Ad imageAd image

ಪತ್ರಕರ್ತರಿಗೆ ಸರ್ಕಾರದಿಂದ ಸೌಲಭ್ಯ ಸಿಗಲೇಬೇಕು: ಕಾನಿಪ ಧ್ವನಿ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ್

Bharath Vaibhav
ಪತ್ರಕರ್ತರಿಗೆ ಸರ್ಕಾರದಿಂದ ಸೌಲಭ್ಯ ಸಿಗಲೇಬೇಕು: ಕಾನಿಪ ಧ್ವನಿ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ್
WhatsApp Group Join Now
Telegram Group Join Now

ಇಳಕಲ್: –ಪತ್ರಕರ್ತರಗೆ ಸರ್ಕಾರದಿಂದ ಸಿಗಬೇಕಾದ ಎಲ್ಲ ಸೌಲಭ್ಯಗಳನ್ನು ಸರ್ಕಾರ ಒದಗಿಸಬೇಕು. ಪತ್ರಕರ್ತರು ಮತ್ತು ಅವರ ಕುಟುಂಬ ಸಾಮಾಜಿಕವಾಗಿ ಗುರುತಿಸಲ್ಪಟ್ಟರೂ ಕುಟುಂಬ ಬೆಳೆದಂತೆ ಪತ್ರಕರ್ತರ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿವೆ. ಇದರಿಂದ ಪಾರಾಗಲು ಸರ್ಕಾರದ ಸೌಲಭ್ಯ ಅಗತ್ಯ ಎಂದು ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟರು.

ನಗರದ ವಿಜಯ ಮಹಾಂತೇಶ್ವರ ದಾಸೋಹ ಭವನದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯಿಂದ ಆಯೋಜಿಸಿದ್ದ ಪತ್ರಕರ್ತರ ದಿನಾಚರಣೆ ಹಾಗೂ ಸತ್ಕಾರ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಈಗಾಗಲೇ ಸರ್ಕಾರವು ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಕಲ್ಪಿಸಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸೌಲಭ್ಯಗಳನ್ನು ಪಡೆಯಲು ಒಗ್ಗಟ್ಟಾಗಿ ಶ್ರಮಿಸೋಣ ಎಂದು ಸಂಘದ ಸದಸ್ಯರಿಗೆ ಕಿವಿ ಮಾತು ಹೇಳಿದರು.ಅಚ್ಚುಕಟ್ಟಾಗಿ ಕಾರ್ಯಕ್ರಮ ಆಯೋಜಿಸಿದ್ದಕ್ಕೆ ಪೂಜ್ಯ ಗುರುಮಹಾಂತಶ್ರೀಗಳು ಶ್ಲಾಘಿಸಿ ಮಾತನಾಡಿ, ಪತ್ರಿಕೆಗಳು ಜನರ ಅಭಿಪ್ರಾಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿತ್ತವೆ ಎಂದರು.

ನಿತ್ಯ ಪತ್ರಿಕೆ ಓದುವುದರಿಂದ ಗತಕಾಲದ ಘಟನೆಗಳು ನೆನಪಿನ ಬಿಟ್ಟಿಯಲ್ಲಿ ಉಳಿದತ್ತವೆ. ಅವಶ್ಯಕತೆ ಇದ್ದಾಗ ನೆನಪಿಗೆ ಬರುತ್ತದೆ. ಈ ಮೂಲಕ ನಮ್ಮ ಜ್ಞಾನ ವೃದ್ಧಿಯಾಗುತ್ತದೆ ಎಂದರು.ಸಾಮಾಜಿಕ ಜಾಲತಾಣದಿಂದ ಪತ್ರಿಕೆಗಳಿಗೆ ತೊಡಕಲ್ಲ. ಜಾಲತಾಣದಲ್ಲಿ ತಕ್ಷಣ ಮಾಹಿತಿ ದೊರೆದರೆ, ಪತ್ರಿಕೆಗಳಿಂದ ಸಮಗ್ರ ಮಾಹಿತಿ ಸಿಗುತ್ತದೆ. ಇಂತಹ ಉತ್ತಮ ಕೆಲಸ ಮಾಡುವ ಪತ್ರಕರ್ತರ ಬದುಕು ಸುಧಾರಣೆ ಕಾಣಬೇಕು. ಇದಕ್ಕೆ ಸರ್ಕಾರ ಅವರಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕು ಎಂದು ಅಭಿಪ್ರಾಯ ಪಟ್ಟಿದರು.

ಸಂವಿಧಾನದ ನಾಲ್ಕನೇ ಅಂಗವಾಗಿ ಪತ್ರಿಕೋದ್ಯಮ ತನ್ನ ಕಾರ್ಯವನ್ನು ಮಾಡಬೇಕು. ಪತ್ರಕರ್ತರು ಆಗಾಗ ಛಾಟಿ ಬೀಸಿದಾಗ ಮಾತ್ರ ಕಾರ್ಯಾಂಗ‌ ಚುರುಕಿನಿಂದ ಕೆಲಸ ಮಾಡುತ್ತದೆ ಎಂದು ಉಪತಹಶೀಲ್ದಾರ್ ಈಶ್ವರ್ ಗಿಡ್ಡಿ ಹೇಳಿದರು.ಹಿರಿಯ ವರದಿಗಾರರಾದ ಬಿ.ಬಾಬು, ಸಜ್ಜನರಾಜ ಮೆಹ್ತಾ, ಪತ್ರಿಕಾ ವಿತರಕರಾದ ಅಬ್ದುಲ್ ಸಾಬ್ ಮುಲ್ಲಾ, ಓದುಗರಾದ ಗಂಗಪ್ಪ ಮಾನಪ್ಪ ಬಡಿಗೇರ, ಪ್ರಕಾಶ ಲೊಖಂಡೆ ಅವರನ್ನು ಸತ್ಕರಿಸಲಾಯಿತು.

ಸುರಕ್ಷಾ ಸೇವಾ ಸಂಸ್ಥೆಯಲ್ಲಿ ಬಂಗ್ಲೆ ಮಲ್ಲಿಕಾರ್ಜುನ್ ರಿಂದ ಉಪಹಾರ ಅರ್ಪಣೆ: ಇಳಕಲ್ ನಗರದ ಸುರಕ್ಷಾ ಸೇವಾ ಸಂಸ್ಥೆಯಲ್ಲಿ ಕಾರ್ಯನಿರತ ಪತ್ರಕರ್ತರ ಧ್ವನಿಯ ಇಳಕಲ್ ತಾಲೂಕು ಘಟಕದ ವತಿಯಿಂದ ಪತ್ರಿಕಾ ದಿನಾಚರಣೆಯ ಅಂಗವಾಗಿ ಸಂಘದ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ಸಮ್ಮುಖದಲ್ಲಿ ಉಪಹಾರ ವ್ಯವಸ್ಥೆ ಮಾಡಲಾಯಿತು.

ಈ ವೇಳೆ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ತಾಲೂಕು ಅಧ್ಯಕ್ಷ ಶರಣಪ್ಪ ಹೊದ್ನೂರ್, ಹಿರಿಯ ಪತ್ರಕರ್ತರಾದ ವಿಜಯ ಪಲ್ಲೆದ್(VP), ಗುಂಡಣ್ಣ ಲಾಟಿ, ಶರಣಗೌಡ ಕಂದಕೂರು, ಡಿಸಿಜಿ ಕನ್ನಡದ ಸಂಪಾದಕ ದೊಡ್ಡನಗೌಡ ಗುಡಿಹಿಂದಿನ, ಸುರಕ್ಷಾ ಸೇವಾ ಸಂಸ್ಥೆಯ ಮುಖ್ಯಸ್ಥ ಪುರುಷೋತ್ತಮ ದರಕ ಇದ್ದರು.

ವರದಿ :-ದಾವಲ್ ಶೇಡಂ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!