Ad imageAd image

ಎಲ್ಲಿವರೆಗೂ ಹೋರಾಟ,ಗೆಲ್ಲೋವರೆಗೂ ಹೋರಾಟ,ಪೌರ ನೌಕರರ ಮುಷ್ಕರ

Bharath Vaibhav
ಎಲ್ಲಿವರೆಗೂ ಹೋರಾಟ,ಗೆಲ್ಲೋವರೆಗೂ ಹೋರಾಟ,ಪೌರ ನೌಕರರ ಮುಷ್ಕರ
WhatsApp Group Join Now
Telegram Group Join Now

ರಾಮದುರ್ಗ: ಬೆಳಗಾವಿ ಜಿಲ್ಲೆ ರಾಮದುರ್ಗ ಪುರಸಭೆ ಮುಂಭಾಗದಲ್ಲಿ ಕರ್ನಾಟಕ ರಾಜ್ಯ ಪೌರ ನೌಕರರ ಸಂಘ (ರಿ) ಚಿತ್ರದುರ್ಗ,ರಾಮದುರ್ಗ ಶಾಖೆಯ ಪುರಸಭೆ ಪೌರ ನೌಕರರು ಮುಷ್ಕರ.

ರಾಜ್ಯಾದ್ಯಂತ ಕರ್ತವ್ಯಕ್ಕೆ ಪೌರ ನೌಕರರು ಗೈರು, ಕಛೇರಿ ಕೆಲಸ, ಕಸ ಸಂಗ್ರಹಣೆ, ವಿಲೇವಾರಿ, ಸ್ವಚ್ಛತೆ, ಒಳಚರಂಡಿ ನಿರ್ವಹಣೆ ಸ್ಥಗಿತಗೋಳಸಿ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಂಡಿದ್ದಾರೆ.

ಸಂಘದ ಬೇಡಿಕೆಗಳು:  ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆ ನೌಕರರನ್ನು ರಾಜ್ಯ ಸರ್ಕಾರಿರೆಂದು ಪರಿಗಣಿಸಿ ಜ್ಯೋತಿ ಸಂಜೀವಿನಿ ಕೆ.ಜಿ.ಐ.ಡಿ ಸೇರಿದಂತೆ ಸರ್ಕಾರಿ ನೌಕರ ಪಡೆಯುವ ಎಲ್ಲಾ ಸೌಲಭ್ಯಗಳನ್ನು ನೀಡಬೇಕು.

ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ನೀರು ಸರಬರಾಜು ಚಾಲಕರು ಲೋರ್ಡಸ್ ಕ್ಲೀನರ್ಸ ಗಾರ್ಡಿನರ್ ಸ್ಯಾನಿಟರಿ ಸುಪವೈಜರ್ ಕಂಪ್ಯೂಟರ ಆಪರೆಟರ್ ಯುಜಿಡಿ ಸಹಾಯಕರು ಸೇರಿದಂತೆ ವಿವಿಧ ವೃಂದದ ಹೋರಗುತ್ತಿಗೆ ಕಾರ್ಮಿಕರನ್ನು ನೇರ ನಗರ ಸ್ಥಳೀಯ ಸಂಸ್ಥೆಗಳಿಂದ ನೇರ ಪಾವತಿಗೆ ವಳಪಡಿಸುವುದು.

ದಿನಗೂಲಿ ಕ್ಷೇಮಾಭಿವೃಧಿ ಸಮಾನ ಕೆಲಸಕ್ಕೆ ಸಮಾನ ವೇತನ ನೌಕರರನ್ನು ಖಾಯಂ ಮಾಡುವುದು.

ವಿಶೇಷ ನೇಮಕಾತಿ ಅಡಿ ಖಾಯಂಗೊಂಡ ನೌಕರರಿಗೆ ಎಸ್.ಎಫ್.ಸಿ. ವೇತನ ಅನುಧಾನದಿಂದ ವೇತನ ನೀಡುವುದು.

ಮುಂದಿನ ದಿನಗಳಲ್ಲಿ ನೀರು ಪೂರೈಕೆ ಸ್ಥಗಿತ,ದಿನಾಂಕ: 27-05-2025 ಮಂಗಳವಾರ ದಿಂದ ಎಲ್ಲಿವರೆಗೂ ಹೋರಾಟ ಗೆಲ್ಲೋವರೆಗೂ ಹೋರಾಟ,ಸಾರ್ವಜನಿಕರು ಸಹಕರಿಸಲು ಹಾಗೂ ಹೋರಾಟಕ್ಕೆ ಬೆಂಬಲ ನೀಡಲು ವಿನಂತ್ತಿಸಿದ್ದಾರೆ.

ವರದಿ: ಮಂಜುನಾಥ ಕಲಾದಗಿ

WhatsApp Group Join Now
Telegram Group Join Now
Share This Article
error: Content is protected !!