Ad imageAd image

ಚಿಗುರುತ್ತಿರುವ ಚಿಂಗಾರಿ ಸ್ಪೂರ್ತಿಗೆ ರಾಜ್ಯಮಟ್ಟದ ಪ್ರಶಸ್ತಿ

Bharath Vaibhav
ಚಿಗುರುತ್ತಿರುವ ಚಿಂಗಾರಿ ಸ್ಪೂರ್ತಿಗೆ ರಾಜ್ಯಮಟ್ಟದ ಪ್ರಶಸ್ತಿ
WhatsApp Group Join Now
Telegram Group Join Now

ನಿಪ್ಪಾಣಿ:   ಮಕ್ಕಳಿಗೆ ತಂದೆ ತಾಯಿ ನೀಡುವ ಸಂಸ್ಕಾರ ಒಳ್ಳೆಯದಾಗಿದ್ದರೆ ಪಾಲಕರಿಗಿಂತಲೂ ಸಂಸ್ಕಾರ ಸದ್ಗುಣಗಳಲ್ಲಿ ಶಿಖರ ಮಟ್ಟಕ್ಕೇರಬಹುದು ಎಂಬುದಕ್ಕೆ ಉತ್ತಮ ಉದಾಹರಣೆ ಬೆಳಗಾವಿಯ ವಿದ್ಯಾರ್ಥಿನಿ ಸ್ಪೂರ್ತಿ ಕೊಂಕಣಿ. ಈ ವಿದ್ಯಾರ್ಥಿನಿ.ವಿದ್ಯಾರ್ಥಿ ಜೀವನದಲ್ಲಿ ಉನ್ನತ ಶಿಕ್ಷಣದ ಜೊತೆಗೆ ಸಾಮಾಜಿಕ ಕಾರ್ಯದಲ್ಲಿ ತನ್ನನ್ನು ತಾನೇ ತೊಡಗಿಸಿಕೊಂಡಿರುವ ಸ್ಪೂರ್ತಿ ಬೆಳಗಾವಿಯ ಕೆಎಲ್ಇ ಔಷಧಿಯ ಮಹಾವಿದ್ಯಾಲಯದ ವಿದ್ಯಾರ್ಥಿನಿ ಹೌದು.

ರಾಜ್ಯ ಎನ್ಎಸ್ಎಸ್ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ನೀಡಲಾಗುತ್ತಿರುವ ಸನ್ 2022 23ನೇ ಸಾಲಿನ ಎನ್ಎಸ್ಎಸ್ ರಾಜ್ಯ ಪ್ರಶಸ್ತಿಯನ್ನು ತನ್ನ ಮುಡುಗೇರಿಸಿಕೊಂಡಿದ್ದು ಇಡೀ ಬೆಳಗಾವಿ ಜಿಲ್ಲೆಯಲ್ಲಿ ಕೊಂಕಣಿ ಕುಟುಂಬಕ್ಕೆ ಅಭಿನಂದನೆಗಳ ಸುರಿ ಮಳೆಯಾಗುತ್ತಿದೆ.

ಮಾರ್ಚ್ 17ರಂದು ರಾಜ್ಯಭವನ ಬೆಂಗಳೂರಿನಲ್ಲಿ ಸ್ಪೂರ್ತಿ ಕೊಂಕಣಿ ಅವರಿಗೆ ರಾಜ್ಯಪಾಲರಾದ ಥಾ ವರಚಂದ ಗೋಹಲು ಅವರ ಹಸ್ತದಿಂದ ಪ್ರತಿಷ್ಠಿತ ರಾಜಮಟ್ಟದ ಎನ್ಎಸ್ಎಸ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ತಂದೆ ಬೆಳಗಾವಿಯ ಮಾಳ ಮಾರುತಿ ಪೊಲೀಸ್ ಠಾಣೆಯ ಪಿಎಸ್ಐ ಮಹದೇವ್ ಕೊಂಕಣಿ, ತಾಯಿ ರಾಜಶ್ರೀ ಗೆ ತನ್ನ ಮಗಳಿಗೆ ದೊರೆತ ರಾಜ್ಯಮಟ್ಟದ ಪ್ರಶಸ್ತಿಯ ಗೌರವ ಹಾಗೂ ಅಭಿಮಾನಿಗಳಿಂದ ಬರುತ್ತಿರುವ ಅಭಿನಂದನೆಗಳ ಸಂದೇಶದಿಂದ ಹೃದಯ ತುಂಬಿ ಬರುತ್ತಿದ್ದು ಕೊಂಕಣಿ ಕುಟುಂಬಕ್ಕೆ ದೊರೆತ ವಿಜಯದ ಮೊದಲ ಮೆಟ್ಟಿಲು ಎಂದು ಅಭಿಮಾನದಿಂದ ತಿಳಿಸುತ್ತಾರೆ.

ಇನ್ನು ಸ್ಪೂರ್ತಿ ಎನ್ಎಸ್ಎಸ್ ಮುಖಾಂತರ ವಿವಿಧ ಸಾಮಾಜಿಕ ಕಾರ್ಯಗಳಲ್ಲಿ ಸಹಭಾಗಿತ್ವದೊಂದಿಗೆ ರಕ್ತದಾನ ಶಿಬಿರ ಸ್ವಚ್ಛತೆ ಅಭಿಯಾನ ಆರೋಗ್ಯ ಶಿಬಿರದಂತಹ ಉಪಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಇವರ ಸಾಮಾಜಿಕ ಕಾರ್ಯ ಕಂಡು ರಾಜ್ಯ ಸರ್ಕಾರ ನೀಡಿದ ಪ್ರಶಸ್ತಿ ಸ್ಫೂರ್ತಿಯ ಮುನ್ನಡೆಗೆ ಸ್ಫೂ ರ್ತಿನೀಡಿದೆ. ಹಾಗೂ ಜಿಲ್ಲೆಯಾದ್ಯಂತ ಅಭಿನಂದನೆಯಾಗುತ್ತಿದೆ.

ವರದಿ: ಮಹಾವೀರ ಚಿಂಚಣೆ

WhatsApp Group Join Now
Telegram Group Join Now
Share This Article
error: Content is protected !!