ಸವದತ್ತಿ : ಪಿ, ಎಸ್, ಆರ್,ಮಾನವ ಹಕ್ಕುಗಳ ರಕ್ಷಣಾ ಆಯೋಗ ಹಾಗೂ ಭ್ರಷ್ಟಾಚಾರ ನಿಗ್ರಹದಳ ವಿಭಾಗದಲ್ಲಿ ಮುಸ್ತಾಕ ಹತ್ತಿಕಟಗಿ ಅವರಿಗೆ ರಾಜ್ಯಮಟ್ಟದ ಸ್ಥಾನಮಾನ.
ಹೌದು ಸ್ನೇಹಿತರೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಸುತಗಟ್ಟಿ ಗ್ರಾಮದವರಾದ ಮುಸ್ತಾಕ ಹತ್ತಿಕಟಗಿ ಅವರು, ಸಾಮಾಜಿಕ ಕೆಲಸದಿಂದ ಹೆಸರುವಾಸಿಯಾಗಿ ಪಿ, ಎಸ್, ಆರ್, ಮಾನವ ಹಕ್ಕುಗಳ ರಕ್ಷಣಾ ಆಯೋಗ ಹಾಗೂ ಭ್ರಷ್ಟಾಚಾರ ನಿಗ್ರಹದಳ ವಿಭಾಗ.
ತನ್ನದೆ ಆದ ಕಾರ್ಯ ಚಟುವಟಿಕೆಗಳ ಮುಖಾಂತರ ಅನ್ಯಾಯದ ವಿರುದ್ಧ ದ್ವನಿ ಎತ್ತಿ ನ್ಯಾಯ ಒದಗಿಸುವ ಕಾರ್ಯ ಮಾಡುತ್ತಿದೆ.ಪತ್ರಕರ್ತರಾಗಿ ಕೆಲಸ ಮಾಡುವ ಮುಸ್ತಾಕ ಹತ್ತಿಕಟಗಿ ಅವರನ್ನು ಗುರುತಿಸಿ 2024 ರಿಂದ 2025 ರ ವರೆಗೆ ಅವರನ್ನು ಸವದತ್ತಿ ತಾಲೂಕು ಘಟಕದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿತ್ತು.
ಅವರ ಕೆಲಸ ಕಾರ್ಯ ಸಮಾಜದ ಕುರಿತು ಕೆಸಲ ಮಾಡಿರೋದನ್ನ ಅರಿತುಕೂಂಡ ಸಂಸ್ಥೆ ಅವರನ್ನು ಮತ್ತೆ ನೂತನವಾಗಿ ಜಾರಿ ಬರುವಂತೆ ಕರ್ನಾಟಕ ರಾಜ್ಯ ಪಿ, ಎಸ್, ಆರ್, ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ರಕ್ಷಣಾ ಆಯೋಗ ಹಾಗೂ ಭ್ರಷ್ಟಾಚಾರ ನಿಗ್ರಹದಳ ವಿಭಾಗದ ಸಾಮಾಜಿಕ ಜಾಲತಾಣದ ರಾಜ್ಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ.
ಈ ಕುರಿತು ಸ್ಪಷ್ಟನೆ ನೀಡಿದ ಮುಸ್ತಾಕ ಹತ್ತಿಕಟಗಿ ಅವರು ಆಯ್ಕೆ ಮಾಡಿದ ಸಂಘಟಕರಿಗೆ ಧನ್ಯವಾದ ತಿಳಿಸಿದ್ದಾರೆ.
ವರದಿ : ದುಂಡಪ್ಪ ಹೂಲಿ




