——————————————————-ಬೃಹತ್ ಮೊತ್ತದತ್ತ ಭಾರತ ಎ
ಕ್ಯಾಂಟ್ ಬರ್ರಿ( ಇಂಗ್ಲೆಂಡ್) ಕನ್ನಡಿಗ ಕರುಣ ನಯ್ಯರ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಭಾರತ ಎ,ತಂಡ ಇಂಗ್ಲೆಂಡ್ ಪ್ರವಾಸದ ಮೊದಲ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಲಯನ್ ವಿರುದ್ಧ ಬೃಹತ್ ಮೊತ್ತದತ್ತ ಮುನ್ನಡೆದಿದೆ.

—————————–ಶತಕದತ್ತ ಸರಫರಾಜ್ ಖಾನ್
ಮೊದಲ ದಿನದಾಟ ಮುಗಿದಾಗ ಭಾರತ ಎ, ತಂಡ 3 ವಿಕೆಟ್ ಗೆ 409 ರನ ಗಳಿಸಿದೆ. ಕರುಣ ನಯ್ಯರ 186, ಸರಫರಾಜ್ ಖಾನ್ 92 ರನ್ ಗಳಿಸಿ ಕ್ರೀಸ್ ಬಳಿ ಇದ್ದರು. ಕರುಣ ನಯ್ಯರ 246 ಎಸೆತಗಳಲ್ಲಿ 24 ಬೌಂಡರಿ 1 ಸಿಕ್ಸರ್ ಸಿಡಿಸಿ ಭರ್ಜರಿ ಬ್ಯಾಟಿಂಗ್ ಫಾರ್ಮ್ ಮುಂದುವರೆಸಿದ್ದಾರೆ. ಸರಫರಾಜ್ ಖಾನ್ 119 ಎಸೆತಗಳಲ್ಲಿ 13 ಬೌಂಡರಿಗಳ ನೆರವಿನಿಂದ 92 ರನ್ ಗಳಿಸಿ ಶತಕದ ಅಂಚಿನಲ್ಲಿದ್ದಾರೆ.




