ಸೇಡಂ: ಸೀಲಾರಾಕೊಟ್ ಗ್ರಾಮದಲ್ಲಿ ಅಂಬೇಡ್ಕರ ಮೂರ್ತಿ ಮತ್ತು ಅಂಗನವಾಡಿ ಕೇಂದ್ರ ಬಿ ಎದುರುಗಡೆ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಮೋರಿ ನೀರು ಮತ್ತು ಮೇಲೆ ನೀರು ತುಂಬಿ ಗಬ್ಬು ನಾರುತ್ತಿದೆ.
ಬಸ್ ನಿಲ್ದಾಣದಿಂದ ಊರೊಳಗೆ ಬರಬೇಕಾದರೆ ಮುಖ್ಯರಸ್ತೆ ಆಗಿರುವುದರಿಂದ ವಾಹನಗಳು ಅತಿಯಾಗಿ ಓಡಾಡುತ್ತವೆ. ರಸ್ತೆಯ ಬದಿಯಲ್ಲಿ ಅಂಗನವಾಡಿ ಕೇಂದ್ರ ಇದ್ದು ರಸ್ತೆಯ ನೀರೆಲ್ಲ ಆ ಶಾಲೆಯೊಳಗೆ ನುಗ್ಗುತ್ತಿವೆ.

ಇದರಿಂದ ಸಣ್ಣಪುಟ್ಟ ಮಕ್ಕಳಿಗೆ ತುಂಬಾ ತೊಂದರೆ ಆಗುತ್ತಿದ್ದಲ್ಲದೆ ಅಪಘಾತಗಳು ಸಂಭವಿಸುವ ಸಾಧ್ಯತೆ ಇದೆ.
ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಂಡು ಸಾರ್ವಜನಿಕರಿಗೆ ಮತ್ತು ಮಕ್ಕಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಸ್ಥಳೀಯರ ಆಕ್ರೋಶವಾಗಿರುತ್ತದೆ.
ಹಾಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿಂಬಾಗದ ಸ್ಥಳದಲ್ಲಿ ಅನೇಕ ರೀತಿಯ ಉಪಯೋಗಕ್ಕೆ ಬಾರದ ಕೆಲವು ತಿಪ್ಪೆಗಳಿರುವದಾರಿಂದ ಸೊಳ್ಳೆಗಳ ಕಾಟ ಅಷ್ಟೇ ಅಲ್ಲದೆ ಇದೀಗ ಹುಳುಗಳು ಕೂಡ ಶಾಲೆಯೊಳಗೆ ನುಗ್ಗುತಿವೇ. ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಅದೆಷ್ಟೋ ಬಾರಿ ಗಮನಕ್ಕೆ ತಂದರು ಇದರ ಬಗ್ಗೆ ಕ್ಯಾರೇ ಎನ್ನುತ್ತಿಲ್ಲ.
ನಿರ್ಲಕ್ಷ್ಯ ಮಾಡುತ್ತಿರುವ ಗ್ರಾಮ ಪಂಚಾಯತ್ ಅಧಿಕಾರಿಗಳ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳುವಂತೆ ಸ್ಥಳೀಯರ ಆಕ್ರೋಶ ವ್ಯಕ್ತವಾಗಿದೆ. ಸಮಸ್ಯೆಗಳನ್ನು ಸರಿಪಡಿಸದಿದ್ದರೆ ಗ್ರಾಮ ಪಂಚಾಯತ್ ಮುತ್ತಿಗೆ ಹಾಕಿ ಉಗ್ರ ಹೋರಾಟ ಮಾಡಲಾಗುವುದು ಎಂದು ಸ್ಥಳೀಯರ ಅಕ್ರೋಶವಾಗಿದೆ.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




