ಬೆಂಗಳೂರು: ನಮ್ಮ ಕನ್ನಡಿಗರ ವಿಜಯ ಸೇನೆ ವತಿಯಿಂದ ಕನ್ನಡ ಚಲನಚಿತ್ರ ಖ್ಯಾತ ನಟ ಮುರಳಿರವರ ಹುಟ್ಟುಹಬ್ಬದ ಪ್ರಯುಕ್ತ
ರಾಜ್ಯದ್ಯಕ್ಷ ಎಸ್. ವಿಜಯ್ ಕುಮಾರ್, ಬೆಂಗಳೂರು ಜಿಲ್ಲಾ ಅಧ್ಯಕ್ಷ ಪುಟ್ಟಗೌಡ್ರು ತೆಂಕನಹಳ್ಳಿ, ಚಾಲಕರ ಘಟಕ ಅಧ್ಯಕ್ಷ ಪ್ರವೀಣ್ ಭಜರಂಗಿ, ದೊಡ್ಡಪ್ಪ ಶಂಕರ್, ಕಾಲೇಜ್ ಬಾಯ್ ಮುರುಗನ್,ಮಾದೇವ್, ಪ್ರಭು, ಹರಿ ಕುಮಾರ್ ಮನು ಸಂಜೆ, ಸುಧೀರ್ ,ಬೆಂಗಳೂರು ಜಿಲ್ಲೆ ಕಾರ್ಯದರ್ಶಿ ಪ್ರಭು ಇವರೆಲ್ಲರೂ ಖ್ಯಾತ ನಟ ಮುರಳಿರವರಿಗೆ ಶಾಲು ಹೊದಿಸಿ ಮೈಸೂರು ಪೆಟೆ ಧರಿಸಿ ಫಲಪುಷ್ಪದೊಂದಿಗೆ ಗೌರವಿಸಿ ಸಿಹಿ ತಿನ್ನಿಸಿ ಶುಭ ಹಾರೈಸಿದರು.
ನಂತರ ಅವರು ಮನುಷ್ಯನು ಹುಟ್ಟಿದ ಮೇಲೆ ಸಮಾಜಕ್ಕಾಗಿ ಏನಾದರೂ ಮಾಡು ಮನೋಭಾವ ನಮ್ಮ ಖ್ಯಾತ ನಟ ಮುರಳಿ ಅವರು ಬೆಳೆಸಿಕೊಂಡು ಬಂದಿದ್ದಾರೆ ಬಡವರ ದೀನ ದಲಿತರ ಕೂಲಿ ಕಾರ್ಮಿಕರ ಬಗ್ಗೆ ಅಪಾರ ಕಾಳಜಿ ಹೊಂದಿದ ಏಕೈಕ ವ್ಯಕ್ತಿ ಮುರಳಿ ಎಂದರೆ ತಪ್ಪಾಗಲಾರದು ಎಂದು ರಾಜ್ಯಾಧ್ಯಕ್ಷ ಎಸ್. ವಿಜಯ್ ಕುಮಾರ್ ಶುಭ ಕೋರಿ ಮಾತಾಡಿದರು.
ಆಟೋ ಚಾಲಕರ ಮುಖಂಡ ಹಾಗೂ ಜಿಲ್ಲೆ ಕಾರ್ಯದರ್ಶಿ ಪ್ರಭು ಅವರು ಸರ್ವರಿಗೂ ಸ್ವಾಗತ ಕೋರಿದರು.
ಈ ಸಂದರ್ಭದಲ್ಲಿ ಚಲನ ಚಿತ್ರ ಅಭಿಮಾನಿಗಳು ಹಾಗೂ ಮುರಳಿ ಅಭಿಮಾನಿಗಳು ಮುಂತಾದವರು ಮುರಳಿ ಅವರಿಗೆ ಹೂವು ಗುಚ್ಚು ನೀಡಿ ಸಿಹಿ ತಿನ್ನಿಸಿ ಶುಭ ಕೋರಿದರು.
ವರದಿ: ಅಯ್ಯಣ್ಣ ಮಾಸ್ಟರ್