Ad imageAd image

ರಾಜ್ಯದ ವೈದ್ಯರಿಗೆ ಕಡ್ಡಾಯ ಗ್ರಾಮೀಣ ಸೇವೆ ಇಲ್ಲ : ರಾಜ್ಯ ಸರ್ಕಾರ ಆದೇಶ 

Bharath Vaibhav
ರಾಜ್ಯದ ವೈದ್ಯರಿಗೆ ಕಡ್ಡಾಯ ಗ್ರಾಮೀಣ ಸೇವೆ ಇಲ್ಲ : ರಾಜ್ಯ ಸರ್ಕಾರ ಆದೇಶ 
vidhana soudha
WhatsApp Group Join Now
Telegram Group Join Now

ಬೆಂಗಳೂರು : ರಾಜ್ಯ ಸರ್ಕಾರದ ವೈದ್ಯಕೀಯ ಕೋರ್ಸ್‌ ಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಗ್ರಾಮೀಣ ಸೇವೆ ನಿಯಮಗಳಲ್ಲಿ ಮಹತ್ವದ ಬದಲಾವಣೆ ಮಾಡಿದ್ದು, ಎಲ್ಲ ವೈದ್ಯರಿಗೂ ಕಡ್ಡಾಯ ಗ್ರಾಮೀಣ ಸೇವೆ ಇಲ್ಲ ಎಂದು ತಿಳಿಸಿದೆ.

ರಾಜ್ಯ ಸರ್ಕಾರ ಈ ಕುರಿತು ರಾಜ್ಯಪತ್ರ ಹೊರಡಿಸಿದ್ದು, ವೈದ್ಯಕೀಯ ಕೋರ್ಸ್‌ ಪೂರೈಸಿದವರ ಪೈಕಿ ಸರ್ಕಾರಕ್ಕೆ ಅಗತ್ಯವಿರುವಷ್ಟು ಮಂದಿಯನ್ನು ಮಾತ್ರ ಕಡ್ಡಾಯ ಗ್ರಾಮೀಣ ಸೇವೆಗೆ ಮೆರಿಟ್‌ ಆಧಾರದ ಮೇಲೆ ಕನ್ಸೆಲಿಂಗ್‌ ಮೂಲಕ ನೇಮಕ ಮಾಡಿಕೊಳ್ಳಲು ನಿರ್ಧರಿಸಿದೆ.

ಈವರೆಗೆ ವೈದ್ಯಕೀಯ ಪದವಿ ಪೂರೈಸಿದ ಎಲ್ಲರೂ ಕಡ್ಡಾಯವಾಗಿ ಒಂದು ವರ್ಷದ ಸರ್ಕಾರಿ ಗ್ರಾಮೀಣ ಸೇವೆ ಸಲ್ಲಿಸಬೇಕಾಗಿತ್ತು. ಆದರೆ ಇದೀಗ ಅಗತ್ಯವಿರುವಷ್ಟು ಮಂದಿಯನ್ನು ಮಾತ್ರ ಕಡ್ಡಾಯ ಗ್ರಾಮೀಣ ಸೇವೆಗೆ ನೇಮಕ ಮಾಡಿಕೊಳ್ಳಲಿದೆ. ಆಕ್ಷೇಪಣೆ ಸಲ್ಲಿಸಲು 15 ದಿನಗಳ ಕಾಲಾವಕಾಶ ನೀಡಲಾಗಿದೆ.

 

 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!