ಕಿತ್ತೂರು:- ತಹಶೀಲ್ದಾರ್ ಕಚೇರಿಯಲ್ಲಿ ಮೊನ್ನೆ ಸ್ವಾತಂತ್ರ್ಯ ಉತ್ಸವದ ಪೂರ್ವ ಸಭೆಯನ್ನು ಕಿತ್ತೂರು ಶಾಸಕ ಬಾಬಾ ಸಾಹೇಬ್ ಪಾಟೀಲ್ ಅಧ್ಯಕ್ಷತೆಯಲ್ಲಿ, ತಹಶೀಲ್ದಾರ್ ರವೀಂದ್ರ ಹಾದಿಮನಿ ಹಾಗೂ ತಾಲ್ಲೂಕು ಪಂಚಾಯಿತಿ Eo ಕಿರಣ್ ಘೋರ್ಪಡೆ ನೇತೃತ್ವದಲ್ಲಿ, ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಹಾಗೂ ಜನಪ್ರತಿನಿಗಳ ಸಮ್ಮುಖದಲ್ಲಿ ಸಭೆಯನ್ನು ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಎಲ್ಲರ ಅಭಿಪ್ರಾಯ ಸಂಗ್ರಹ ಮಾಡಿ ಈ ಸ್ವಾತಂತ್ರ್ಯ ಉತ್ಸವವನ್ನು ಅರ್ಥಪೂರ್ಣವಾಗಿ ಆಚರಣೆ ಯಶಸ್ವಿಗೊಳಿಸುವುದಕ್ಕೆ ನಿರ್ಧಾರ ಕೈ ಗೊಳ್ಳಲಾಯಿತು. ಇದೇ ರಾಜ್ಯ ವಿಪತ್ತು ನಿರ್ವಹಣೆ ವತಿಯಿಂದ ಕುಲವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿಂಗಾಪುರದ ಕೆರೆ ದಾಟಿ ಮಕ್ಕಳು ಟ್ಯೂಬಿನಲ್ಲಿ ಸಂಚಾರ ಮಾಡುತ್ತಿರುವುದನ್ನು ಮನಗಂಡು ಜಿಲ್ಲಾಧಿಕಾರಿ ಹಾಗೂ ಶಾಸಕರ ವಿಶೇಷ ಪ್ರಯತ್ನದಿಂದ ಬೋಟ್ ಅನ್ನು ಹಸ್ತಾಂತರ ಮಾಡಿ ಸುದ್ದಿ ವಾಹಿನಿಗಳೊಂದಿಗೆ ಶಾಸಕ ಬಾಬಾ ಸಾಹೇಬ್ ಪಾಟೀಲ್ ಮಾತನಾಡಿ
ಮುಂಬರುವ ದಿನಗಳಲ್ಲಿ ಅಲ್ಲಿ ಬ್ರಿಡ್ಜ್ ನಿರ್ಮಾಣ ಮಾಡುವುದಕ್ಕೆ ಕ್ರಮ ಗೊಳ್ಳಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಸಂಗನಗೌಡ ಪಾಟೀಲ್ , ಮುಖಂಡರಾದ ಸುನಿಲ್ ಗಿವಾರಿ, ಪಪಂ ಸದಸ್ಯ ಕೃಷ್ಣ ಬಾಳೆಕುಂದ್ರಿ, ಅಸ್ಪ್ಯಾಕ್ ಹವಾಲ್ದಾರ್, ಮುದುಕಪ್ಪ ಮರಡಿ, Mf ಜಕಾತಿ , ಚೆನ್ನಗೌಡ ಪಾಟೀಲ್ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.
ವರದಿ:- ಬಸವರಾಜು.