Ad imageAd image

ರೈಲು ನಿಲ್ದಾಣ ಅಭಿವೃದ್ಧಿಗಾಗಿ ಹೋರಾಟ ಸತ್ಯಾಗ್ರಹ

Bharath Vaibhav
ರೈಲು ನಿಲ್ದಾಣ ಅಭಿವೃದ್ಧಿಗಾಗಿ ಹೋರಾಟ ಸತ್ಯಾಗ್ರಹ
WhatsApp Group Join Now
Telegram Group Join Now

ರಾಯಬಾಗ: ತಾಲೂಕಿನ ಕುಡಚಿಯಲ್ಲಿ ಕುಡಚಿ ಹಾಗೂ ಬಾಗಲಕೋಟೆ ರೈಲು ಮಾರ್ಗದ ಕಾಮಗಾರಿ ಕುಡಚಿಯಿಂದ ಪ್ರಾರಂಭಿಸುವಂತೆ ಹಾಗೂ ವಿವಿಧ ಮೂಲಭೂತ ಸೌಲಭ್ಯ ಬೇಡಿಕೆಗಳನ್ನು ಈಡೇರಿಸುವಂತೆ ಧರಣಿ ಸತ್ಯಾಗ್ರಹ ಮಾಡಲಾಯಿತು.

ಹಲವು ವರ್ಷಗಳಿಂದ ಕುಡಚಿ ಬಾಗಲಕೋಟೆ ರೈಲು ಮಾರ್ಗ ಕಾಮಗಾರಿಯನ್ನು ಪ್ರಾರಂಭಿಸಬೇಕು.
ಲೋಕಾಪುರದಿಂದ ಧಾರವಾಡಕ್ಕೆ ಮಾರ್ಗ ವಿಸ್ತರಣೆ ಮಾಡಬೇಕು.ಕುಡಚಿ ರೈಲು ನಿಲ್ದಾನವನ್ನು ಅಮೃತ ಭಾರತ ಯೋಜನೆ ಅಡಿಯಲ್ಲಿ ಅಭಿವೃದ್ಧಿಪಡಿಸಬೇಕು.

ಹಾಗೂ ಸೂಕ್ತವಾದ ಪಾರ್ಕಿಂಗ್ ಸ್ಥಳ ಸೂಕ್ತವಾದ ವೇಳಾಪಟ್ಟಿ. ಡಿಜಿಟಲ ಡಿಸ್ಪ್ಲೇ ,ಅಳವಡಿಸುವುದು ಹಾಗೂ ರೈಲು ನಿಲ್ದಾಣದ ನಾಮಫಲಕ.ಹಾಗೂ ಬೆಂಗಳೂರು-ಅಜ್ಮೀರ್, ಬೆಂಗಳೂರು- ಮೈಸೂರ್ ,ಕುಡಚಿ ಮಾರ್ಗವಾಗಿ ದೆಹಲಿಗೆ ತೆರಳುವ ಎಲ್ಲ ವೇಗದುತ ರೈಲುಗಳು ನಿಲುಗಡೆ ಮಾಡಬೇಕು.

ಮತ್ತು ಕುಡಚಿ ಪಟ್ಟಣದ ಗ್ರಾಮ ದೇವತೆಯಾದ ಹಜರತ ಮಾಸಾಹೇಬಾ ದೇವಿಯ ಭಾವಚಿತ್ರ ಅಳವಡಿಸಲು ಅವಕಾಶ ಕಲ್ಪಿಸಬೇಕು.ಎಂಬ ಹಲವು ಬೇಡಿಕೆಗಳನ್ನು ಕೂಡಲೆ ಕೈಗೆತ್ತಿಕೊಂಡು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು.

ಪರಮಪೂಜ್ಯ ಡಾಕ್ಟರ್ ಶಿವಲಿಂಗೇಶ್ವರ ಮಹಾಸ್ವಾಮಿಗಳು, ನಿಡಸೋಶಿ. ಕರ್ನಾಟಕ ರಾಜ್ಯ ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿ  ಕುತುಬುದ್ದೀನ ಕಾಜಿ.ಕರ್ನಾಟಕ ರಾಜ್ಯ ಕಬ್ಬು ನಿಯಂತ್ರಣ ಮಂಡಳಿ ಕರ್ನಾಟಕ ಸರ್ಕಾರ ಸದಸ್ಯರು ಸುಭಾಸ ಶಿರಬೂರ.ಹಾಗು ಕರ್ನಾಟಕ ರಕ್ಷಣಾ ವೇದಿಕೆ ಅಮೀನವಾಟೆ.ಮಹೇಶ್ ಜಾದವ ಹಾಗೂ ಕುಡಚಿ ಪಟ್ಟಣದ ಸಾರ್ವಜನಿಕರು ಗಣ್ಯಮಾನ್ಯರು ಸೇರಿ ರೈಲ್ವೆ ನಿಲ್ದಾಣದ ಮುಖ್ಯ ಇಂಜಿನಿಯರ ಸಿಬ್ಬಂದಿಗೇ ಮನವಿ ಸಲ್ಲಿಸಿದರು.
ವರದಿ : ಭರತ ಮೂರಗುಂಡೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!