ತುರುವೇಕೆರೆ: ದಾನ ಮಾಡುವ ಕೈಗಳು ಜಾತಿ, ಧರ್ಮದ ಬಂಧನದಲ್ಲಿರಬಾರದು, ಜಾತ್ಯಾತೀತ ಹಾಗೂ ನಿಸ್ವಾರ್ಥ ಮನೋಭಾವದಿಂದ ಮಾಡಿದ ಸೇವೆ ಸಾರ್ಥಕ ಎಂದು ಜಿಲ್ಲೆ 317 ಜಿ ಜಿಲ್ಲಾ ರಾಜ್ಯಪಾಲ ಲ|| ಎನ್.ಸುಬ್ರಮಣ್ಯ ಅಭಿಪ್ರಾಯಪಟ್ಟರು.
ಪಟ್ಟಣದ ಚೌದ್ರಿ ಕನ್ವೆನ್ಷನ್ ಹಾಲ್ ನಲ್ಲಿ ಲಯನ್ಸ್ ಕ್ಲಬ್ ಹಾಗೂ ಲಯನ್ ಛಾರಿಟಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ 2024-25 ನೇ ಸಾಲಿನ ನೂತನ ಲಯನ್ಸ್ ನೂತನ ಸದಸ್ಯರುಗಳ ಪ್ರತಿಜ್ಞಾವಿಧಿ ಬೋಧನಾ ಸಮಾರಂಭದಲ್ಲಿ ನೂತನ ಸದಸ್ಯರಿಗೆ ಪ್ರಮಾಣ ವಚನ ಭೋಧಿಸಿ ಮಾತನಾಡಿದ ಅವರು, ನಮ್ಮ ಜಾತಿ, ಧರ್ಮದವರಿಗೆ ಮಾತ್ರ ದಾನ ಮಾಡಬೇಕೆಂಬ ಮನೋಭಾವ ಬಂದರೆ ಅದು ಸ್ವಾರ್ಥವಾಗುತ್ತದೆಯೇ ಹೊರತು ಸೇವೆ ಅನಿಸಿಕೊಳ್ಳುವುದಿಲ್ಲ ಹಾಗೂ ದಾನ ಮಾಡಿದ ಫಲವೂ ದೊರಕುವುದಿಲ್ಲ. ದಾನ ಅಥವಾ ಸೇವೆ ಯಾವಾಗಲೂ ಮನುಷ್ಯತ್ವ, ಮಾನವೀಯತೆಯ ಮೌಲ್ಯಗಳಿಂದ ಕೂಡಿರಬೇಕು. ಜಾತಿ, ಧರ್ಮ ಮೀರಿದ ಪ್ರಾಮಾಣಿಕತೆ ನಮ್ಮ ಹೃದಯದಲ್ಲಿದ್ದಾಗ ಮಾತ್ರ ನಾವು ಮಾಡುವ ಸೇವೆಗೆ ಫಲ ದೊರೆಯುತ್ತದೆ ಎಂದರು.
ಪ್ರಪಂಚದಾದ್ಯಂತ ಲಕ್ಷಾಂತರ ಸದಸ್ಯರನ್ನು ಹೊಂದಿರುವ ಲಯನ್ಸ್ ಕ್ಲಬ್ ಅತ್ಯುತ್ತಮ ಸೇವೆ ಸಲ್ಲಿಸುತ್ತಿದ್ದು, ಸೇವೆಯಲ್ಲಿ ಉನ್ನತ ಸ್ಥಾನದಲ್ಲಿದೆ. ಗ್ರಾಮೀಣ ಪ್ರದೇಶದಲ್ಲಿ ತುರುವೇಕೆರೆ ಲಯನ್ಸ್ ಕ್ಲಬ್ ಯಾವಾಗಲೂ ಸಮಾಜಮುಖಿ ಚಟುವಟಿಕೆಗಳನ್ನು ಮಾಡುತ್ತಾ ಉತ್ತಮ ಹೆಸರನ್ನು ಗಳಿಸಿದೆ. ಲಯನ್ಸ್ ಛಾರಿಟಬಲ್ ಟ್ರಸ್ಟ್ ಮೂಲಕ ಲಯನ್ಸ್ ಭವನ ನಿರ್ಮಾಣ, ಡಯಾಲಿಸಿಸ್ ಕೇಂದ್ರ, ಕಣ್ಣಿನ ಆಸ್ಪತ್ರೆಯಂತಹ ಶ್ವಾಶ್ವತ ಕಾರ್ಯಗಳಿಗೆ ಮುಂದಾಗಿರುವುದು ಹೆಮ್ಮೆಯ ಸಂಗತಿ ಎಂದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಹೆಚ್.ಆರ್.ರಂಗನಾಥ್ ಅಧ್ಯಕ್ಷತೆ ವಹಿಸಿದ್ದರು. ವ್ಯಕ್ತಿತ್ವ ವಿಕಸನ ತರಭೇತುದಾರ ಚೇತನ್ ರಾಮ್ ಕಾರ್ಯಕ್ರಮ ಉದ್ಘಾಟಿಸಿದರು. ನೂತನ ಸದಸ್ಯರುಗಳಾದ ಡಾ.ಶಶಿಧರ್.ಎಂ., ಪತ್ರಕರ್ತ ಸಚಿನ್ ಮಾಯಸಂದ್ರ, ಟಿ.ಎನ್.ಧನಪಾಲ್ (ತಂಡಗ ರಾಜಿ), ಎಸ್.ಆರ್.ರಂಗನಾಥ್, ಎಸ್.ಯೋಗೀಶ್, ಡಿ.ಪಿ.ವೇಣುಗೋಪಾಲ್ ಅವರಿಗೆ ಜಿಲ್ಲಾ ರಾಜ್ಯಪಾಲ ಲ|| ಎನ್.ಸುಬ್ರಮಣ್ಯ ಪ್ರಮಾಣ ವಚನ ಭೋದಿಸಿದರು. ಪ್ರಾಂತ್ಯಾಧ್ಯಕ್ಷ ನೃಪೇಂದ್ರ, ಜಿಎಂಟಿ ಕೋ ಆರ್ಡಿನೇಟರ್ ವೆಂಕಟೇಶ್, ವಲಯಾದ್ಯಕ್ಷ ಕೆ.ಲೋಕೇಶ್, ಟ್ರಸ್ಟ್ ಅಧ್ಯಕ್ಷ ಪಿ.ಹೆಚ್.ಧನಪಾಲ್, ಸ್ವಾಗತ ಸಮಿತಿ ಅಧ್ಯಕ್ಷ ಕೈಲಾಸ್, ಕಾರ್ಯದರ್ಶಿ ಸುರೇಶ್, ಖಜಾಂಚಿ ರಾಮಕೃಷ್ಣ ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್