ಯಳಂದೂರು:ಸಮೀಪದ ಗೂಳಿಪುರ ಗ್ರಾಮದಲ್ಲಿ ಸುಬ್ಬಣ್ಣ ಎಂಬುವರಿಗೆ ಸೇರಿದ ಹುಲ್ಲಿನ ಮೇಲೆ ಶುಕ್ರವಾರ ಮುಂಜಾನೆ ಆಕಸ್ಮಿಕ ಬೆಂಕಿಗೆ ಆಹುತಿಯಾಗಿದೆ.
ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಂಭಾಗ ಇರುವ ಸುಬ್ಬಣ್ಣ ರವರ ಮನೆಯ ಹಿಂಭಾಗ ಬೆಳೆಬಾಳುವ ಹುಲ್ಲನ್ನು ಹಾಕಿದ್ದರು. ಇಂದು ಮುಂಜಾನೆ ಹುಲ್ಲಿಗೆ ಬೆಂಕಿ ಹೊತ್ತಿಕೊಂಡಿದ್ದನ್ನು ಗಮನಿಸಿದ ಅಕ್ಕಪಕ್ಕದ ಮನೆಯವರು ಸುಬ್ಬಣ್ಣ ರವರಿಗೆ ತಿಳಿಸಿದರು.
ಅಕ್ಕ ಪಕ್ಕದ ರೈತರು ಬೆಂಕಿ ನಂದಿಸಲು ಎತ್ನಿಸಿದರೂ ಸಫಲರಾಗಲಿಲ್ಲ, ಇದರಿಂದಾಗಿ ಸುಮಾರು ಏಳು ಎಂಟು ರಾಸುಗಳಿಗೆ ಮೇವಿನ ಸಮಸ್ಯೆ ಎದುರಾಗಿದೆ, ಆಕಸ್ಮಿಕ ಬೆಂಕಿ ಅವಘಡದಿಂದ ನಷ್ಟ ಉಂಟಾಗಿದೆ ಎಂದು ರೈತರಾಗ ಸುಬ್ಬಣ್ಣ ರವರು ತಿಳಿಸಿದರು.
ವರದಿ :ಸ್ವಾಮಿ ಬಳೇಪೇಟೆ