ಬೆಂಗಳೂರು: -ಪೀಣ್ಯ ದಾಸರಹಳ್ಳಿ ಯಶವಂತಪುರ ವಿಧಾನಸಭಾ ಕ್ಷೇತ್ರದ ಕರಿಹೊಬನಹಳ್ಳಿಯಲ್ಲಿ ಭಗವಾನ್ ಚತುರ್ಮುಖ ಬ್ರಹ್ಮನ ದೇವಸ್ಥಾನದ 13ನೇ ವಾರ್ಷಿಕೋತ್ಸವವನ್ನು ದೇವಸ್ಥಾನ ಆವರಣದಲ್ಲಿ ಧರ್ಮದರ್ಶಿ ಪೂಜ್ಯ ಶ್ರೀಗಳಾದ ವಿಜಯಾನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ ಹಾಗೂ ಸಮ್ಮುಖದಲ್ಲಿ ಅಭಿಷೇಕ ನವಗ್ರಹ ಪೂಜೆ ನವಗ್ರಹ ಹೋಮ ಗಣ ಹೋಮ ಮೃತ್ಯುಂಜಯ ಹೋಮ ಸರಸ್ವತಿ ಹೋಮ ಹವನಗಳು ಪೂಜಾ ಪುನಸ್ಕಾರಗಳು ವಿದ್ವಾನ್ ಪುರೋಹಿತರೊಂದಿಗೆ ಸಾವಿರಾರು ಭಕ್ತರೊಂದಿಗೆ ಜರುಗಿದವು ಎಂದು ಪೂಜ್ಯ ವಿಜಯಾನಂದ ಸ್ವಾಮೀಜಿ ಹೇಳಿದರು.
ಅವರು ಚತುರ್ಮುಖ ಬ್ರಹ್ಮದೇವರ ದೇವಸ್ಥಾನದ 13ನೇ ವಾರ್ಷಿಕೋತ್ಸವವನ್ನು ಪ್ರತಿ ವರ್ಷವೂ ಆಷಾಡ ಮಾಸದಲ್ಲಿ ಆಚರಿಸುತ್ತಾ ಬರುತ್ತಿದ್ದೇವೆ.ಈ ಒಂದು ದೇವತಾ ಕಾರ್ಯದಿಂದ ದೇಶಕ್ಕೆ ,ರಾಜ್ಯಕ್ಕೆ ,ಭಕ್ತರಿಗೆ ಮತ್ತು ವಿದ್ಯಾರ್ಥಿಗಳಿಗೆ ಶುಭ ಶುಭವಾಗಲೆಂದು ಹಾರೈಸುತ್ತೇವೆ ಮತ್ತು ಪ್ರತಿದಿನ ಬೆಳಿಗ್ಗೆ ಸಂಜೆ ಪೂಜೆ ನಡೆಯುತ್ತದೆ ಮತ್ತು ಪ್ರಸಾದ ವಿನಿಯೋಗ ಮಾಡಲಾಗುವುದು.
ಬ್ರಹ್ಮದೇವನ ದೇವಸ್ಥಾನವು ಪ್ರಪಂಚದಲ್ಲಿ ಎರಡು ಸ್ಥಳದಲ್ಲಿ ಮಾತ್ರ ಇರುವುದು ಮಹಾರಾಷ್ಟ್ರದ, ಕರ್ನಾಟಕದ ಬೆಂಗಳೂರು ಉತ್ತರ ಜಿಲ್ಲಾ ಯಶವಂತಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಕರಿಹೊಬನಹಳ್ಳಿ ಚತುರ್ಮುಖ ಬ್ರಹ್ಮದೇವನ ದೇವಸ್ಥಾನಕ್ಕೆ ತಮ್ಮ ತಮ್ಮ ಕಷ್ಟ ಕಾರ್ಪಣ್ಯಗಳು ನಿವಾರಣೆ ಆಗುತ್ತವೆ ಎಂಬ ಸದ್ಭಕ್ತರನ್ನು ಉದ್ದೇಶಿಸಿ
ಧರ್ಮದರ್ಶಿ ವಿಜಯಾನಂದ ಸ್ವಾಮೀಜಿ ಅವರು ಆಶಿರ್ವಚನ ನೀಡಿದರು.
ಅಂತರಾಷ್ಟ್ರೀಯ ಹಿಂದೂ ಪರಿಷದ್ ರಾಷ್ಟ್ರೀಯ ಬಜರಂಗದಳದ ಕರ್ನಾಟಕ ರಾಜ್ಯಾಧ್ಯಕ್ಷ ವಿ. ಆನಂದ್ ಅವರು ಚತುರ್ಮುಖ ಬ್ರಹ್ಮದೇವರಿಗೆ ಪೂಜಾ ಪುನಸ್ಕಾರ ಸಲ್ಲಿಸಿ ಭಗವಂತನ ದರ್ಶನ ಪಡೆದರು ನಂತರ ಶ್ರೀಗಳಾದ ಪೂಜ್ಯ ವಿಜಯಾನಂದ ಸ್ವಾಮೀಜಿಗಳಿಗೆ ಶಾಲು ಹೂವು ಹಣ್ಣು ಹಂಪಲು ತಾಂಬೂಲಗಳಿಂದ ಗೌರವಿಸಿ ಆಶಿರ್ವಾದ ಪಡೆದು ಭಗವಂತ ಚತುರ್ಮುಖ ಬ್ರಹ್ಮ ದೇವರನ್ನು ಪೂಜಿಸಿದರೆ ನಮಗೆ ಬರುವ ಕಷ್ಟಗಳು ಪರಿಹಾರ ಆಗುತ್ತವೆ ಎಂಬ ರಾಜ್ಯಾಧ್ಯಕ್ಷ ವಿ.ಆನಂದ್ ಅವರ ಅನುಭವವನ್ನು ಭಕ್ತಾದಿಗಳಿಗೆ ಮನವರಿಕೆ ಮಾಡಿಕೊಟ್ಟರು.
ಈ ಸಂದರ್ಭದಲ್ಲಿ ರವೀಂದ್ರ ಜಿಕೆಡಬ್ಲೂ ಲೇಔಟ್, ಭೀಮ ಸಂದೇಶ ಪತ್ರಿಕೆಯ ಸಂಪಾದಕ ಹಾಗೂ ಬಸವ ಕ್ರಾಂತಿ ಪತ್ರಿಕೆಯ ಪ್ರತಿನಿಧಿ ವೈ ಜಿ ನರಸಿಂಹಮೂರ್ತಿ, ಸಂಜೆ ಸಮಯ ಪತ್ರಿಕೆಯ ಪ್ರತಿನಿಧಿ ಕೆಂಪರಾಜು, ಭಾರತ ವೈಭವ ಪತ್ರಿಕೆಯ ಬೆಸ್ಟ್ ಆಲ್ರೌಂಡರ್ ರಿಪೋರ್ಟರ್ ಪ್ರಶಸ್ತಿ ಪುರಸ್ಕೃತರಾದ ಅಯ್ಯಣ್ಣ ಮಾಸ್ಟರ್, ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಭಕ್ತ ಮಂಡಳಿ ಮತ್ತು ಸಮಸ್ತ ನಾಗರಿಕ ಬಂಧು ಭಗನಿಯರು ಭಾಗವಹಿಸಿದ್ದರು.
ವರದಿ:-ಅಯ್ಯಣ್ಣ ಮಾಸ್ಟರ್