ಹುಬ್ಬಳ್ಳಿ : ದಿನಾಂಕ 8 9 ಹಾಗೂ 10ನೇ ಅಕ್ಟೋಬರ್ 2025 ರಂದು ಕರ್ನಾಟಕ ರಾಜ್ಯದ ಉಪನಿರ್ದೇಶಕರ ಕಾರ್ಯಾಲಯ ಶಿಕ್ಷಣ ಇಲಾಖೆ ಧಾರವಾಡ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಶಹರ ವಲಯ ಹುಬ್ಬಳ್ಳಿ ಮತ್ತು ವೇಮನ್ ವಿದ್ಯಾವರ್ಧಕ ಸಂಘದ ಪ್ರೌಢಶಾಲೆ ಸೇಂಟ್ ಫಾಲ್ಸ್ ಆಂಗ್ಲ ಮಾಧ್ಯಮ ಶಾಲೆ ಗೋಕುಲ ರೋಡ್ ಹುಬ್ಬಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಸೆಂಟ್ ಫಾಲ್ಸ್ ಶಾಲೆಯ ಸಭಾಂಗಣ ದಲ್ಲಿ ರಾಜ್ಯಮಟ್ಟದ ಹದಿನೇಳು ವಯಸ್ಸಿನ ವಯೋಮಿತಿಯ ಬಾಲಕ ಹಾಗೂ ಬಾಲಕಿಯರ ವೇಟ್ ಲಿಫ್ಟಿಂಗ್ ಸ್ಪರ್ಧೆ ನಡೆಯಿತು.

ಈ ಸ್ಪರ್ಧೆಯು 55 ಕೆಜಿಯ ಭಾಗ, 65 ಕೆಜಿ ಭಾಗ,ಎಪ್ಪತೈದು ಕೆಜಿಯ ಭಾಗ ಹಾಗೂ 75 ಕೆಜಿ ಮೇಲಿನ ಒಂದು ವಿಭಾಗ ಎಂದು ವಿಂಗಡಿಸಲಾಗಿತ್ತು.ಸ್ಪರ್ಧೆಯಲ್ಲಿ ರಾಜ್ಯದ ಮೂಲೆ ಮೂಲೆಯಿಂದ ಬಾಲಕ ಬಾಲಕಿಯರು ಆಗಮಿಸಿದ್ದರು.ಇದರಲ್ಲಿ 45 ಬಾಲಕಿಯರು ಹಾಗೂ 50 ಜನ ಬಾಲಕರು ಸ್ಪರ್ಧಾಳುಗಳು ಭಾಗವಹಿಸಿದ್ದರು.ಸೆಂಟ್ ಫಾಲ್ಸ್ ಶಾಲೆಯ ಆಡಳಿತ ಮಂಡಳಿಯವರು ಬಂದಂತಹ ಸ್ಪರ್ಧಾಳುಗಳಿಗೆ ಹಾಗೂ ಅವರು ಪೋಷಕರಿಗೆ ಅವರ ತರಬೇತುದಾರರಿಗೆ ವಸತಿ ಹಾಗೂ ಊಟದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಿದ್ದರು. ಸ್ಪರ್ಧೆಯನ್ನು ನೋಡಲು ನೂರಾರು ಜನ ದಿನಂಪ್ರತಿ ನೆರವೇರುತ್ತಿದ್ದರು.

ಈ ಸಂದರ್ಭದಲ್ಲಿ ವಿಜೇತ ಸ್ಪರ್ಧಾರ್ಥಿಗಳು ತಮ್ಮ ಸಂತೋಷವನ್ನು ನಮ್ಮ ಜೊತೆ ಹಂಚಿಕೊಂಡರು ಅದೇ ರೀತಿಯಾಗಿ ದೈಹಿಕ ಶಿಕ್ಷಕರ ರಾಜ್ಯದ ಸಹ ಕಾರ್ಯದರ್ಶಿ ಹಾಗೂ ತಾಲೂಕ ಅಧ್ಯಕ್ಷರಾದಂತಹ ಎಸ್. ಬಿ. ಹಿರೇಮಠ ಅವರು ನಮ್ಮ ವರದಿಗಾರ. ಗುರುರಾಜ ಹಂಚಾಟೆ ಅವರ ಜೊತೆ ಮಾತನಾಡಿ ತಮ್ಮಅನಸಿಕೆ ಹಂಚಿಕೊಂಡರು.
ವರದಿ:ಗುರುರಾಜ ಹಂಚಾಟೆ




