ಬೆಳಗಾವಿ: ನೇಣು ಬಿಗಿದುಕೊಂಡು ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು.
ವಸತಿ ನಿಲಯದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ರಾತ್ರಿ ನಡೆದಿದೆ.
ಪ್ರಜ್ವಲ್ ಕುಪ್ಪಾನಟ್ಟಿ(20) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಸೋಮವಾರ ಕಾಲೇಜು ಹೋಗದೆ ರೂಮ್ ನಲ್ಲೇ ಇದ್ದ ಪ್ರಜ್ವಲ್. ಸಂಜೆ ಸ್ನೇಹಿತ ಬಂದು ರೂಮ್ ಬಾಗಿಲು ಬಡಿದಿದ್ದ. ಈ ವೇಳೆ ಬಾಗಿಲು ತೆಗೆಯದಿದ್ದಾಗ ಆತ್ಮಹತ್ಯೆ ಮಾಡಿಕೊಂಡಿದ್ದು ಬೆಳಕಿಗೆ ಬಂದಿದೆ.
ವರದಿ : ರಾಜು ಮುಂಡೆ