Ad imageAd image

ರಾಜ್ಯ ,ಉತ್ತರ ಕರ್ನಾಟಕ T10 ಟೆನ್ನಿಸ್ ಬಾಲ್ ಕ್ರಿಕೇಟ್ ಅಸೋಶಿಯೇಷನಗಳ ಉದ್ಘಾಟನಾ ಸಮಾರಂಭ

Bharath Vaibhav
ರಾಜ್ಯ ,ಉತ್ತರ ಕರ್ನಾಟಕ T10 ಟೆನ್ನಿಸ್ ಬಾಲ್ ಕ್ರಿಕೇಟ್ ಅಸೋಶಿಯೇಷನಗಳ ಉದ್ಘಾಟನಾ ಸಮಾರಂಭ
WhatsApp Group Join Now
Telegram Group Join Now

 ಇಲಕಲ್:-ರಾಜ್ಯ ಮತ್ತು ಉತ್ತರ ಕರ್ನಾಟಕ T10 ಟೆನ್ನಿಸ್ ಬಾಲ್ ಕ್ರಿಕೇಟ್ ಅಸೋಶಿಯೇಷನಗಳ ಉದ್ಘಾಟನಾ ಸಮಾರಂಭದಲ್ಲಿ ಹಾಗೂ ರಾಷ್ಟ್ರೀಯ ಜ್ಯೂನಿಯರ್ T10 ಟೆನ್ನಿಸ್ ಬಾಲ್ ಕ್ರಿಕೇಟ್‌ ಚಾಂಪಿಯನಶಿಪ್ಪಿಗಾಗಿ ಹಿಮಾಚಲ ಪ್ರದೇಶಕ್ಕೆ ಹೋಗುತ್ತಿರುವ ಬಾಲಕ ಬಾಲಕಿಯರಿಗೆ ಬೀಳ್ಕೊಡುವ ಮತ್ತು ಸಮವಸ್ತ್ರ ವಿತರಣಾ ಕಾರ್ಯಕ್ರಮವು ಇಲಕಲ್ಲದ ಆರ್ ವೀರಮಣಿ ಭವನದಲ್ಲಿ ನಡೆದಿತ್ತು.

ಹುನಗುಂದ ಶಾಸಕ,ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಜಯಾನಂದ ಕಾಶಪ್ಪನವ‌ರ್ ಮಾತನಾಡುತ್ತ ಉತ್ತರ ಕರ್ನಾಟಕ T10 ಟೆನ್ನಿಸ್ ಬಾಲ್ ಕ್ರಿಕೇಟ್ ಅಸೋಶಿಯೇಷನ್ನಿಗೆ ಅಧ್ಯಕ್ಷನನ್ನಾಗಿ ನೇಮಿಸಿದ್ದಕ್ಕೆ ಕರ್ನಾಟಕ ರಾಜ್ಯ T10 ಟೆನ್ನಿಸ್ ಬಾಲ್ ಕ್ರಿಕೆಟ್ ಅಸೋಶಿಯೇಶನ್ ಬೆಂಗಳೂರು ಅಧ್ಯಕ್ಷೆಯಾದ ಶ್ರೀಮತಿ ಶಹೀದಾಬೇಗಂ ಅಬ್ದುಲ್ ಹಕೀಂ ಅವರಿಗೆ ಧನ್ಯವಾದಗಳನ್ನು ತಿಳಿಸಿದರು.

ಹಾಗೆಯೇ ಹಿಮಾಚಲ ಪ್ರದೇಶಕ್ಕೆ ತೆರಳುತ್ತುರುವ ಕರ್ನಾಟಕದ ಪುರುಷ ಮತ್ತು ಮಹಿಳಾ ತಂಡಗಳ ಕ್ರಿಕೇಟ್ ಆಟಗಾರರಿಗೆ ಸಮವಸ್ತ್ರವನ್ನು ನೀಡಿ ಪಂದ್ಯ ಗೆದ್ದು ಬರಲು ಶಾಸಕ ವಿಜಯಾನಂದ ಕಾಶಪ್ಪನವರ ಶುಭಹಾರೈಸಿದರು.

ವರದಿ:- ದಾವಲ್ ಶೇಡಂ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!