ಚಿಕ್ಕೋಡಿ : ಪುರಸಭೆ ಕಾರ್ಮಿಕರ ಮೂರು ದಿನಗಳ ನಿರಂತರ ಮುಷ್ಕರ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಒತ್ತಡ.
ಬೇಡಿಕೆಗಳು ಕರ್ನಾಟಕ ನಾಗರೀಕ ಸೇವಾ ನಿಯಮದ ಅಧಿನಿಯಮ 1978 ರನ್ನು ಕರ್ನಾಟಕ ಪೌರ ಸೇವಾ ನೌಕರರಿಗೆ ಅನ್ವಯಿಸುವುದು ಹಾಗೂ ಪಂಚಾಯತ್ ರಾಜ್ ಇಲಾಖೆ ನೌಕರರನ್ನು ರಾಜ್ಯ ಸರ್ಕಾರಿ ನೌಕರರೆಂದು ಪರಿಗಣಿಸುವುದು ಮಾದರಿಯಲ್ಲಿ ರಾಜ್ಯದ ನಗರ ಸ್ಥಳೀಯ ಸಂಸ್ಥೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ ಜಿ.ಪಿ.ಎಫ್. ಕೆ.ಜಿ.ಐ.ಡಿ. ಜ್ಯೋತಿ ಸಂಜೀವಿನಿ ಸೇರಿದಂತೆ ಸರ್ಕಾರಿ ನೌಕರರು ಪಡೆಯುವ ಎಲ್ಲಾ ಸೌಲಭ್ಯಗಳನ್ನು ವಿಸ್ತರಿಸುವ ಬಗ್ಗೆ ಶಾಸನ ಸಭೆಯಲ್ಲಿ ಕಾಯ್ದು ಮತ್ತು ನಿಯಮಗಳಿಗೆ ತಿದ್ದುಪಡಿ ಮಾಡಿ ಯಥಾ ಒತ್ತಾಗಿ ಪೌರ ಸೇವಾ ನೌಕರರಿಗೆ ಜಾರಿ ಮಾಡುವ ಬಗ್ಗೆ.
ಹೊರ ಗುತ್ತಿಗೆದಾರರ ಆಧಾರದ ಮೇಲೆ ನೀರು ಸರಬರಾಜು ಸಹಾಯಕರು ವಾಹನ ಚಾಲಕರು ಬೀದಿ ದೀಪ ಸಹಾಯಕರು ಲೋಡರ್ ಪಾರ್ಕ್ಗಾಗಾರ್ಡ ಕಾವಲುಗಾರ ಶಾನಿಟರಿ ಸೂಪರ ರ್ವೈಸರ್ ಸೇರಿದಂತೆ ವಿವಿಧ ವೃಂದಗಳಲ್ಲಿ ಹೊರಗುತ್ತಿಗೆ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರನ್ನು ನೇರಪಾತಿಗೆ ಒಳಪಡಿಸುವುದು
ದಿನಗುಲಿ ಕ್ಷೇಮಾಭಿವೃದ್ಧಿ ಸಮಾನ ಕೆಲಸಕ್ಕೆ ಸಮಾನ ವೇತನ ಟೈಮ್ ಸ್ಕೆಲ್ ನೌಕರರನ್ನು ಖಾಲಿ ಇರುವ ಹುದ್ದೆಗಳಿಗೆ ಸಕ್ರಮತಿ ವಿಲೀನ ಮಾಡುವುದು.
7ನೇ ವೇತನ ಹಾಗೂ 2023/ 24ನೇ ಸಾಲಿನ ನೇಮಕಾತಿಗೊಂಡ ಪೌರ ಕಾರ್ಮಿಕರು ಲೋಡರ್ ಕ್ಲೀನರ್ ವೇತನವನ್ನು ಎಸ್. ಎಫ್. ಸಿ. ವೇತನ ಅನುದಾನದ ಅಡಿಯಲ್ಲಿ ವೇತನ ನೀಡುವುದು.
ನೇಮಕಾತಿಯ ಅಡಿ ಲ್ಯಾಬ್ ಟೆಕ್ಸಿಷಿಯನ್ ಪಲoಬರ್ ಈ ಹುದ್ದೆಗಳಿಗೆ ಅವಕಾಶ ಕಲ್ಪಿಸಿದ್ದು ಈ ಹುದ್ದೆಗಳು ನಗರ ಸ್ಥಳೀಯ ಸಂಸ್ಥೆಗಳ ಕುಡಿಯುವ ನೀರಿನ ಗುಣಮಟ್ಟ ನಿರ್ವಹಣೆಗೆ ಅತ್ಯಂತ ಅವಶ್ಯಕವಾಗಿದ್ದು ಈ ಹುದ್ದೆಗಳಿಗೆ ಇದುವರೆಗೂ ನೇಮಕಾತಿ ಮಾಡದೆ ಇರುವುದರಿಂದ ನೀರಿನ ಗುಣಮಟ್ಟ ನಿರ್ವಹಣೆಯಲ್ಲಿ ಅನೇಕ ತೊಡಕು ಉಂಟಾಗುತ್ತಿದ್ದು ಈ ಹುದ್ದೆಗಳನ್ನು ನೇರ ನೇಮಕಾತಿ ಮಾಡಿ ಕೊಡಲು ಹೊರಗುತ್ತಿಗೆ ಮೇಲೆ ತೆಗೆದುಕೊಳ್ಳಲು ಅನುಮತಿ ನೀಡಬೇಕಾಗುತ್ತದೆ..
ಇಂತಹ ಹಲವಾರು ಬೇಡಿಕೆಗಳನ್ನು ಇಟ್ಟುಕೊಂಡು ಇಡೀ ಕರ್ನಾಟಕ ರಾಜ್ಯಾದ್ಯಂತ ಪೌರಕಾರ್ಮಿಕರ ಮುಷ್ಕರ ನಡೆಯುತ್ತಿದೆ ಈ ಬೇಡಿಕೆಗಳನ್ನು ಈಡೇರಿಸದಿದ್ದರೆ ಈ ಮುಷ್ಕರ ಸತತವಾಗಿ ಮುಂದುವರೆಯುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪೌರಕಾರ್ಮಿಕರ ಮುಖ್ಯಸ್ಥರು ನಮ್ಮ ವೈನಿಗೆ ಮಾಹಿತಿ ನೀಡಿದ್ದಾರೆ ಬನ್ನಿ ಕೇಳೋಣ.
ನಮಸ್ಕಾರ ಸಂದರ್ಭದಲ್ಲಿ ಸೋಮಯ್ಯ ಹಿರೇಮಠ ಸದಸ್ಯರು, ದುಂಡಪ್ಪ ರಂಗಣ್ಣವರ್ ಜಿಲ್ಲಾ ಅಧ್ಯಕ್ಷರು, ಅಶ್ವಿನಿ ಕಾಳೆ ಸದಸ್ಯರು, ಅಶೋಕ್ ಬಾರುದೆ, ಪಿ ಬಿ ಕರ್ನಿಂಗ್, ಆನಂದ್ ಕಟ್ಟಿ, ಶ್ರೀನಿವಾಸ್ ಮರಿಯನ್, ಲಕ್ಷ್ಮಿ ಕದಮ್, ರೀತಾ ಜೋಗುಳೆ, ಭಾರತಿ ಗುಂಡೆ, ಮಾರುತಿ ಕೌಲಗೆ, ಸಚಿನ್ ಸೇರ್ಖಾನೆ ಜಗದೀಶ್ ಪಾಟೀಲ್ ರವಿಕಿರಣ್ ಬೆಳ್ಳೂರ್ಗಿ, ಹಾಗೂ ಎಲ್ಲ ಚಿಕ್ಕೋಡಿ ಪೌರಕಾರ್ಮಿಕರ ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು.
ವರದಿ : ರಾಜು ಮುಂಡೆ




