Ad imageAd image

ರಾಸಾಯನಿಕ ಮಿಶ್ರಿತ ಕಳಪೆ ಮಟ್ಟದ ಭಂಡಾರ ಮಾರಾಟ ಮಾಡಿದರೆ ಕಠಿಣ ಕ್ರಮ :ಗಜಾಕೋಶ

Bharath Vaibhav
ರಾಸಾಯನಿಕ ಮಿಶ್ರಿತ ಕಳಪೆ ಮಟ್ಟದ ಭಂಡಾರ ಮಾರಾಟ ಮಾಡಿದರೆ ಕಠಿಣ ಕ್ರಮ :ಗಜಾಕೋಶ
WhatsApp Group Join Now
Telegram Group Join Now

ಗೋಕಾಕ ಲಕ್ಷ್ಮೀ ದೇವಿ ಜಾತ್ರೆ

ಗೋಕಾಕ:  ಜೂನ 30 ರಿಂದ ಜುಲೈ 8 ವರೆಗೆ ಅದ್ದೂರಿಯಾಗಿ ಜರುಗಲಿರುವ ಗ್ರಾಮದೇವತೆ ಶ್ರೀ ಲಕ್ಷ್ಮೀ ದೇವಿ ಜಾತ್ರೆಯ ಸಂದರ್ಭದಲ್ಲಿ ಭಂಡಾರ ಮಾರಾಟಗಾರರು ಯಾವುದೆ ತರಹದ ರಾಸಾಯನಿಕ ಮಿಶ್ರಿತ ಕಳಪೆ ಗುಣಮಟ್ಟದ ಭಂಡಾರವನ್ನು ಮಾರಾಟ ಮಾಡತಕ್ಕದಲ್ಲ ಎಂದು ಗೋಕಾಕ ನಗರಸಭೆ ಮತ್ತು ನಗರ ಪೋಲಿಸ್ ಠಾಣೆಯವರು ಜಂಟಿಯಾಗಿ ನಗರದಲ್ಲಿ ಭಂಡಾರ ಮಾರಾಟ ಮಾಡುವವರಿಗೆ ತಿಳಿಸಿದರು.

ಇನ್ನು ಉತ್ತಮ ಗುಣಮಟ್ಟದ ಭಂಡಾತ ಮಾರಾಟ ಮಾಡುವವರು ನಗರಸಭೆಯ ಪರವಾಣಿಗೆ ಪಡೆದುಕೊಂಡು ಭಂಡಾರ ಮಾರಾಟ ಮಾಡುವಂತೆ ತಿಳಿಸಿದರು.ಒಂದು ಕಳಪೆ ಮಟ್ಟದ ರಾಸಾಯನಿಕ ಮಿಶ್ರಿತ ಭಂಡಾರ ಮಾರಾಟ ಮಾಡಿದ್ದಲ್ಲಿ ಯಾವುದೆ ಮುಲಾಜಿಲ್ಲದೆ ಅಂಥವರಿಗೆ ದಂಡ ವಿಧಿಸಲಾಗುತ್ತದೆ ಅದರ ಜೊತೆಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಖಡಕ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ನಗರಸಭೆಯ ಸಹಾಯಕ ಕಾರ್ಯಪಾಲಕ ಅಬಿಯಂತರರು (ಪರಿಸರ)ಎಮ್,ಎಚ, ಗಜಾಕೋಶ ನಗರ ಪೋಲಿಸ್ ಠಾಣೆಯ ಪಿಎಸ್ಐ,ಕೆ.ವಾಲಿಕಾರ,ಲಕ್ಷ್ಮಣ ಅಗಸರ, ಹಿರಿಯ ಆರೋಗ್ಯ ನಿರೀಕ್ಷಕ ಜೆ,ಸಿ, ತಾಂಬೋಳಿ,ಸಿಬ್ಬಂದಿಗಳಾದ ರಮೇಶ ಕಳ್ಳಮನಿ,ನಾಗರಾಜ ಬೆಳಗಲಿ ಉಪಸ್ಥಿತರಿದ್ದರು.

ಮನೋಹರ ಮೇಗೇರಿ

WhatsApp Group Join Now
Telegram Group Join Now
Share This Article
error: Content is protected !!