಕನ್ನು ಕಲ್ಪಿಸಿದ್ದೇವೆ ಎಂದು ತಿಳಿಸಿದೆ.ರಾಜ್ಯಾದ್ಯಂತ ಬೀಜ, ಗೊಬ್ಬರ, ರಾಸಾಯನಿಕಗಳ ಲಭ್ಯತೆಯನ್ನು ಖಾತ್ರಿಪಡಿಸಲಾಗಿದೆ.

ನೀರಾವರಿ ಯೋಜನೆಗಳು ಹಾಗೂ ಕೃಷಿ ಭಾಗ್ಯದಂತಹ ಕಾರ್ಯಕ್ರಮಗಳ ಮೂಲಕ ನೀರಿನ ಪೂರೈಕೆ ಮಾಡಲಾಗಿದೆ, ಕೃಷಿ ಸಾಲ ಯೋಜನೆ, ಬೆಳೆನಷ್ಟ ಪರಿಹಾರ ವಿತರಣೆ ಮಾಡಿ ರೈತರಲ್ಲಿ ಆರ್ಥಿಕ ಬಲ ತುಂಬಲಾಗಿದೆ. ಹಾರ್ವೆಸ್ಟರ್ ಹಬ್‌ಗಳ ಸ್ಥಾಪನೆ ಮೂಲಕ ಆಧುನಿಕ ಯಂತ್ರೋಪಕರಣಗಳ ಬಳಕೆಗೆ ಉತ್ತೇಜನ ನೀಡಲಾಗಿದೆ.

ಕೃಷಿ ಸಂಸ್ಕರಣೆ, ರಿಯಾಯಿತಿ ದರದಲ್ಲಿ ಜೈವಿಕ ಕೀಟ ನಾಶಕ ವಿತರಣೆ, ಹಸಿರೆಲೆ ಗೊಬ್ಬರ, ಸಿರಿಧಾನ್ಯ ಬೆಳೆಯಲು ಪ್ರೋತ್ಸಾಹ ಮತ್ತು ಸಕಾಲದಲ್ಲಿ ಬೆಂಬಲ ಬೆಲೆ ಖರೀದಿ ಕೇಂದ್ರಗಳ ಸ್ಥಾಪನೆಯಂತಹ ಅನೇಕ ಕಾರ್ಯಕ್ರಮಗಳು ರೈತರ ಮನೋಬಲ ಹೆಚ್ಚಿಸಿದೆ.

ರೈತರನ್ನು ನಷ್ಟದ ಸುಳಿಯಿಂದ ಮೇಲೆತ್ತುವ ನಮ್ಮ ಎಲ್ಲಾ ಪ್ರಯತ್ನಗಳ ಫಲವಾಗಿ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಗಣನೀಯ ಇಳಿಕೆಯಾಗಿದೆ. ಈ ಮೂಲಕ ಅನ್ನದಾತರ ಬದುಕಿಗೆ ನೆಮ್ಮದಿಯ ಗ್ಯಾರಂಟಿ ನೀಡಿದ್ದೇವೆ ಎಂದಿದೆ.

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!