ಸವದತ್ತಿ: ತಾಲೂಕಿನ ಕರೀಕಟ್ಟಿ, ಅಸುಂಡಿ, ಸುತಗಟ್ಟಿ ಮತ್ತು ಇಂಚಲ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಮಹಿಳಾ ಭಾಗವಹಿಸುವಿಕೆ ಹೆಚ್ಚಿಸುವ ಸಲುವಾಗಿ ಹಾಗೂ ಮಕ್ಕಳ ಅಪೌಷ್ಟಿಕತೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಪ್ರಾರಂಭಿಸಿರುವ ಕೂಸಿನ ಮನೆ ಕೇಂದ್ರಗಳಿಗೆ ಶುಕ್ರವಾರ ಮೊಬೈಲ್ ಕ್ರಷ್ ಸಂಸ್ಥೆಯ ಸಂಯೋಜಕ ಶ್ರೀ ವಿಶ್ವನಾಥ ಜಿ ಅವರು ಭೇಟಿ ನೀಡಿದರು.
ಈ ವೇಳೆ ಕೂಸಿನ ಮನೆಗಳ ಪ್ರಗತಿ ಪರಿಶೀಲನೆ, ಕೇರ್ ಟೇಕರ್ಸ್ ಗಳ ಕಾರ್ಯವೈಖರಿ ,ಪೌಷ್ಟಿಕ ಆಹಾರ, ದಾಖಲಾತಿಗಳ ನಿರ್ವಹಣೆ ,ಮಕ್ಕಳ ಬೆಳವಣಿಗೆ ಕುರಿತು ಪರಿಶೀಲನೆ ನಡೆಸಿ, ಪಂಚಾಯತ ಅಭಿವೃದ್ದಿ ಅಧಿಕಾರಿಗಳು, ಕೂಸಿನ ಮನೆ ಆರೈಕೆದಾರರು ಹಾಗೂ ಪೋಷಕರೊಂದಿಗೆ ಚರ್ಚಿಸಿದರು.
ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕರು( ಗ್ರಾಉ) ಶ್ರೀ ಆರ್ ಬಿ ರಕ್ಕಸಗಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಶ್ರೀಮತಿ ಸುನಿತಾ ಪಾಟೀಲ, ತಾಪಂ ಐಇಸಿ ಸಂಯೋಜಕ ಮಲೀಕಜಾನ ಮೋಮಿನ, ತಾಪಂ ತಾಂತ್ರಿಕ ಸಂಯೋಜಕ ಮಹಾದೇವ ಕಾಮಣ್ಣವರ, ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಮಹಾದೇವ ಗಡೇಕಾರ, ಗುರಣಗೌಡರ, ಪ್ರಶಾಂತ ತೋಟಗಿ, ಮಲ್ಲಪ್ಪಾ ಹಾರುಗೊಪ್ಪ, ಜನಪ್ರತಿನಿಧಿಗಳು, ಅಂಗನವಾಡಿ ಮೇಲ್ವಿಚಾರಕಿಯರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಗ್ರಾಮ ಕಾಯಕ ಮಿತ್ರರು, ಕೇರಟೇಕರ್ಸ್, ಮಕ್ಕಳು ಹಾಗೂ ಪಾಲಕರು, ಗ್ರಾಪಂ ಸಿಬ್ಬದಿಗಳು, ಇನ್ನಿತರರು ಉಪಸ್ಥಿತರಿದ್ದರು.