Ad imageAd image

ಕೆಸ್ತೂರಿನಲ್ಲಿ ಎತ್ತಿನಗಾಡಿ ಮೇಲೇರಿ ಶಾಲೆ ಪ್ರವೇಶಿಸಿದ ವಿದ್ಯಾರ್ಥಿಗಳು.

Bharath Vaibhav
ಕೆಸ್ತೂರಿನಲ್ಲಿ ಎತ್ತಿನಗಾಡಿ ಮೇಲೇರಿ ಶಾಲೆ ಪ್ರವೇಶಿಸಿದ ವಿದ್ಯಾರ್ಥಿಗಳು.
WhatsApp Group Join Now
Telegram Group Join Now

ಯಳಂದೂರು: ತಾಲ್ಲೂಕಿನ ಕೆಸ್ತೂರು ಹೊನ್ನೂರು, ಮದ್ದೂರು, ಮಾಂಬಳ್ಳಿ, ಯರಿಯೂರು, ಯರಗಂಬಳ್ಳಿ, ಹಾಗೂ ಇತರೆ ಗ್ರಾಮಗಳಲ್ಲಿ ಶುಕ್ರವಾರ ಶಾಲಾ ಆರಂಭೋತ್ಸವವು ಅರ್ಥಪೂರ್ಣವಾಗಿ,ಅದ್ದೂರಿಯಾಗಿ ನಡೆಯಿತು.

ಕೆಸ್ತೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ 2 ರಲ್ಲಿ ಶಾಲಾ ಆರಂಭೋತ್ಸವು ವಿಶೇಷವಾಗಿ ನಡೆಯಿತು.


ಶಾಲೆಯ ವಿದ್ಯಾರ್ಥಿಗಳು ಎತ್ತಿನಗಾಡಿ ಮೇಲೇರಿ ಶಾಲೆ ಪ್ರವೇಶಿಸಿದರೆ ಇನ್ನುಳಿದ ಶಾಲೆಗಳಲ್ಲಿ ಮಂಗಳವಾದ್ಯ, ತಮಟೆ ಬ್ಯಾಂಡ್ ಸೆಟ್ ನಾದಮೂಲಕ ವಿದ್ಯಾರ್ಥಿಗಳು ಕಳಸ ಹೊತ್ತು ಮೆರವಣಿಗೆಯ ಮೂಲಕ ಪ್ರವೇಶಿಸಿದರು.

ವಿದ್ಯಾರ್ಥಿಗಳು ವಿವಿಧ ಬಣ್ಣದ ವಸ್ತ್ರಗಳನ್ನು ಧರಿಸಿ ಸಂಭ್ರಮ ಸಡಗರದಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಯ ಮೂಲಕ ಶಾಲೆಗೆ ತೆರಳಿದರು.

ಶಿಕ್ಷಕರು ಕೂಡ ದೇವರಿಗೆ ಪೂಜೆ ಸಲ್ಲಿಸಿ ಮಕ್ಕಳೊಂದಿಗೆ ಹೆಜ್ಜೆಯನ್ನು ಇಟ್ಟರು. ಶಾಲೆಯಗಳು ಮಾವಿನ ತೋರಣ, ಬಣ್ಣ ಬಣ್ಣ ಕಾಗದಗಳ ಅಲಂಕಾರಗಳಿಂದ ಶೃಂಗಾರಗೊಂಡಿತು. ಶಾಲಾ ಮುಂಭಾಗ ವಿದ್ಯಾರ್ಥಿಗಳು ಮತ್ತು ಶಿಕ್ಷಕಿಯರು ರಂಗೋಲಿಯನ್ನು ಬಿಡಿಸಿ ಹಬ್ಬದ ವಾತಾವರಣ ನಿರ್ಮಾಣ ಮಾಡಿದರು.
ಎಸ್ ಡಿ ಎಂ ಸಿ ಅಧ್ಯಕ್ಷ ಚಿನ್ನಸ್ವಾಮಿ ಮುಖ್ಯೋಪಾಧ್ಯಾಯ ಸಿದ್ದರಾಜು , ಶಿಕ್ಷಕರ ವೃಂದ ಮಕ್ಕಳಿಗೆ ಗುಲಾಬಿ ಹೂಗಳು ಹಾಗೂ ಸಿಹಿಯನ್ನು ನೀಡಿ ಬರಮಾಡಿಕೊಂಡರು.

ಮುಖ್ಯೋಪಾಧ್ಯಾಯ ಸಿದ್ದರಾಜು ಮಾತನಾಡಿ ನಮ್ಮ ಸರಕಾರಿ ಶಾಲೆಗಳು ಉಳಿಯಬೇಕಾದರೆ ಪೋಷಕರು ಕಡ್ಡಾಯವಾಗಿ ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸಬೇಕು ಇಂತಹ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತದೆ ಸರಕಾರ ಅನೇಕ ಸವಲತ್ತುಗಳಾದ ಅಕ್ಷರದಾಸೋಹ, ಕ್ಷೀರಭಾಗ್ಯ, ಶೂ ಭಾಗ್ಯ, ಇನ್ನೂ ಅನೇಕ ಯೋಜನೆಗಳನ್ನು ವಿದ್ಯಾರ್ಥಿಗಳಿಗೋಸ್ಕರ ಜಾರಿಗೆ ತಂದಿದ್ದಾರೆ.

ಉತ್ತಮ ಆಟದ ಮೈದಾನವಿದೆ, ಕಂಪ್ಯೂಟರ್ ಲ್ಯಾಬ್, ಸ್ಮಾರ್ಟ್ ತರಗತಿ ನಡೆಯುತ್ತದೆ ಹಾಗೂ ಉಚಿತ ಪಠ್ಯ ಪುಸ್ತಕ, ಉಚಿತ ಸಮವಸ್ತಗಳನ್ನು ನೀಡಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಉಪಾಧ್ಯಕ್ಷೆ ಸಂಗೀತಾ, ಶಿಕ್ಷಕರಾದ ನಂಜಯ್ಯ, ರಾಜೇಶ್ ಮಾಲಾವತಿ, ಜಯಶ್ರೀ ಎಸ್ ಡಿ ಎಂ ಸಿ ಸದಸ್ಯರಾದ ರಾಜ್ ,ಕಾವ್ಯ, ಹಾಜರಿದ್ದರು.

ವರದಿ : ಸ್ವಾಮಿ ಬಳೇಪೇಟೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!