Ad imageAd image

ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ದೇಸಾಯಪ್ಪ ಅಂಗಡಿ ಮತ್ತು ಕುಟುಂಬ

Bharath Vaibhav
ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ  ದೇಸಾಯಪ್ಪ ಅಂಗಡಿ ಮತ್ತು ಕುಟುಂಬ
WhatsApp Group Join Now
Telegram Group Join Now

ಕಂದಗಲ್ಲ :ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಕೊಡ ಮಾಡುವ 2024=25 ನೇ ಸಾಲಿನ ಕರ್ನಾಟಕ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಶ್ರೀ ವಿಜಯ ಮಹಾಂತೇಶ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಶ್ರೀ ದೇಸಾಯಪ್ಪ ಅಂಗಡಿ ರವರಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಶಿಕ್ಷಕರ ಸದನ ಬೆಂಗಳೂರಿನಲ್ಲಿ ಯಶಸ್ವಿಯಾಗಿ ಜರುಗಿತು.
ಈ ಸಮಾರಂಭದಲ್ಲಿ ರಾಜ್ಯಾಧ್ಯಕ್ಷರಾದ ಶ್ರೀ ಎನ್ ರಾಜಗೋಪಾಲ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಎಂ ಕೆ ರಾಜು, ಸಂಘದ ಸರ್ವ ಪದಾಧಿಕಾರಿಗಳು, ಬಾಗಲಕೋಟೆ ಜಿಲ್ಲಾಧ್ಯಕ್ಷರಾದ ಶ್ರೀ ಬಿ ಎಲ್ ಬಾಗೇವಾಡಿ, ಹುನಗುಂದ -ಇಳಕಲ್ ತಾಲೂಕ ಅಧ್ಯಕ್ಷರಾದ ಶ್ರೀ ಎಸ್ ಎಸ್ ಹಿರೇಮಠ, ಸಂಘದ ಪದಾಧಿಕಾರಿಗಳಾದ ಶ್ರೀ ಎಂ ಕೆ ಬಗಾಡೆ, ಶ್ರೀ ಎಸ್ ಎ ಉಪನಾಳ, ಶ್ರೀ ಎಸ್ ಆರ್ ಮಾರಾ, ಶ್ರೀ ಎಸ್ ಬಿ ತಳವಾರ, ಶ್ರೀ ಎಸ್ ಎಸ್ ಮೆಣಸಿನ ಕಾಯಿ, ಶ್ರೀಮತಿ ಜೆ ಎಸ್ ಹಿರೇಮಠ, ಶಿಕ್ಷಕರು ಹಾಗೂ ಪ್ರಶಸ್ತಿ ಪಡೆದ ಅಂಗಡಿ ಗುರುಗಳ ಕುಟುಂಬ ವರ್ಗದವರು ಉಪಸ್ಥಿತರಿದ್ದರು.

ವರದಿ ದಾವಲ್ ಶೇಡಂ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!