ಸುಬ್ರಹ್ಮಣ್ಯ ಸ್ವಾಮಿ ಜಾತ್ರೆ ಮಹೋತ್ಸವ

Bharath Vaibhav
ಸುಬ್ರಹ್ಮಣ್ಯ ಸ್ವಾಮಿ ಜಾತ್ರೆ ಮಹೋತ್ಸವ
WhatsApp Group Join Now
Telegram Group Join Now

ತುಮಕೂರು : ಪಾವಗಡ ತಾಲೂಕಿನಲ್ಲಿ ದಿನಾಂಕ 5/01/25 ಭಾನುವಾರ ರಂದು ನಾಗಲಮಡಿಕೆ ಗ್ರಾಮದಲ್ಲಿರುವ ಸುಬ್ರಹ್ಮಣ್ಯ ಸ್ವಾಮಿ ಜಾತ್ರೆ ಮಹೋತ್ಸವಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಂಧ್ರ ಪ್ರದೇಶ ಹಾಗೂ ಕರ್ನಾಟಕದಿಂದ ಪಾವಗಡ ತಾಲೂಕಿನಲ್ಲಿ ಬರುವ ಹಳ್ಳಿಗಳಿಂದ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭಕ್ತಾದಿಗಳು ಬಂದಿದ್ದಾರೆ ಜಾತ್ರೆಯ ವೇಳೆಯಲ್ಲಿ ಪಾವಗಡ ತಾಲ್ಲೂಕಿನ ಮಾನ್ಯ ಶಾಸಕರಾದ ಹೆಚ್ ವಿ ವೆಂಕಟೇಶ್ ರವರು ಮತ್ತು ಮಾಜಿ ಸಚಿವರಾದ ವೆಂಕಟರಮಣಪ್ಪ ನವರು ಹಾಗೂ ನಾಗಲಮಡಿಕೆ ಹೋಬಳಿಯ ಪಕ್ಕದಲ್ಲಿರುವ ಆಂಧ್ರ ರಾಜ್ಯ ದಲ್ಲಿರುವ ರಾಪ್ತಾಡು ವಿಧಾನಸಭೆ ಕ್ಷೇತ್ರದ ಮಾಜಿ ಸಚಿವರು ಹಾಗೂ ಹಾಲಿ ಶಾಸಕಿ ಪರಿಟಾಲ ಸುನೀತಾ ರವರು ಸುಬ್ರಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಸುಬ್ರಹ್ಮಣ್ಯ ಸ್ವಾಮಿಯ ಬ್ರಹ್ಮ ರಥೋತ್ಸವಕ್ಕೆ ಚಾಲನೆ ನೀಡಿ ಪಾವಗಡ ತಾಲೂಕಿನ ಭಕ್ತಾದಿಗಳಿಗೆ ಒಳ್ಳೆಯದಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರು.

ಈ ಇದೇ ಸಂದರ್ಭದಲ್ಲಿ ಜಾತ್ರೆಗೆ ಆಗಮಿಸಿದವರು ADC ತಿಪ್ಪೇಸ್ವಾಮಿ ರವರು ಮಧುಗಿರಿ ವಿಭಾಗ ದಂಡಾಧಿಕಾರಿಗಳರಾದ ಗುಂಟೂರು ಶಿವಪ್ಪ ಪಾವಗಡ ತಾಲ್ಲೂಕಿನ ತಹಸಿಲ್ದಾರ್ ವರದರಾಜ್. ಗ್ರಾಮಾಂತರ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಗಿರೀಶ್.ಪಾವಗಡ ತಾಲೂಕಿನ ಪುರಸಭೆ ಅಧ್ಯಕ್ಷರಾದ ರಾಜೇಶ್. ಪುರಸಭೆ ಸದಸ್ಯರು ಹಾಗೂ ಪಾವಗಡ ತಾಲ್ಲೂಕಿನ ಕಾಂಗ್ರೆಸ್ ಪಕ್ಷದ ನಗರ ಬ್ಲಾಕ್ ಅಧ್ಯಕ್ಷರಾದ ಸುದೇಶ್ ಬಾಬು. ಪುರಸಭೆ ಸದಸ್ಯರು ರವಿ. ಕಾಂಗ್ರೆಸ್ ಪಕ್ಷದ ಮುಖಂಡರುಗಳರಾದ. ಪರಿಟಾಲ ನಾನಿ. ವಲ್ಲೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು ಚನ್ನಕೇಶವ. ಶಂಕರ್ ರೆಡ್ಡಿ. ನಾಗೇಂದ್ರ ರಾವ್. ಇನ್ನು ಮುಂತಾದ ಮುಖಂಡರು ಉಪಸ್ಥಿತರಿದ್ದರು.

ವರದಿ: ಶಿವಾನಂದ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!