ವಿಜಯಪುರ : ಪ್ರಾಥಮಿಕ ಹಾಗೂ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಹಾಗೂ ಸರ್ವ ಶಿಕ್ಷಕರು ಪ್ರತಿ ಸೋಮವಾರ ಬೆಳಗಿನ ಪ್ರಾರ್ಥನೆಯ ನಂತರ ಎಲ್ಲಾ ವಿದ್ಯಾರ್ಥಿಗಳಿಗೆ ಅನೀಮಿಯ ರಕ್ತಹೀನತೆ ಕುರಿತಾಗಿ ಜಾಗ್ರತಿ ನೀಡಬೇಕು ಎಂದು ಕ್ಷೇತ್ರ ಶಿಕ್ಷಣ ಅಧಿಕಾರಿ ಮಾಂತೇಶ ಯಡ್ರಾಮಿ ಹೇಳಿದರು.
ಸಿಂದಗಿ ತಾಲೂಕಿನ ವಿದ್ಯಾರ್ಥಿಗಳಿಗೆ
ಅನೀಮಿಯ ರಕ್ತಹೀನತೆ ಕುರಿತಾಗಿ
ಓರ್ವ ಶಿಕ್ಷಕರು ಕನಿಷ್ಠ ಐದು ನಿಮಿಷಗಳವರೆಗೆ ಮಾಹಿತಿ ಹಂಚಿಕೊಂಡು ಜಾಗೃತಿ ಮೂಡಿಸಲು ಸಂದೇಶ ನೀಡಿರುವ ಅವರು ಮಾತನಾಡಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಊಟದ ಒಂದು ಗಂಟೆ ನಂತರ ಐರನ್ ಮತ್ತು ಪೋಲಿಕ್ ಆಸಿಡ್ ಮಾತ್ರೆಗಳನ್ನು ಕಡ್ಡಾಯವಾಗಿ ಮಕ್ಕಳಿಗೆ ನೀಡುವುದರ ಮೂಲಕ ಅನೀಮಿಯ ನಿರ್ಮೂಲನೆಯ ಬಗ್ಗೆ ಎಲ್ಲರೂ ಕೆಲಸ ಮಾಡಲು ಸೂಚಿಸಿದರು.
ತಮ್ಮ ಶಾಲೆ ಎಲ್ಲ ಮುಖ್ಯೋಪಾಧ್ಯಾಯರು ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರದ, ಆರೋಗ್ಯ ಅಧಿಕಾರಿಗಳನ್ನು ಸಂಪರ್ಕಿಸಿ ಅವರ ಮಾರ್ಗದರ್ಶನದಂತೆ ಎಲ್ಲಾ ಮಕ್ಕಳಿಗೆ ಐರನ್ ಮತ್ತು ಪೋಲಿಕ್ ಆಸಿಡ್ ಮಾತ್ರೆಗಳನ್ನು ನೀಡಬೇಕು . ಮಾತ್ರೆಗಳಿಗಾಗಿ ಸಮೀಪದ ಆರೋಗ್ಯ ಅಧಿಕಾರಿಗಳನ್ನು ಸಂಪರ್ಕಿ ಮಾಡಿ ಅವರ ಮಾರ್ಗದರ್ಶನದಲ್ಲಿ ಸೋಮವಾರದಿಂದ ಕಡ್ಡಾಯವಾಗಿ ಈ ಕಾರ್ಯಕ್ರಮ ನಡೆಯುವಂತೆ ನೋಡಿಕೊಳ್ಳುವುದು. 16ನೇ ಡಿಸೆಂಬರ್ 2024ರ ಸೋಮವಾರದಂದು ಮಕ್ಕಳಿಗೆ ಅನಿಮಿಯ ವಿರುದ್ಧ ಜಾಗೃತಿ ಮೂಡಿಸಿದ ಬಗ್ಗೆ, ಐರನ್ ಮತ್ತು ಪೋಲಿಕ್ ಆಸಿಡ್ ಮಾತ್ರೆ ನೀಡಿದ ಬಗ್ಗೆ ತಲಾ ಒಂದೊಂದು ಭಾವಚಿತ್ರವನ್ನು ಮಧ್ಯಾಹ್ನ ಬಿಸಿ ಊಟದ ಗುಂಪಿಗೆ ಹಂಚಿಕೊಳ್ಳುವುದು. ಮುಖ್ಯ ಗುರುಗಳು ಈ ಕಾರ್ಯದಲ್ಲಿ ಯಾವುದೇ ಅಲಕ್ಷತನ ತೋರಬಾರದೆಂದು ಎಂದು ತಿಳಿಸಿದರು.
ವರದಿ. ಸಾಯಬಣ್ಣ ಮಾದರ