ಕುರುಗೋಡು :ಮತದಾನ ಒಂದು ಪವಿತ್ರವಾದ ಕಾರ್ಯ, ಮತ ಹಾಕುವ ಮೂಲಕ ನಮ್ಮ ಹಕ್ಕು ಚಲಾಯಿಸಿ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಬೇಕು ಚುನಾವಣೆ ಮಹಾತ್ವವನ್ನು ವಿದ್ಯಾರ್ಥಿಗಳು ತಿಳಿಯಬೇಕು ಅಂಗವಾಗಿ ಶಾಲಾ ದಿನಗಳಲ್ಲಿ ಚುನಾವಣೆಯ ಪ್ರಕ್ರಿಯೆ ತಿಳಿಸುವದರ ಮೂಲಕ ಅರಿವು ಮೂಡಿಸಬೇಕು ಎಂದು ಶಾಲೆಯ ವ್ಯವಸ್ಥಾಪಕರಾದ ಬಿ ಸಿದ್ದಯ್ಯ ಹೇಳಿದರು.
ಇಲ್ಲಿಗೆ ಸಮೀಪದ ಕಲ್ಲುಕಂಬ ಗ್ರಾಮದ ಮೇಘನಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಶಾಲಾ ಸಂಸತ್ ಚುನಾವಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಶಾಲೆಯ ಐದರಿಂದ ಎಂಟನೇ ತರಗತಿಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸಾಲುಗಟ್ಟಿ ನಿಂತು, ಆಧಾರ್ ಕಾರ್ಡ್ ತೋರಿಸಿ, ಸಹಿ ಮಾಡಿ, ಬ್ಯಾಲೆಟ್ ಪೇಪರ್ ಪಡೆದು ಮತದಾನ ಮಾಡುವ ಮೂಲಕ ನಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿದರು.

ಪೊಲೀಂಗ್ ಅಧಿಕಾರಿಯಾಗಿ ಶಾಲೆಯ ಶಿಕ್ಷಕರಾದ ಸಿದ್ದಯ್ಯ ಎಚ್ ಎಂ ಶಾರದಾ ಮಂಜುಳಾ ಚುನಾವಣೆ ಪ್ರಕ್ರಿಯೆಯಲ್ಲಿ ಸಹ ಶಿಕ್ಷಕರಾದ ನೇತ್ರ, ಚೆನ್ನಮ್ಮ ಜ್ಯೋತಿ ಸಲ್ಮಾ ಬೇಗ ಶ್ರೇಯ ನಾಗರತ್ನ ಮಲ್ಲಿಕಾರ್ಜುನ ಸ್ವಾಮಿ ಬಸವರಾಜ್ ಹಾಗೂ ದೇವೇಂದ್ರ ಕಾರ್ಯನಿರ್ವಹಿಸಿದರು. ಮತ ಎಣಿಕೆ ನಂತರ ಫಲಿತಾಂಶ ಪ್ರಕಟ ಮಾಡಲಾಯಿತು.




