ಅರಸೀಕೆರೆ: ನಮ್ಮ ಗುರಿ ನಿರೀಕ್ಷೆ ಹೆಮ್ಮರದಂತೆ ಇದ್ದಾಗ ಮಾತ್ರ ನಮ್ಮ ಶ್ರಮ ಸಾರ್ಥಕತೆಯಾಗಿ ಗುರಿ ತಲುಪಲು ಸಾಧ್ಯ ಎಂದು ಅಖಿಲ ಭಾರತೀಯ ಜೀವ ವಿಮಾ ನಿಗಮದ ಮ್ಯಾನೇಜಿಂಗ್ ಡೈರೆಕ್ಟರ್ ರತ್ನಾಕರ್ ಪಟ್ನಾಯಕ್ ಅಭಿಪ್ರಾಯ ಪಟ್ಟರು.

2024 ಮತ್ತು 2025 ಸಾಲಿನ ಶೈಕ್ಷಣಿಕ ವರ್ಷದಲ್ಲಿ ಅರಸೀಕೆರೆ ಶಾಖೆ ಭಾರತದಲ್ಲೇ ಪ್ರಥಮ ಸ್ಥಾನ ಪಡೆದು ಹಿನ್ನೆಲೆಯಲ್ಲಿ ಅರಸೀಕೆರೆ “ಎಂ,ಡಿ,ವಿಜಿಟಿಂಗ್” ಕಾರ್ಯಕ್ರಮ ದಲ್ಲಿ ಭಾಗವಹಿಸಿ ಮಾತನಾಡಿದ ಅವರು: ಪ್ರತಿಯೊಬ್ಬ ಪ್ರತಿನಿಧಿ ಯು ಸಾಮಾನ್ಯ ದಿಲ್ಲಿ ಸಾಮಾನ್ಯ ರಾಗಿ ವೃತ್ತಿ ಬದುಕು ಸಾಗಿಸುತ್ತಿದ್ದಾರೆ ಯಾವುದೇ ಮಹಾರಾಜ,ಅಥವಾ, ನವಾಬ ಅಥವಾ ಆರ್ಥಿಕ ಸ್ಥಿತಿ ಉತ್ತಮ ಇರುವ ವ್ಯಕ್ತಿ ಈ ಸಾಮಾಜಿಕ ಕಳಕಳಿಗೆ ಬರಲು ಸಾಧ್ಯವಿಲ್ಲ ಅದರಿಂದ ತಾವು ಬಯಸಿ ಬಂದ ಈ ವೃತ್ತಿ ಪ್ರವೃತ್ತಿಯಾ ಗಿಸಿ ಕೊಂಡು ಬರುತ್ತೀರುವ ವರಮಾನ ದ್ವಿಗುಣ ಗೊಳಿಸಿ ಮತ್ತೆ ನಾನು ನನ್ನ ಹೆಂಡತಿಯ ಜೊತೆ ಅರಸೀಕೆರೆ ಶಾಖೆಗೆ ಬರುವಹಾಗೆ ಮಾಡುವ ಸಾಧನೆ ನಿಮ್ಮೇಲರ ದಾಗಿದೆ ನಿಮ್ಮ ಶಾಖೆ ಭೇಟಿ ನೀಡಿದ್ದು ನನಗೆ ಸಂತೋಷ ತಂದಿದೆ ಎಂದು ಹೇಳಿದರು ಸಮಾರಂಭದಧಲ್ಲಿ ದಕ್ಷಿಣ ಮಧ್ಯ ವಲಯ ಮಟ್ಟದ ಅಧಿಕಾರಿ, ಪುನೀತ್ ಕುಮಾರ್ ಮಾತನಾಡಿ: ಈ ಶಾಲೆಯಲ್ಲಿ ಆನಂದದಲ್ಲಿ ಶೇಕಡಾ 40% ಪಾಲಿಸಿ ದಾಖಲಿಸಿದ್ದಾರೆ ಹಾಗು 2024/25 ದಲ್ಲಿ ಎಲ್,ಐ,ಸಿ, ಯಾ ಏಳು ಪಿಲ್ಲರ್ ನಲ್ಲಿ ಅತ್ಯುತ್ತಮ ನಮ್ಮ ದೇಶಕ್ಕೆ ಮೂರನೇ ಸ್ಥಾನಕ್ಕೆ ತಂದಿರುವ ನಿಮಗೆಲ್ಲ ಅಭಿನಂದನೆಗಳು ಎಂದು ಹೇಳಿದರು: ಈ ಸಂದರ್ಭದಲ್ಲಿ ಮೈಸೂರಿನ ವಿಭಾಗೀಯ ವ್ಯವಸ್ಥಾಪಕಿ ಶ್ರೀ ಮತಿ ಕೃಷ್ಣವೇಣಿ ಮಾತನಾಡಿ ಅರಸೀಕೆರೆ ಶಾಖೆಯಲ್ಲಿ ಬಸವರಾಜು, ಪ್ರಶಾಂತ್ ನಾಯ್ಕ, ಇಬ್ಬರು M,D,R,T , ಹಾಗೂ 11ಜನ ಶತಕ ವೀರರು,ಮೂರುದಿನ ಕೋಟಿವೀರರಾಗಿ ,”ಮ್ಯಾನ್ ಮಿಲಿಯಂ ಡೇ” ಗಿನ್ನಿಸ್ ದಾಖಲೆ ಮಾಡಲು ಕಾರಣಿ ಭೊತರಾದ ಅರಸೀಕೆರೆ ನನ್ನ ಎಲ್ಲಾ ಅಭಿವೃದ್ಧಿ ಅಧಿಕಾರಿಗಳು,ಸಿ,ಎಲ್, ಐ,ಎ, ಮಿತ್ರರು ಹಾಗು 449 ಜನ ಪ್ರತಿನಿಧಿ ಮಿತ್ರರಿಗೆ ಶುಭಾಶಯ ಕೋರಿದರು
: ಈ ಸಂದರ್ಭದಲ್ಲಿ ಕೇವಲ 11ತಿಂಗಳು12 ದಿನ ಶಾಖೆಯಲ್ಲಿ ಕಾರ್ಯ ನಿರ್ವಹಿಸಿ ದಾಖಲೆಗೆ ಕಾರಣರಾದ ಹಾಗೂ ಹುಬ್ಬಳ್ಳಿ ಗೆ ವರ್ಗಾವಣೆ ಹೊಂದಿದ್ದ ಬಲವಂತ ಮಾರುತಿ ಯವರಿಗೆ ಸನ್ಮಾನಿಸಲಾಯಿತು
ಈ ಸಂದರ್ಭದಲ್ಲಿ ಶಾಖಾ ಪ್ರಬಂಧಕ ಋಷಿ ಚರಣ್ ಮಾತನಾಡಿ ಕಳೆದ ವರ್ಷದ ಹಾಗೆ ಈ ಬಾರಿ ನೀಡಿರುವ ಗುರಿಯನ್ನು ಡಿಸೆಂಬರ್ ತಿಂಗಳಲ್ಲಿ ಪ್ರಗತಿ ಮುಟ್ಟಿತ್ತೇವೆ ಮತ್ತೋಮ್ಮೆ ನಮ್ಮ ಮ್ಯಾನೇಜಿಂಗ್ ಡೈರೆಕ್ಟರ್ ರತ್ನಾಕರ್ ಪಟ್ನಾಯಕ್ ರವರು ನಮ್ಮ ಶಾಖೆ ಗೆ ಬರಬೇಕು ಇದಕ್ಕೆ ನಮ್ಮ ಪ್ರತಿನಿಧಿ ಮಿತ್ರರು ಸಹಕಾರ ಅತ್ಯಗತ್ಯ ಎಂದು ಹೇಳಿದರು.
ಸಾಧನೆ ಮಾಡಿದ ಎಲ್ಲರಿಗೂ ಸನ್ಮಾನಿಸಲಾಯಿತು, ಕಾರ್ಯಕ್ರಮ ದ ಮೂದಲು ನಗರದ ಪ್ರವಾಸಿ ಮಂದಿರ ರಿಂದ ಅಲಂಕೃತ ತೆರೆದ ವಾಹನದಲ್ಲಿ ಗಣ್ಯರ ಮೆರವಣಿಗೆ ಯಲ್ಲಿ ರಾಷ್ಟ್ರೀಯ ಹೆದ್ದಾರಿ 206 ದಿಲ್ಲಿ ವೀರಗಾಸೆ ನೃತ್ಯ ದೊಂದಿಗೆ ಮಹಿಳಾ ಪ್ರತಿನಿಧಿ ಬೀಮಾ ಸಖಿ,ಹಾಗು ಏಜೆಂಟರು, ಸಿಬ್ಬಂದಿ ವರ್ಗ ಅಭಿವೃದ್ಧಿ ಅಧಿಕಾರಿಗಳು ಸಿ,ಎಲ್,ಐ,ಎಂ,ಮಿತ್ರರು ಕುಣಿದು ಕುಪ್ಪಳಿಸಿ ಪೊರ್ಣ ಕುಂಭ ಸ್ವಾಗತಿಸಿದರು: ಈ ಸಂದರ್ಭದಲ್ಲಿ ಹಿರಿಯ ಪ್ರತಿನಿಧಿ ಮಿತ್ರರಾದ ಸೇತುರಾಮ್,ಮಂಜುನಾಥ್, ಚಂದ್ರು,ರವರಿಂದ ದೀಪ ಬೆಳಗಿಸಿದರು.
: ಈ ಸಂದರ್ಭದಲ್ಲಿ ಮೈಸೂರಿನ ಮಾರ್ಕೆಟಿಂಗ್ ಮ್ಯಾನೇಜರ್,ಜೀವನ್ ಕುಮಾರ್, ಮ್ಯಾನೇಜಿಂಗ್ ಸೇಲ್ಸ್ ಗುರುರಾಜ್,ಉಪ ಶಾಖಾಧಿಕಾರಿ ಶ್ರೀನಿವಾಸನ್, ಇತರರು ಉಪಸ್ಥಿತರಿದ್ದರು
ಪೋಟೋ:- ಅರಸೀಕೆರೆ ಜೀವ ವಿಮಾ ನಿಗಮದ 2024/25 ರ ಶೈಕ್ಷಣಿಕ ವರ್ಷದಲ್ಲಿ ಭಾರತದಲ್ಲೇ ಮೂದಲ ಶಾಖೆ ದಾಖಲೆ ಮಾಡಿರುವ ಹಿನ್ನೆಲೆಯಲ್ಲಿ ಭಾರತೀಯ ಜೀವ ವಿಮಾ ನಿಗಮದ ಮ್ಯಾನೇಜಿಂಗ್ ಡೈರೆಕ್ಟರ್ ರತ್ನಾಕರ್ ಪಟ್ನಾಯಕ್ ಮಾತನಾಡಿದರು,ಈ ಸಂದರ್ಭದಲ್ಲಿ ದಕ್ಷಿಣ ವಲಯ ಮಟ್ಟದ ಅಧಿಕಾರಿ ಪುನೀತ್ ಕುಮಾರ್, ಕೃಷ್ಣವೇಣಿ, ಜೀವನ್ ಕುಮಾರ್,ಋಷಿ ಚರಣ್, ಹಾಜರಿದ್ದರು.
ವರದಿ: ರಾಜು ಅರಸಿಕೆರೆ




