Ad imageAd image

ಬೂದಿಹಾಳ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ

Bharath Vaibhav
ಬೂದಿಹಾಳ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ
WhatsApp Group Join Now
Telegram Group Join Now

ಉತ್ತಮ ಸಮಾಜದಲ್ಲಿ ವಿದ್ಯಾರ್ಥಿಗಳ ಪಾತ್ರ ಮುಖ್ಯ, ಅದರಿಂದ ದುಶ್ಚಟಗಳಿಂದ ದೂರವಿರಲು ಕರೆ : ವಿಠ್ಠಲ್ ಪಿಸೆ

ಬೈಲಹೊಂಗಲ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ (ರಿ ). ಬೈಲಹೊಂಗಲ ಇವರ ವತಿಯಿಂದ ಬೂದಿಹಾಳ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಎಲ್ಲಾ ವಿದ್ಯಾರ್ಥಿಗಳು ಹದಿಹರೆಯದಲ್ಲಿ ಬಂದಾಗ ತಮಗೆ ಅರಿವಿದ್ದರೂ ಕೂಡ ಕೆಲವೊಂದು ದುಶ್ಚಟಗಳಿಗೆ ದಾಸರಾಗುತ್ತಾರೆ. ಇದರಿಂದ ಅವರ ಜೀವನ ಹಾಳು ಮಾಡಿಕೊಳ್ಳುತ್ತಾರೆ. ಅದರಿಂದ ಸಮಾಜದ ಮತ್ತು ಕುಟುಂಬದ ಗೌರವಕ್ಕೆ ದಕ್ಕೆ ಆಗುತ್ತೆ. ಅದರಿಂದ ಶಿಕ್ಷಕರ ಮಾರ್ಗದರ್ಶನದಲ್ಲಿ ಈ ಸಮಾಜಕ್ಕೆ ಅಮೂಲ್ಯ ರತ್ನಗಳಾಗಿ, ದುಶ್ಚಟಗಳಿಂದ ದೂರವಿರಿ,ಅರೋಗ್ಯವಂತರಾಗಿ ಜೀವನ ನಡೆಸಿ ಎಂದು ಕಾರ್ಯಕ್ರಮ ಉದ್ದೇಶಿಸಿ ಸಂಪನ್ಮೂಲ ವ್ಯಕ್ತಿಯಾದ ಶ್ರೀ ವಿಠ್ಠಲ್ ಪಿಸೆ ಯವರು ತಿಳಿಸಿದರು.ಯೋಜನೆಯು ಗ್ರಾಮೀಣ ಮಟ್ಟದಲ್ಲಿ ಇರುವ ತಳಮಟ್ಟಕ್ಕೆ ಮೊದಲು ಜಾಗೃತಿ ಮೂಡಿಸಿದರೆ ಮಾತ್ರ ಮಾತ್ರ ಮುಂದಿನ ಎಲ್ಲಾ ಜನರು ಜಾಗುರುಕಾರಾಗಿ ಮಾಡಬಹುದು ಎಂದು ಶಾಲೆಗಳಿಗೆ ಇಂತ ಜಾಗೃತಿ ಕಾರ್ಯಕ್ರಮ ನೀಡುತ್ತಾ ಬಂದಿದೆ. ಹಾಗೂ ಯೋಜನೆಯು ಶಿಕ್ಷಣಕ್ಕೆ ಸಂಬಂಧಿಸಿದಂತೆ ಸುಜ್ಞಾನ ನಿಧಿ, ಬೆಂಚು, ತಡೆಗೋಡೆ, ಕುಡಿಯುವ ನೀರಿನ ಸೌಲಭ್ಯ, ಜ್ಞಾನ ದೀಪ ಅಡಿಯಲ್ಲಿ ಕೊರತೆ ಇರುವ ಶಾಲೆಗಳಿಗೆ ಶಿಕ್ಷಕರ ನೀಡುತ್ತದೆ. ಹಾಗೂ ಇನ್ನು ಮುಂತಾದ ಕಾರ್ಯಕ್ರಮ ಗಳಿಂದ ಗ್ರಾಮಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಎಂದು ಬೆಳವಡಿ ವಲಯ ಮೇಲ್ವಿಚಾರಕರಾದ ಸಂತೋಷ ಕೆ.ಟಿ ತಿಳಿಸಿದರು.

ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ ಶಾಲೆಯ ಮುಖ್ಯೋಪಾಧ್ಯರು ಆದ ಎನ್ ಅರ್ ಠಕ್ಕಯಿ ಇವರು ವಿದ್ಯಾರ್ಥಿ ಗಳಿಗೆ ಶಾಲೆಯ ಎಲ್ಲಾ ಮಕ್ಕಳು ತಮ್ಮ ಅರೋಗ್ಯ ಕಾಪಾಡಿಕೊಂಡು ಜೊತೆ ಹದಿಹರೆಯ ವಯಸ್ಸಿನಲ್ಲಿ ದುಶ್ಚಟಗಳಿಂದ ದೂರವಿರಲು ತಿಳಿಸಿದರು. ಕೊನೆಯಲ್ಲಿ ಎಲ್ಲರಿಗೂ ಪ್ರತಿಘ್ನ ವಿಧಿ ಮಾಡುವ ಮೂಲಕ ಸ್ವಾಸ್ತ್ಯ ಸಮಾಜ ಕಟ್ಟಲು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲಾ ಶಿಕ್ಷಕರು, ಮುದ್ದು ವಿದ್ಯಾರ್ಥಿಗಳು, ಯೋಜನೆಯ ಸೇವಾಪ್ರತಿನಿಧಿ ಗಂಗಮ್ಮ ಕುಲಕರ್ಣಿ,ಉಪಸ್ಥಿತರಿದ್ದರು.

ವರದಿ: ದುಂಡಪ್ಪ ಹೂಲಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!