ಬೆಂಗಳೂರು : ರಾಜ್ಯಾದ್ಯಂತ ಹೋಟೆಲ್, ರೆಸ್ಟೋರೆಂಟ್ ಹಾಗೂ ಲಘು ಉಪಹಾರ ಕೇಂದ್ರಗಳನ್ನು ತಪಾಸಣೆ ನಡೆಸಲು ಕ್ರಮಕೈಗೊಳ್ಳುವ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಹೋಟೆಲ್, ರೆಸ್ಟೋರೆಂಟ್ ಹಾಗೂ ಲಘು ಉಪಹಾರ ಕೇಂದ್ರಗಳಲ್ಲಿ ಸ್ವಚ್ಚತೆ ಇಲ್ಲದೆ, ಕಲುಷಿತ, ವಿಷಹಾರ ಸೇವನೆ, ಕಲಬೆರಕೆ ಪದಾರ್ಥಗಳು, ಅವಧಿ ಮೀರಿದ ಪದಾರ್ಥಗಳ ಉಪಯೋಗಿಸುತ್ತಿರುವಂತೆ ಘಟನೆಗಳು ಸಂಭವಿಸುತ್ತಿದ್ದು, ರಾಮೇಶ್ವರ ಕೆಫೆ, ಇಂದಿರಾನಗರ ಬೆಂಗಳೂರು ಹಾಗೂ ಇನ್ನಿತರೆ ಸಮಸ್ಯೆಗಳಿಗೆ ಸಂಬಂಧಿಸಿದಂತೆ, ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಂಡದಲ್ಲಿ ವರದಿಯಾಗಿರುತ್ತದೆ.
ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ಉತ್ತಮ ಗುಣಮಟ್ಟ, ಸ್ವಚ್ಚತೆ ಕಾಪಾಡುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಹೋಟೇಲ್, ರೆಸ್ಟೋರೆಂಟ್ ಹಾಗೂ ಲಘು ಉಪಹಾರ ಕೇಂದ್ರಗಳಲ್ಲಿ The Food Safety and Standards Act-2006 ಮತ್ತು 2011 ನಿಯಮಗಳಲ್ಲಿ ಸೂಚಿಸಿರುವ ಮಾರ್ಗಸೂಚಿಯಂತೆ ತಪಾಸಣೆ ನಡೆಸಿ ಸೂಕ್ತ ರೀತಿಯ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.