Ad imageAd image

ಜೈ ಶ್ರೀರಾಮ್ ಹಾಡು ಹಾಕಿದ್ದಕ್ಕೆ ಪರಸ್ಪರ ಹೊಡೆದಾಡಿಕೊಂಡ ವಿದ್ಯಾರ್ಥಿಗಳು

Bharath Vaibhav
ಜೈ ಶ್ರೀರಾಮ್ ಹಾಡು ಹಾಕಿದ್ದಕ್ಕೆ ಪರಸ್ಪರ ಹೊಡೆದಾಡಿಕೊಂಡ ವಿದ್ಯಾರ್ಥಿಗಳು
CRIME
WhatsApp Group Join Now
Telegram Group Join Now

ಬೀದರ್ : ಕಾಲೇಜು ಕಾರ್ಯಕ್ರಮ ಒಂದರಲ್ಲಿ ಜೈ ಶ್ರೀರಾಮ್ ಹಾಡು ಹಾಕಿದ್ದಕ್ಕೆ ಹಿಂದೂ ಹಾಗೂ ಮುಸ್ಲಿಂ ವಿದ್ಯಾರ್ಥಿಗಳು ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ಬೀದರ್ ನ ಮೈಲೂರು ಕ್ರಾಸ್ ಬಳಿ ಇರುವ ಜಿಎನ್ಡಿ ಡಿಗ್ರಿ ಕಾಲೇಜಿನಲ್ಲಿ ನಡೆದಿದೆ.

ಹೌದು ಬೀದರ್ ನ ಜಿ ಏನ್ ಡಿ ಕಾಲೇಜಿನಲ್ಲಿ ಇಂದು ಕಾಲೇಜು ಕಾರ್ಯಕ್ರಮ ನಡೆಯುತ್ತಿತ್ತು.ಈ ವೇಳೆ ಜೈ ಶ್ರೀ ರಾಮ್ ಹಾಡು ಹಾಕಿದ್ದಕ್ಕೆ ಗಲಾಟೆ ಆರಂಭವಾಗಿದೆ. ಈ ವೇಳೆ ಹಿಂದೂ ಹಾಗೂ ಮುಸ್ಲಿಂ ವಿದ್ಯಾರ್ಥಿಗಳು ಪರಸ್ಪರ ಕಾಲೇಜು ಸಭಾಂಗಣದಲ್ಲೇ ಹೊಡೆದಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಬೀದರ್ ನ ಮೈಲೂರು ಕ್ರಾಸ್ ನಲ್ಲಿರುವ ಗುರುನಾನಕ್ ಕಾಲೇಜಿನಲ್ಲಿ ಈ ಘಟನೆ ನಡೆದಿದೆ.ಘಟನೆಯು ಗಾಂಧಿ ಗಂಜಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾಗುತ್ತಿದೆ. ಘಟನಾ ಸ್ಥಳಕ್ಕೆ ಸಚಿವ ಈಶ್ವರ ಖಂಡ್ರೆ ಹಾಗೂ ರಹೀಮ್ ಖಾನ್ ಭೇಟಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

 

 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!