ಸೇಡಂ: ಸೇಡಂ ನ ಹೃದಯ ಭಾಗ ಬಸವೇಶ್ವರ ಸರ್ಕಲ್ ನಿಂದ ( ಸೇಡಂ ಕೋಡಂಗಲ್ ರಸ್ತೆ ) ಅಲ್ಟ್ರಾಟೆಕ್ ಸಿಮೆಂಟ ಕಂಪನಿ ಮೇನ ಗೇಟ್ ವರೆಗೆ ಬೃಹತ್ ಪ್ರಮಾಣದ ಲಾರಿಗಳು ಸರ್ವಿಸ್ ರಸ್ತೆಯ ಮೇಲೆ ಪಾರ್ಕಿಂಗ್ ಮಾಡುತ್ತಿರುವುದರಿಂದ ಅಂಗಡಿಯವರಿಗೂ ಹಾಗು ಸಾರ್ವಜನಿಕರಿಗೆ ಅತೀವ ತೊಂದರೆ ಆಗುತ್ತಿದೆ.
ಮಾನ್ಯ ಶಾಸಕರು ಇತ್ತಕಡೆ ಗಮನ ಹರಿಸಬೇಕು. ಪಿಡಬ್ಲ್ಯೂಡಿ ಇಲಾಖೆ ಪುರಸಭೆ ಸೇಡಂ ಮತ್ತು ಸಂಬಂಧ ಪಟ್ಟ ಇಲಾಖೆಯವರು ಕಟ್ಟು ನಿಟ್ಟಿನ ಸಿಸ್ತು ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಸತ್ಯ ರೆಡ್ಡಿ ಆರ್ ಶೇರಿಕರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




