Ad imageAd image

ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭ

Bharath Vaibhav
ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭ
WhatsApp Group Join Now
Telegram Group Join Now

ಇಲಕಲ್ :ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ್ ಬೆಟ್ಟದಲ್ಲಿ ನೆಡೆದ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಇಲಕಲ್ ತಾಲೂಕಿನ ಕಂದಗಲ್ಲ ಗ್ರಾಮದ ಪತ್ರಕರ್ತರ ಪುತ್ರ ಬಸವರಾಜ್ ವಿ ಶಿಂಪಿ ಸನ್ಮಾನಗೊಳ್ಳುತ್ತಿರುವದು.

: ಇಲಕಲ್ಲ ತಾಲೂಕಿನ ಕಂದಗಲ್ಲ ಗ್ರಾಮದ ಪತ್ರಕರ್ತ ವೀರೇಶ್ ಚ್ ಶಿಂಪಿ ಇವರ ಹಿರಿಯ ಸುಪುತ್ರ ಈ ಸಲದ ದ್ವಿತೀಯ ಪಿ ಯು ಸಿ ಯ ವಿಜ್ಞಾನ ವಿಭಾಗದಲ್ಲಿ ಶೇ 92/5 ಅಂಕಗಳೊಂದಿಗೆ ಪಾಸಾಗಿದ್ದು ಇದನ್ನು ಗಮನಿಸಿ ರಾಜ್ಯ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ. ಚಾಮರಾಜನಗರ ಜಿಲ್ಲಾ ಹಾಗೂ ಹನೂರ ತಾಲೂಕ ಕಾರ್ಯನಿರತ ಪತ್ರಕರ್ತರ ಸಂಘಗಳ ಸಹಯೋಗದಲ್ಲಿ ಐತಿಹಾಸಿಕ ಸ್ಥಳ ಚಾಮರಾಜನಗರ ಜಿಲ್ಲೆ ಹನೂರ ತಾಲೂಕಿನ ಮಲೆ ಮಹದೇಶ್ವರ್ ಬೆಟ್ಟದಲ್ಲಿ ನೆಡೆದ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ರಾಜ್ಯ ಪಶು ಸಂಗೋಪನ ಮತ್ತು ರೇಷ್ಮೆ ಸಚಿವರಾದ ಕೆ ವೆಂಕಟೇಶ್ ಹಾಗೂ ಚಾಮರಾಜನಗರ ಜಿಲ್ಲಾಧಿಕಾರಿ ಗಳು, ಜಿಲ್ಲಾ ಎಸ್ ಪಿ ಸಾಹೇಬರು, ಜಿಲ್ಲೆ ಶಾಸಕರುಗಳು ಕಾ ನಿ ಪ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರ ಹಾಗೂ ಎಲ್ಲ ಪಧಾಧಿಕಾರಿಗಳ ಮತ್ತು ಸ್ಥಳೀಯ ಮುಖಂಡರುಗಳ ಸಮ್ಮುಖದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಹಾಗೂ ಗೌರವಕ್ಕೆ ಪಾತ್ರನಾಗಿ ಕಂದಗಲ್ಲ ಗ್ರಾಮದ ಕೀರ್ತಿಯನ್ನು ಹೆಚ್ಚಿಸಿದ ಬಸವರಾಜ್ ವಿ ಶಿಂಪಿ ಯವರನ್ನು ಗ್ರಾಮದ ಪ್ರಗತಿಪರ ರೈತರು ಧಣಿಗಳಾದ ಚನ್ನಪ್ಪಗೌಡ್ರ್ ನಾಡಗೌಡ್ರ ಹಿರಿಯರಾದ ಮಹಾoತೇಶ ಕಡಿವಾಲ, ಮಹಮ್ಮದಸಾಬ ಭಾವಿಕಟ್ಟಿ ಅಮರೇಶ್ ಕೊಡಕೇರಿ ಲಿಂಗರಾಜು ಶಿರಗುಂಪಿ, ಸಂಗಣ್ಣ ಹವಾಲ್ದಾರ, ಪತ್ರಕರ್ತರು ಬಾಗಲಕೋಟ ಜಿಲ್ಲಾ ಕಾ ನಿ ಪ ಅಧ್ಯಕ್ಷರಾದ ಆನಂದ ಧಲಬಂಜನ ರಾಜ್ಯ ಸಮಿತಿಯ ಮಹೇಶ್ ಅಂಗಡಿ,ಬಿ ಬಾಬು,ನಾಗೇಶ್ ನಿಲೋಗಲ್ಲ ಇಲಕಲ್ಲ ಕಾ ನಿ ಪ ಅಧ್ಯಕ್ಷರಾದ ವಿನೋದ್ ಬಾರಿಗಿಡದ, ಜಾಕಿರಹುಸೇನ್ ತಾಳಿಕೋಟಿ, ಪ್ರಕಾಶ ಗುಳೇದಗುಡ್ಡ,ಗುರು ಗಾಣಿಗೇರ ಭೀಮಣ್ಣ ಗಾಣಿಗೇರ, ಸೇರಿದಂತೆ ಕಂದಗಲ್ಲ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು,ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಅಭಿನಂದಿಸಿದ್ದಾರೆ.

ವರದಿ: ದಾವಲ್ ಶೇಡಂ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!