Ad imageAd image

ಜಾನಪದ ಕಲಾವಿದ ಪುಂಡಲೀಕ್ ಸೈದಪ್ಪ ಮಾದರ ರಾಜ್ಯ ಮಟ್ಟದ ಪ್ರಶಸ್ತಿ

Bharath Vaibhav
ಜಾನಪದ ಕಲಾವಿದ ಪುಂಡಲೀಕ್ ಸೈದಪ್ಪ ಮಾದರ ರಾಜ್ಯ ಮಟ್ಟದ ಪ್ರಶಸ್ತಿ
WhatsApp Group Join Now
Telegram Group Join Now

ಐಗಳಿ: ಡಾಕ್ಟರ್ ಬಾಬು ಜಗಜೀವನ್ ರಾಮ ಜಯಂತಿ ನಿಮಿತ್ಯವಾಗಿ ಕರ್ನಾಟಕ ಸರ್ಕಾರದಿಂದ ಸಾಧಕರಿಗೆ ನೀಡುವ ರಾಜ್ಯ ಮಟ್ಟದ ಪ್ರಶಸ್ತಿಯನ್ನು ಜಾನಪದ ಕ್ಷೇತ್ರ ಹಲಗಿವಾದನದಲ್ಲಿ ಸಾಧಿಸಿದ ಶ್ರೀ ಪುಂಡಲೀಕ ಸೈದಪ್ಪ ಮಾದರ್ ಅವರಿಗೆ ಸಿಕ್ಕಿರುವುದು ಹೆಮ್ಮೆಯ ವಿಷಯವಾಗಿದೆ ಕರ್ನಾಟಕದ ಬಯಲು ಸೀಮೆಯ ಮಹಾರಾಷ್ಟ್ರದ ಗಡಿಗೆ ಅಥಣಿ ತಾಲೂಕಿಗೆ ರಾಜ್ಯಮಟ್ಟದ ಪ್ರಶಸ್ತಿ ದೊರಕಿದ್ದು ಸಂತೋಷವಾಗಿದೆ.

 

ಹಲವಾರು ಕಲಾವಿದರು ವಿವಿಧ ಸಾಧಕರು ಇದ್ದು ಅವರನ್ನು ಗುರುತಿಸಿ ಮುಂಬರುವ ದಿನಗಳಲ್ಲಿ ಕಲಾವಿದರಿಗೆ ಗೌರವಿಸುವಂತೆ ಆಗಬೇಕು ಎಂದು ಅಥಣಿಯ ಸಾಹಿತ್ಯ ಮತ್ತು ಸಂಸ್ಕೃತಿಕ ಟ್ರಸ್ಟ್ ಹಾಗೂ ಸುಕನ್ಯಾ ವೃದ್ಧಾಶ್ರಮದ ಅಧ್ಯಕ್ಷರಾದ ಮಾಹದೇವ ಬಿರಾದಾರ ಹೇಳಿದರು ಅವರು ಐಗಳಿ ಗ್ರಾಮಕ್ಕೆ ಆಗಮಿಸಿ, ಪ್ರಶಸ್ತಿ ಪುರಸ್ಕೃತ ಶ್ರೀ ಪುಂಡಲೀಕ ಮಾದರ್ ಅವರಿಗೆ ಸನ್ಮಾನಿಸಿ ಗೌರವಿಸಿದರು ಈ ಸಂದರ್ಭದಲ್ಲಿ ಸಮಾಜಸೇವಕರಾದ ಅನ್ನಪ್ಪ ಭಜಂತ್ರಿ ಅಕ್ಕಮಹಾದೇವಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಸೈದಪ್ಪ ಮಾದರ್ ಹಾಗೂ ಪುಂಡಲೀಕ ಅವರು ಧರ್ಮಪತ್ನಿ ಶಾಂತ ಮಾದರ್ ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article
error: Content is protected !!