ಇತ್ತಿಚಿನ ದಿನಗಳಲ್ಲಿ ಸಂಶೋಧಕರ ಸಂಶೋಧನೆಯ ದಿಕ್ಕು ಸ್ಥಳೀಯ ಇತಿಹಾಸದ ಕಡೆ ಸಾಗುತ್ತಿದೆ. ಮುಂಬೈ-ಕರ್ನಾಟಕದ ಹಲವಾರು ವಿಚಾರಗಳು ಮಾಯವಾಗಿವೆ ಆದ್ದರಿಂದ, ಐತಿಹಾಸಿಕ ದಾಖಲೆಗಳನ್ನು ಸಂಗ್ರಹಿಸುವುದು ಹಾಗೂ ಸಂರಕ್ಷಿಸುವುದು ಪತ್ರಾಗಾರ ಇಲಾಖೆಯ ಮೂಲ ಉದ್ದೇಶವಾಗಿದೆ. ಹಳೆಯ ಮಠ ಮಾನ್ಯಗಳು, ಪತ್ರಿಕೆಗಳು, ದಾಖಲೆಗಳು ಮುಂದಿನ ಪಿಳಿಗೆಗೆ ಜ್ಞಾನ ನೀಡಲು ಸಹಕಾರಿ ಎಂದು ಬೆಂಗಳೂರಿನ ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆಯ ನಿರ್ದೇಶಕರಾದ ಡಾ. ಮಂಜುಳಾ ಯಲಿಗಾರ ಹೇಳಿದರು.
ಅವರು ಸ್ಥಳೀಯ ಶಿವಾನಂದ ಮಹಾವಿದ್ಯಾಲಯ, ಕಾಗವಾಡದಲ್ಲಿ ಐಕ್ಯೂಎಸಿ ಪ್ರಾಯೋಜಿತ ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ ಬೆಂಗಳೂರು, ಪ್ರಾದೇಶಿಕ ಪತ್ರಾಗಾರ ಕಛೇರಿ ಧಾರವಾಡ ಹಾಗೂ ಮಹಾವಿದ್ಯಾಲಯದ ಇತಿಹಾಸ, ಕನ್ನಡ, ಅರ್ಥಶಾಸ್ತç ವಿಭಾಗಗಳ ಸಹಯೋಗದಲ್ಲಿ ಮುಂಬೈ-ಕರ್ನಾಟಕ ಗಡಿ ಪ್ರಾಂತ್ಯದಲ್ಲಿ, ರಾಷ್ಟಿçÃಯ ಮತ್ತು ಜನಪ್ರೀಯ ಜನತಾ ಚಳುವಳಿ, ದ್ವೀ ಭಾಷಾ ಸಮನ್ವಯತೆ ಹಾಗೂ ಸುಸ್ಥಿರಾಭಿವೃದ್ದಿ ಎಂಬ ವಿಷಯದ ಮೇಲೆ ಹಮ್ಮಿಕೊಂಡ ಒಂದು ದಿನದ ರಾಷ್ಟçಮಟ್ಟದ ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಮುಂದುವರೆದು ವಿದ್ಯಾರ್ಥಿಗಳು ಹಾಗೂ ಸಂಶೋಧನಕಾರರು ಐತಿಹಾಸಿಕ ದಾಖಲೆಗಳನ್ನು ಸಂಗ್ರಹಿಸಲು ಹಾಗೂ ಸಂರಕ್ಷಿಸಲು ಸಹಕರಿಸಬೇಕು ಎಂದು ಕರೆ ನೀಡಿದರು.
ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ಇತಿಹಾಸ ಮತ್ತು ಪುರಾತತ್ವ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಡಾ. ಶಿಲಾಧರ ಮುಗಳಿ ಮಾತನಾಡುತ್ತ, ಮುಂಬೈ-ಕರ್ನಾಟಕದ ನಾಗರಿಕರು ಐಕ್ಯತೆಯಿಂದ ಭಾಷಾ ಚಳುವಳಿಯನ್ನು ಮಾಡಿರುತ್ತಾರೆ.
ಸ್ವಾತಂತ್ರö್ಯ ಎಂದರೆ ಕೇವಲ ರಾಜಕೀಯ ಕ್ಷೇತ್ರಕ್ಕೆ ಸೀಮಿತವಾಗಿರದೆ ಅದು ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರಗಳ ಅಭಿವೃದ್ಧಿಯನ್ನು ಬಯಸುವಂತಿರಬೇಕು ಎಂದರು. ಶಿವಾಜಿ ವಿಶ್ವವಿದ್ಯಾಲಯ ಕೊಲ್ಹಾಪೂರದ ಬಿ.ಓ.ಎಸ್. ಸದಸ್ಯರು ಹಾಗೂ ಸಾಂಗ್ಲಿಯ ವಿಲಿಂಗ್‌ಡನ್ ಕಾಲೇಜಿನ ಅರ್ಥಶಾಸ್ತç ವಿಭಾಗದ ಮುಖ್ಯಸ್ಥರಾದ ಡಾ. ಮನೊಹರ ಕೋರೆ ತಮ್ಮ ವಿಚಾರಗಳನ್ನು ವಿನಿಮಯಿಸುತ್ತ, ಭಾರತವು ಬಹುಕ್ರಿಯಾತ್ಮಕತೆಯಲ್ಲಿ ಸುಸ್ಥಿರ ಅಭಿವೃದ್ಧಿಯ ಗುರಿಗಳನ್ನು ಹೊಂದಿದೆ. ಪ್ರಸ್ತುತ ದಿನಗಳಲ್ಲಿ ವಿಶ್ವದ ಆರ್ಥಿಕತೆಯ ಶ್ರೇಯಾಂಕದಲ್ಲಿ ಭಾರತವು ನಾಲ್ಕನೇ ಸ್ಥಾನ ಹೊಂದಿದೆ. ಭಾರತದ ಅಭಿವೃದ್ಧಿ ಗ್ರಾಮಗಳ ಅಭಿವೃದ್ಧಿಯ ಮೇಲೆ ಅವಲಂಬಿಸಿರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ದಿವ್ಯ ಸಾನಿದ್ಯ ವಹಿಸಿದ ಸಂಸ್ಥೆಯ ಏಕನ್ಯಾಸಧಾರಿಗಳಾದ ಪ.ಪೂ. ಶ್ರೀ ಯತೀಶ್ವರಾನಂದ ಸ್ವಾಮೀಜಿ ಆಶೀರ್ವಚನ ನೀಡುತ್ತ ಇತಿಹಾಸವನ್ನು ಉಳಿಸಿ ಬೆಳೆಸುವ ಪ್ರಯತ್ನ ಈ ಕಾರ್ಯಾಗಾರ ಹೊಂದಿದೆ. ವಿದ್ಯಾರ್ಥಿಗಳು ಹಾಗೂ ಸಂಶೋಧಕರು ಮಾನಸಿಕ ಹಾಗೂ ದೈಹಿಕ ಕ್ರೀಯಾಶೀಲತೆಯನ್ನು ಬೆಳಸಿಕೊಳ್ಳಬೇಕಾಗಿದೆ. ತಾವೆಲ್ಲರೂ ಈ ರೀತಿಯ ವಿಚಾರ ಸಂಕಿರಣಗಳ ಸದುಪಯೋಗ ಪಡೆದು ವಿವಿಧತೆಯಲ್ಲಿ ಏಕತೆಯನ್ನು ಕಂಡುಕೊಳ್ಳಬೇಕಾಗಿದೆ ಎಂದರು. ಮಹಾವಿದ್ಯಾಲಯದ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಪ್ರೊ. ಬಿ.ಎ. ಪಾಟೀಲ ಮಾತನಾಡುತ್ತ ವ್ಯಕ್ತಿಯ ವ್ಯಕ್ತಿತ್ವ ವಿಕಸನವಾಗಬೇಕಾದರೆ ಇತಿಹಾಸದ ಅವಶ್ಯಕತೆ ಇದೆ ಎಂದರು.
ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಎಸ್.ಪಿ. ತಳವಾರ ಈ ರೀತಿಯ ವಿಚಾರ ಸಂಕಿರಣಗಳು ವಿದ್ಯಾರ್ಥಿಗಳಲ್ಲಿ ಸರ್ವತೋಮುಖ ಬೆಳವಣಿಗೆಯಾಗಲು ಸಹಕರಿಸುತ್ತವೆ ಎಂದು ಅಭಿಪ್ರಾಯಿಸಿದರು. ಪ್ರಾರಂಭದಲ್ಲಿ ಕುಮಾರಿ ಅನನ್ಯಾ ಕುಲಕರ್ಣಿ ಸ್ವಾಗತ ಗೀತೆ ಹಾಡಿದರು. ಐಕ್ಯೂಎಸಿ ಸಂಯೋಜಕರಾದ ಪ್ರೊ. ಬಿ.ಡಿ. ಧಾಮಣ್ಣವರ ಸ್ವಾಗತ ಭಾಷಣ ಮಾಡಿದರು.
ವಿಚಾರ ಸಂಕಿರಣದ ಸಂಘಟನಾ ಕಾರ್ಯದರ್ಶಿಗಳಾದ ಡಾ. ಚಂದ್ರಶೇಖರ ವೈ ಪ್ರಾಸ್ತಾವಿಕ ನುಡಿದರು. ಡಾ. ಎ.ಎಂ. ಜಕ್ಕಣ್ಣವರ, ಪ್ರೊ. ವ್ಹಿ.ಬಿ. ಬುರ್ಲೆ ಹಾಗೂ ಪ್ರೊ. ಶ್ರೀಮತಿ ಎನ್.ಎಂ. ಬಾಗೇವಾಡಿ ಅತಿಥಿ ಪರಿಚಯ ಮಾಡಿದರು. ಪ್ರೊ. ಎಸ್.ಎಸ್. ಫಡತರೆ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಆಡಳಿತಾಧಿಕಾರಿಗಳಾದ ಮೇಜರ ವ್ಹಿ.ಎಸ್. ತುಗಶೆಟ್ಟಿ ಸೇರಿದಂತೆ, ವಿವಿಧ ಮಹಾವಿದ್ಯಾಲಯಗಳಿಂದ ಆಗಮಿಸಿದ ಉಪನ್ಯಾಸಕರು, ವಿದ್ಯಾರ್ಥಿಗಳು, ಮಹಾವಿದ್ಯಾಲಯದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ವರದಿ: ಚಂದ್ರಕಾಂತ ಕಾಂಬಳೆ




