ಇಳಕಲ್ : ತಾಲೂಕಿನ ಹಿರೇ ಓತಗೇರಿ ಗ್ರಾಮದ ಯಶಸ್ವಿನಿ ಎಂ.ಜಿ ವಿದ್ಯಾರ್ಥಿನಿಯು sslc ಯಲ್ಲಿ 625 ಕ್ಕೆ 613 ಅಂಕಗಳನ್ನು ಪಡೆದು 98 ಪ್ರತಿಶತ ಅಂಕವನ್ನು ಪಡೆಯುವ ಮೂಲಕ ಗ್ರಾಮಕ್ಕೆ ಕೀರ್ತಿಯನ್ನು ತಂದಿದ್ದಾರೆ.
ಹೀರೆ ಓತಗೇರಿ ಗ್ರಾಮದವರಾಗಿದ್ದಾರೆ. ವಿದ್ಯಾಭ್ಯಾಸಕ್ಕಾಗಿ ಚಿತ್ರದುರ್ಗದಲ್ಲಿ ಇದ್ದು ,ಅಲ್ಲೆ ವ್ಯಾಸಂಗ ಮಾಡಿ ಉತ್ತಮ ಅಂಕ ಪಡೆದಿದ್ದಾರೆ.
ಮೂರು ವಿಷಯಗಳಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆದಿದ್ದಾಳೆ. ಉತ್ತಮ ಅಂಕ ಪಡೆದ ಮೊಮ್ಮಗಳಿಗೆ ಅವರ ತಾತ ಹನಮಗೌಡ ಬಾವಿಕಟ್ಟಿ ,ತಂದೆ ಮಲ್ಲನಗೌಡ, ತಾಯಿ ಸುನಂದಾ,ಮಾವನವರಾದ ಶರಣಗೌಡ ಕಂದಕೂರ ಅಭಿನಂದನೆ ಸಲ್ಲಿಸಿದ್ದಾರೆ




